Wednesday, October 30, 2024

ಉತ್ತರ ಭಾರತ ಪ್ರವಾಸ - ಮಮತಾ ಭಾಮಾ

ಉತ್ತರ ಭಾರತದ ಒಂದು ಅದ್ಬುತ ಪ್ರವಾಸದ ಸುಮಧುರ ಘಳಿಗೆಗಳನ್ನು ನೆನಪುಗಳಾಗಿ ಹಿಡಿದಿಡುವತ್ತ ಒಂದು ಪ್ರಯತ್ನ ಈ ಬರಹ

'ಹಿಂದು ಧರ್ಮವೇ ಭಾರತದಲ್ಲಿ ಇರಲಿಲ್ಲ. ನಮ್ಮ ಪವಿತ್ರ ಗ್ರಂಥಗಳೆಲ್ಲಾ ಒಂದು ಕಾಲ್ಪನಿಕ ಸೃಷ್ಟಿ' ಅಂತ ಲೇವಡಿ ಮಾಡುವ ಅಧಮರಿಗೆ ಉತ್ತರಿಸಲು ಬೇಕಾದ ಸಾಕ್ಷಿಗಳ ಸಂಗ್ರಹಣೆ ಮತ್ತು ಹಂಚಿಕೊಳ್ಳುವುದು ಬರಹದ ಉದ್ದೇಶ ಸನಾತನ ಧರ್ಮವನ್ನು ಹೀಯಾಳಿಸಿ ತಮ್ಮ ಇರುವಿಕೆ ಪ್ರದರ್ಶಿಸುವ ಪ್ರಚಾರ ಪ್ರಿಯರ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿದೆ.ಇಂದಿನ ಯುವ ಪೀಳಿಗೆ ಧರ್ಮ, ಸಂಸ್ಕೃತಿಯ ಬಗ್ಗೆ ಉದಾಸೀನ ತೋರುತ್ತಿರುವುದು ಆತಂಕಕಾರಿ ವಿಷಯವೂ ಹೌದು. ಪ್ಲ್ ಯಾರನ್ನೋ ಓಲೈಸಲು ತಮ್ಮದೇ ಧರ್ಮವನ್ನು ಟೀಕಿಸುವ ಬಕೆಟ್ ಗಿರಾಕಿಗಳಿಗೆ ಉತ್ತರಿಸಬೇಕಾದರೆ ನಮ್ಮ ತೀರ್ಥಕ್ಷೇತ್ರಗಳ ಭೇಟಿಯಾಗಬೇಕು ಮತ್ತು ಅದರ ಸ್ಥಳ ಮಹಾತ್ಮೆಯನ್ನು ತಿಳಿಯಬೇಕು.ಸಂದರ್ಭೋಚಿತ ಸಾಕ್ಷಿಗಳ ಕಲೆ ಹಾಕಿ ಇತರರಿಗೂ ತಿಳಿಸಬೇಕು. ಮಾಹಿತಿ ಅರಿತು ನಿಜಕ್ಕೂ ಚರ್ಚೆಗೆ ಕುಳಿತರೆ ಆ ಹುಚ್ಚರ ಮುಖಭಂಗ ಖಂಡಿತಾ.

ಹಿಂದೆ ಚಾರ್ ಧಾಮ್ ಬಗ್ಗೆ 5 ಕಂತುಗಳಲ್ಲಿ ಬರೆದಿದ್ದೆ. ಈ ಬಾರಿ ನಮ್ಮ ಪ್ರವಾಸ ಉತ್ತರ ಪ್ರದೇಶದ ನೈಮಿಷಾರಣ್ಯದಿಂದ ಪ್ರಾರಂಭವಾಯ್ತು, ಲಕ್ನೋ ತನಕ ವಿಮಾನ ನಂತರ ನಮ್ಮದೇ ವೈಯಕ್ತಿಕ ಸಾರಿಗೆವ್ಯವಸ್ಥೆ ಮಾಡಿಕೊಂಡಿದ್ದೆವು.

   *********************************************************************************

                                     ನೈಮಿಷಾರಣ್ಯ

ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಥಳವೇ ಈ ನೈಮಿಷಾರಣ್ಯ.ಹಿಂದೂಗಳಿಗೆ ಒಂದು ಪವಿತ್ರ ಜಾಗ ಮತ್ತು ಶಕ್ತಿ ಪೀಠ, ಅಂದರೆ ದಕ್ಷಯಜ್ಞದ ನಂತರ ಅರೆಬೆಂದ ದಾಕ್ಷಯಣಿಯ ದೇಹವನ್ನು ಶಿವನು ತನ್ನ ಭುಜದ ಮೇಲೆ ಹೊತ್ತು ತಿರುಗುವಾಗ ದೇಹದ ಒಂದು ಭಾಗ ಇಲ್ಲಿ ಬಿದ್ದುದರಿಂದ  ಅದು ಶಕ್ತಿ, ದಾಕ್ಷಯಣಿಯ ದೇಹ 52 ಭಾಗ ಭಾರತದ ಹಲವೆಡೆ ಬಿದ್ದು, ಆ ಸ್ಥಳ ಶಕ್ತಿ ಪೀಠಗಳೆಂದು ಪ್ರಸಿದ್ಧವಾಗಿದೆ.  ಅಷ್ಟಭುಜದ ಲಲಿತಾ ದೇವಿ ಸನ್ನಿಧಾನವು ಇಲ್ಲಿದೆ. ದೇಗುಲದ ಮುಂದೆ 40 ಅಡಿಯ ವಿಷ್ಣು ಮತ್ತು ಮುಂದೆ ರುದ್ರದೇವರ ಪ್ರತಿಮೆಯು ಇದೆ. ನೈಮಿಷಾರಣ್ಯ ಅಂದರೆ ಅದೊಂದು ಕಾಡು ಇರ್ಬೇಕು ಅಂದು ಕೊಳ್ಳುತ್ತೇವೆ. ನೇಮಿ ಎನ್ನುವ ರಾಕ್ಷಸನ ಹರಣವಾದದ್ದು ಇಲ್ಲಿ, ದೇವತೆಗಳ ಬೇಡಿಕೆ ಮೇರೆಗೆ ಬ್ರಹ್ಮ ದೇವ ಚಕ್ರವನ್ನು ಬಿಟ್ಟಾಗ ಅದು ಬಂದು ನಿಂತ ಸ್ಥಳವೇ ಈ ನೈಮಿಷ. ಇಲ್ಲಿಯೇ ವ್ಯಾಸರಿಂದ ಪುರಾಣ ಭಾಗವತ ಮತ್ತು ನಾಲ್ಕು ವೇದಗಳ ಸೃಷ್ಟಿಯಾದದ್ದು.ಬ್ರಹ್ಮನ ಚಕ್ರ ಬಿದ್ದಲ್ಲಿ ಚಕ್ರತೀರ್ಥ ಎನ್ನುವ ಕೊಳವಿದೆ ಚಕ್ರದಾಕಾರದಲ್ಲಿಯೇ ಇದೆ.ಇಲ್ಲಿ ಮಿಂದರೆ ಹಲವು ಜನ್ಮಗಳ ಪಾಪ ಕಳೆಯುತ್ತದೆ. ಋಷಿ ಮುನಿಗಳು ನಡೆದಾಡಿದ ಜಾಗವಾದ್ದರಿಂದ ಒಂದು ಹೆಜ್ಜೆ ನಡೆದರೂ ಹಲವು ಅಶ್ವಮೇಧಯಾಗ ಮಾಡಿದ ಪುಣ್ಯ ದೊರೆಯುತ್ತದೆ ಎಂಬುದು ನಂಬಿಕೆ.ಚಕ್ರದ ಮದ್ಯದ ಕಡ್ಡಿಗಳು(spokes)ಗಳಿಗೆ ಸಂಸ್ಕೃತದಲ್ಲಿ ನೇಮಿ ಅಂತ ಹೆಸರು.ಮೇಲಿನ ಎಲ್ಲಾ ಕಾರಣಕ್ಕೆ ನೈಮಿಶಾರಣ್ಯ ಎನ್ನುವ ಹೆಸರು ಬಂದಿದೆ. ಇಲ್ಲಿ ಚತುರ್ವರ್ಣದ ಎಲ್ಲಾ ಜನರು ನಮ್ಮ ಹಿರಿಯರ ಶ್ರದ್ಧಾ ಕರ್ಮ ಮಾಡುವ ವಾಡಿಕೆ ಇದೆ.

ವ್ಯಾಸಗದ್ಧಿ

ಇಲ್ಲಿ ವ್ಯಾಸಗದ್ಧಿ ಎನ್ನುವ ಸ್ಥಳವಿದೆ. ವಟ ವೃಕ್ಷದ ಕೆಳಗೆ ವ್ಯಾಸರು ಕುಳಿತು ನಾಲ್ಕು ವೇದಗಳನ್ನು ವಿಂಗಡಿಸುತ್ತಾರೆ,ಅಷ್ಟ ಪುರಾಣಗಳು, ಶುಕಾಚಾರ್ಯರು ಭಾಗವತವನ್ನು ಉಪದೇಶಿಸಿದ್ದು ಇಲ್ಲೇ. ನರ ನಾರಾಯಣರು ಒಂದಾಗಿರುವ ವೃಕ್ಷವನ್ನು ನೋಡಬಹುದು(ಪಟ ಲಗತ್ತಿಸಿ) ಇನ್ನೊಂದು ವಿಶೇಷ ಶತಾರೂಪದೇವಿ ವೈವತ್ಸತ ಮನುವಿನೊಂದಿಗೆ (ಸೂರ್ಯ ಪುತ್ರ)ಸೇರಿ ಮನು ಕುಲದ ಆರಂಭದದ್ದು ಇಲ್ಲೇ.

ದಧೀಚಿ ಕುಂಡ

ವೃತ್ರಾಸುರ (ಚಿತ್ರಕೇತು ಪಾರ್ವತಿ ಶಾಪದಿಂದ ಅಸುರನಾದದ್ದು) ಎಂಬ ಒಬ್ಬ ಮಹಾನ್ ತಪಸ್ವಿ ಇದ್ದ ಅವನನ್ನು ಕೊಲ್ಲಲು ಯಾವುದೇ ಆಯುಧಗಳಿಂದ ಸಾಧ್ಯವಿರಲಿಲ್ಲ.ಅದಕ್ಕಾಗಿ ದಧೀಚಿ ಎಂಬ ಮಹರ್ಷಿ ತನ್ನ ಬೆನ್ನು ಮೂಳೆಯನ್ನು ನೀಡಿ ವಿಶೇಷವಾದ ವಜ್ರಾಯುಧವನ್ನು ಮಾಡಿಕೊಳ್ಳಲು ತಿಳಿಸುತ್ತಾರೆ.  ಬೆನ್ನು ಮೂಳೆಗೆ ಅಘಾದ ಶಕ್ತಿ ತುಂಬಲು ಇಲ್ಲಿ ಎಲ್ಲಾ ನದಿಗಳ ನೀರು ಅಂದರೆ ತೀರ್ಥವನ್ನು ದೇವತೆಗಳು ತಂದು ಈ ಕುಂಡವನ್ನು ನಿರ್ಮಿಸುತ್ತಾರೆ. ಅದಕ್ಕಾಗಿಯೇ ಈ ಕುಂಡವನ್ನು ಮಿಶ್ರತೀರ್ಥ ಅಂತಲೂ ಕರೆಯುತ್ತಾರೆ. ಈ ಕುಂಡದಲ್ಲಿ ಸ್ನಾನ ಮಾಡಿದರೆ ಮೂಳೆಗಳು ವಜ್ರದಷ್ಟು ಗಟ್ಟಿಯಾಗುತ್ತದೆ ಎಂಬುದು ಪ್ರತೀತಿ.ಬ್ರಹ್ಮದೇವನ ಆದೇಶದ ಮೇರೆಗೆ ರಚಿತವಾದ ನಾರಾಯಣ ಕವಚವನ್ನು ಪಠಿಸಿದರೆ  ಈಗಲೂ ಮೂಳೆಗಳ ಸಮಸ್ಯೆ ಇರುವವರಿಗೆ ಉತ್ತಮ ಫಲ ಲಭ್ಯವಾಗುತ್ತದೆ.  ದಧೀಚಿ ಮಹರ್ಷಿಯ ಬೆನ್ನು ಮೂಳೆಯಿಂದ  ಮಾಡಿದ ವಜ್ರಾಯುಧದಿಂದ ವೃತ್ತಾಸುರನ ಸಂಹಾರವಾಗುತ್ತದೆ.

ಇದಿಷ್ಟೂ ನೈಮಿಷಾರಣ್ಯದ ವಿಶೇಷ.




*********************************************************************************

                                                                     ಅಯೋಧ್ಯಾ

ಒಂದು ದೊಡ್ಡ ಐತಿಹಾಸಿಕ ವಿಜಯ,ಅಯೋಧ್ಯೆಯಲ್ಲಿ ಬಾಲರಾಮನ ಸ್ಥಾಪನೆಯಾದ ಸ್ಥಳ ವೀಕ್ಷಣೆ ಮುಂದಿನ ದಿನದಲ್ಲಿ.  500 ವರ್ಷ ಕಾಲದ ಹೋರಾಟದ ನಂತರ ಸಿಕ್ಕ ಗೆಲುವು ಬಾಲ ರಾಮನನ್ನೂ ಮತ್ತೆ ಅವನದೇ ಹುಟ್ಟೂರಿನಲ್ಲಿ ಸ್ಥಾಪಿಸಿದ ರೋಮಾಂಚನದ ಘಳಿಗೆಯನ್ನು ನಾವೆಲ್ಲಾ ಸಾಕ್ಷಿಕರಿಸಿದ್ದೇವೆ ಎನ್ನುವುದೇ ಹೆಮ್ಮೆಯ ವಿಷಯ. ಪ್ರವಾಸದ ಮುಂದಿನ ತಾಣ ಅಯೋಧ್ಯಾ.

2024 ಜನವರಿ 22 ರಂದು ಒಂದು ಐತಿಹಾಸಿಕ ಗೆಲುವು ಕಂಡ ಕ್ಷಣ. ಹಿಂದೂರಾಷ್ಟ್ರದಲ್ಲಿ ನಮ್ಮ ಆರಾಧ್ಯ ದೇವ ಶ್ರೀರಾಮನ ಹುಟ್ಟಿದ ಸ್ಥಳವನ್ನು ಮತ್ತೆ ನಮ್ಮದೇ ನೆಲದಲ್ಲಿ ಹಿಂದೆ ಪಡೆಯಲು 500 ವರ್ಷಗಳ ದೀರ್ಘ ಹೋರಾಟ ಮಾಡಬೇಕಾಗಿದ್ದು ,ಹಲವು ಮಹನೀಯರ ಬಲಿದಾನವಾದದ್ದು ಒಂದು ದುರಂತ.  ನೈಮಿಷಾರಣ್ಯ ದಿಂದ ಅಯೋಧ್ಯಾ ಸುಮಾರು 220 km ಗಳ ಪ್ರಯಾಣ. ಮಾರ್ಗ ಮಧ್ಯೆ ಸರಯೂ ನದಿ ದಡದಲ್ಲಿ ರಾಮ ಲಕ್ಷ್ಮಣ ಭರತ ಶತ್ರುಘ್ನ ಸ್ನಾನದ ಘಟ್ಟವೆಂಬ ಸ್ಥಳಗಳನ್ನು ನೋಡಬಹುದಾಗಿದೆ.ಆಯೋದ್ಯೆ ತಲುಪುವ ಮುನ್ನ ನಂದಿಗ್ರಾಮ ಎನ್ನುವ ಒಂದು ಪುಟ್ಟ ಗ್ರಾಮ ಹಾದು ಹೋಗಬೇಕು ಇದು ಅಯೋದ್ಯೆಯಿಂದ 22 km ದೂರದಲ್ಲಿದೆ.

ನಂದಿಗ್ರಾಮ

ಇಲ್ಲಿ ಭರತ ಮತ್ತು ಹನುಮರ ಭೇಟಿಯಾದ ಸ್ಥಳವಿದೆ.  ಪಿತೃವಾಕ್ಯ ಪರಿಪಾಲಕ ರಾಮ ತನ್ನ ವನವಾಸಕ್ಕೆ ತೆರಳುವಾಗ ಸಹೋದರ ಭರತ ಬಹಳ ದುಃಖದಿಂದ ತಾನು ಅರಮನೆ ವಾಸ ತೊರೆದು ರಾಮನ ಪಾದುಕೆಗಳನ್ನು ಇಟ್ಟುಕೊಂಡು ನಂದಿಗ್ರಾಮದಿಂದಲ್ಲೇ ರಾಜ್ಯಭಾರ ಮಾಡುತ್ತಾ ರಾಮನ ಬರುವಿಕೆಗೆ ಕಾದು ಕುಳಿತಿದ್ದ.  ರಾಮ ಸೀತೆ ಲಕ್ಷ್ಮಣ 14 ವರ್ಷಗಳ ವನವಾಸ ಮುಗಿಸಿ ಬಾರದೇ ಹೋದರೆ ಅಗ್ನಿಪ್ರವೇಶ ಮಾಡುವುದಾಗಿ ಭರತ ತಿಳಿಸಿದ್ದನಂತೆ.  14 ವರುಷಗಳು ಮುಗಿದು ರಾವಣ ವಧೆಯಾಗಿ ಹಿಂದಿರುಗುವುದು ತಡವಾದಾಗ ಭರತ ಎಲ್ಲಿ ಅಗ್ನಿಗೆ ಆಹುತಿಯಾಗಿ ಬಿಡುತ್ತಾನೆಂದು ಶ್ರೀ ರಾಮ ಹನುಮನನ್ನು ವಾಯು ವೇಗದಲ್ಲಿ ನಂದಿ ಗ್ರಾಮಕ್ಕೆ ಹೋಗಿ "ರಾಮ ಬರುತ್ತಿದ್ದಾನೆ"ಎಂಬುದನ್ನು ತಿಳಿಸಲು ಹೇಳಿದನಂತೆ. '' ರಾಮ" ಎಂಬುದು ಮೊದಲ ಪದವಾಗಿರುವಂತೆ ನೋಡಿಕೊಳ್ಳಲುೂ ತಿಳಿಸಿದಂತೆ.  ಭಾತ್ರು ಪ್ರೇಮದ ಪರಮಾವಧಿ ಇದು ಅಲ್ಲವೇ? ಅದಕ್ಕಾಗಿಯೇ ಸಹೋದರ ಪ್ರೇಮಕ್ಕೆ ರಾಮ ಲಕ್ಷ್ಮಣ ಭಾರತರಿಗಿಂತ ಉತ್ತಮ ಉದಾಹರಣೆ ಯಾರು ಇರಲಾರರು.  ಇನ್ನೇನು ಅಗ್ನಿ ಕುಂಡಕ್ಕೆ ಹಾರಬೇಕು, ಹನುಮಂತನಿಂದ ರಾಮ ಎನ್ನುವ ಪದ ಕೇಳಿ ಹಾಗೆಯೇ ನಿಂತನಂತೆ ಭರತ.  ಪಾದುಕೆ ಮತ್ತು ರಾಮ ಸೀತಾ ಲಕ್ಷ್ಮಣ ಭರತರ ವಿಗ್ರಹ ಇಲ್ಲಿದೆ.  ಸಾಕ್ಷಿಯಾಗಿ ಇಲ್ಲೂ ಒಂದು ವಟ ವೃಕ್ಷ ದ್ವಾಪರ ಯುಗದಿಂದ ಬಿಳಲುಗಳ ಸಹಾಯದಿಂದ ಉಳಿದುಕೊಂಡಿದೆ.  ಇತಿಹಾಸ ತಜ್ಞರು ಕಾಲಗಟ್ಟವನ್ನು ದೃಢೀಕರಿಸಿದ್ದಾರೆ ಕೂಡ. ಇದಕ್ಕಿಂತ ಸಾಕ್ಷಿ ಬೇಕೆ. ತರ್ಕಕ್ಕೂ ನಿಲುಕುವಂತಹವು ಈ ಸ್ಥಳ ಮಹಾತ್ಮೆ.

ಅಯೋಧ್ಯೆಯಲ್ಲಿ ಬಿಲ್ಲಿನಾಕಾರದ ಪ್ರವೇಶದ್ವಾರ ಕಾಣಬಹುದಾಗಿದೆ. ಝಗಮಗಿಸುವ ದೀಪಳಿಂದ ಕಂಗೊಳಿಸುವ ರಸ್ತೆಗಳು.ನಮ್ಮ ಪ್ರಧಾನಿಗಳು ಅಭಿವೃದ್ಧಿಪಡಿಸಿರುವ ದ್ವಿಪಥ ಸಂಚಾರ ಯೋಗ್ಯ ಮಾರ್ಗಗಳು ರಾಮಲಲ್ಲನ ದರ್ಶನವನ್ನು ಒಂದು ಹಬ್ಬವಾಗಿಸುವಂತಿದೆ.  ಚೂಡಾಮಣಿ ಆಕಾರದ ವೃತ್ತ (ಪಟ ) ಮತ್ತು ಭಾರತದ ಗಾನ ಕೋಗಿಲೆ ಲತಾ ಮಂಗೇಶ್ರರ್ ನೆನಪಿಗಾಗಿ ವೀಣೆಯೊಂದರ ಮಾದರಿ ಇರುವ ವೃತ್ತ ಕಣ್ಮನ ಸೆಳೆಯುತ್ತದೆ.  ಶ್ರೀ ರಾಮ ಪ್ರಭು ದರ್ಶನಕ್ಕೆ ಮುಂಚೆ ಹನುಮನ ದರ್ಶನವನ್ನು ಮೂಲ ರಾಮ ಮಂದಿರದ 2 km ಅಂತರದಲ್ಲಿ ಕಾಣಬಹುದು. ಬೆಳಿಗ್ಗೆ ಸುಮಾರು 7 ಗಂಟೆಯಿಂದಲೇ ರಾಮನ ದರ್ಶನಕ್ಕೆ ಪ್ರವೇಶ ತೆರೆದಿರುತ್ತದೆ. ರಾತ್ರಿ 9 ರವರೆಗೆ ಇರುತ್ತದೆ.  ಮುಂಜಾನೆ ಬೇಗ ಹೋದಷ್ಟು ಹೆಚ್ಚಿನ ಜನಸಂದಣಿಯಿಲ್ಲದೆ ಒಂದು ಗಂಟೆ ಒಳಗೆ ದರುಶನ ಆಗುತ್ತದೆ. ಮದ್ಯೆ 12 ರಿಂದ 1 ಗಂಟೆಯವರೆಗೆ ದ್ವಾರ ಮುಚ್ಚೀರುತ್ತಾರೆ ಗಮನಿಸಿ.ಇಲ್ಲಿ ಮೂಲ ಪ್ರವೇಶದ್ವಾರದಿನದ 1.5 km ಅಷ್ಟು ಒಳಗೆ ಮತ್ತು 1 km ಪ್ರಕಾರವನ್ನು ಕಾಲ್ನಡಿಗೆಯಲ್ಲಿ ಹೋಗ ಬೇಕಿದೆ. ವೃದ್ಧರು ನಡೆಯಲಾಗದವರಿಗೆ ವಿಲ್ ಚೇರ್ಗಳು ಲಭ್ಯವಿದೆ.  ಜನಗಳ ಮದ್ಯೆ ವೇಗವಾಗಿ ನಡೆಯುವ ಅಭ್ಯಾಸ ಇರಬೇಕು. ಇನ್ನೊಂದು ಮುಖ್ಯ ಸಂಗತಿ ಎಂದರೆ ದರ್ಶನಕ್ಕೆ ಹೋಗುವಾಗ ಯಾವುದೇ ಮೊಬೈಲ್ ಎಲೆಕ್ಟ್ರಾನಿಕ್ ವಸ್ತು, ಪರ್ಸ್,ಬೆಲ್ಟ್ ಇತ್ಯದಿ ಯನ್ನೂ ಸಹ ಒಳ ಬಿಡುವುದಿಲ್ಲ.  ಲಾಕರ್ ವ್ಯವಸ್ಥೆ ಇದೆ,ಅದಕ್ಕೂ ಒಂದಷ್ಟು ಸಾಲಿನಲ್ಲಿ ನಿಂತು ಜಮೆ ಮಾಡಬೇಕು.ಸಮಯ ವ್ಯರ್ಥ ಆಗಬಾರದೆಂದರೆ ಎಲ್ಲವನ್ನೂ ನಾವು ತಂಗಿರುವ ಸ್ಥಳ ಆಥವ ನಮ್ಮದೇ ಸಾರಿಗೆ ವ್ಯವಸ್ಥೆ ಇದ್ದರೆ ಅಲ್ಲೇ ಬಿಟ್ಟು ಹೊರಡುವುದು ಉತ್ತಮ.ಕೇವಲ ಹಣ ಮಾತ್ರ ತೆಗೆದು ಕೊಂಡು ಹೋಗಬಹುದು. ಸುರಕ್ಷತೆ ದೃಷ್ಟಿಯಿಂದ ವ್ಯವಸ್ಥೆ ಒಪ್ಪ ಬೇಕಾದ್ದೆ.ಆದರೆ ಇಲ್ಲಿ ಒಂದು ಎಚ್ಚರಿಕೆ ಸಂದೇಶ ನೆನಪಿಟ್ಟು ಕೊಳ್ಳಿ ಮಿತ್ರರೇ.ಉಳಿದು ಕೊಂಡ ಹೋಟೆಲ್,ಸ್ಥಳದ ಗುರುತಿನ ಚೀಟಿ ನಿಮ್ಮ ಬಳಿ ಇರಲಿ.ಇಲ್ಲದೆ ಹೋದರೆ ಮೊಬೈಲ್ ಇಲ್ಲದೆ ಹುಡುಕುವುದೇ ಕಷ್ಟ. ಇಲ್ಲಿ ಎಲ್ಲಾ ರಸ್ತೆ ,ಗಲ್ಲಿಗಳು ಒಂದೇ ತೆರನಾಗಿ ಕಾಣುತ್ತದೆ.ಮತ್ತು ಭಾಗಶಃ ಹೋಟೆಲ್ ,ಅಂಗಡಿಗಳ ಹೆಸರು ಶ್ರೀ ರಾಮನ ಹೆಸರಲ್ಲೇ ಇದೆ. "ರಾಮ ರೆಸಿಡೆನ್ಸಿ,ರಾಮ ಹೋಟೆಲ್,ಮೋಟೆಲ್, ರಾಮ ಆಶ್ರಮ....ಹೀಗೆ ಬಹಳ ಗೊಂದಲ ಆಗುತ್ತದೆ.ರಸ್ತೆ ಗಲ್ಲಿಯ ಹೆಸರು ನೆನಪಿಟ್ಟು ಕೊಳ್ಳಬೇಕು.(ನಾವು ಆರು ಜನ ಬೇರೆ ಬೇರೆ ಯಾಗಿ ರಾತ್ರಿವೇಳೆಯಲ್ಲಿ ಬಹಳ ಆತಂಕಕ್ಕೆ ಗುರಿಯಾದೆವು.ಅಂತೂ 2 ಗಂಟೆಗಳ ಹರಸಾಹಸ ಮಾಡಿ ಒಟ್ಟು ಗೂಡಿದೆವು. ವಿಭಿನ್ನ ಕೆಟ್ಟ ಅನುಭವ😛) ಮತ್ತೆ ದರುಶನ ಕ್ಷಣಕ್ಕೆ ಹಿಂದಿರುಗುತ್ತೇನೆ.

ಐದು ಗೋಪುರಗಳನ್ನು ಒಳಗೊಂಡ ಮಂಟಪಗಳ ಹಾದು ಮುಖ್ಯ ಮಂಟಪಕ್ಕೆ ಸಾಕಷ್ಟು ಮೆಟ್ಟೆಲುಗಳ ಹತ್ತಿ ಹೋಗಬೇಕು. ಬಿಳಿಯ ಅಮೃತ ಶಿಲೆಯ ಹಾಸಿನ ನೆಲ,ಸುತ್ತಲೂ ಸುಂದರ ವೈವಿದ್ಯಮಯ ಕೆತ್ತನೆಯ ಗೋಡೆಗಳು ಬಂಗಾರದ ತೆಳು ಬಣ್ಣ ಹಳದಿ ಮಯವಾದ ದೇಗುಲ ಸೂರ್ಯನ ಪ್ರಥಮ ಕಿರಣದ ಆಹ್ಲದಕತೆಯ ಅನುಭವ ನೀಡುತ್ತದೆ. ತಲೆ ಎತ್ತಿ ನೋಡಿದರೆ ಸೂರಿನ ತುಂಬಾ ಸೊಗಸಾದ ಕೆತ್ತನೆ.ಭವ್ಯ ಅರಮನೆಯ ಕಂಡಂತೆ ಅನ್ನಿಸುತ್ತದೆ. ಸಾಲಿನಲ್ಲಿ (ನಾಲ್ಕೈದು ಸಮಾನಾಂತರ ಸಾಲುಗಳು ಇವೆ)ನಿಂತು ಸುರಕ್ಷತಾ ಸಿಬ್ಬಂದಿಗಳಿಂದ ತಳ್ಳಿಸಿಕೊಂಡ   ಒಳ ಬಂಧತೆ ಪ್ರಭುವಿನ ದಿವ್ಯ ಮೂರ್ತಿ,ಮಂದ ಹಾಸ ಬೀರುತ್ತಾ ನಮ್ಮನ್ನೇ ದಿಟ್ಟಿಸಿ ನೋಡುತ್ತಿದ್ದಂತೆ ಕಾಣುತ್ತದೆ.  ಮೈ ಮನವೆಲ್ಲ ರೋಮಾಂಚನ,,,!!!! ಪುಟ್ಟ ಮಗುವೊಂದು ತಪ್ಪಿಸಿಕೊಂಡು ಮತ್ತೆ ತಾಯಿಯ ಕಂಡಾಗ ಆಗುವ ಆನಂದ!!!

ಕಣ್ಣು ಗಳು ತುಂಬಿ ಆನಂದ ಭಾಷ್ಪ ಕೆನ್ನೆಗಳನ್ನು ನೆನೆಸಿತ್ತು. ಈ ಮದ್ಯೆ ಉತ್ಖನನದ ವೇಳೆ ಸಿಕ್ಕ ಪುಟ್ಟ ರಾಮನ ಮೂರ್ತಿ ರಾಮಲಲ್ಲಾನ ಮುಂದೆ ಸಾಲಂಕೃತ ವಾಗಿ ನಿಂತಿರುವುದನ್ನು ಮರೆಯದೆ ನೋಡಬೇಕು.ಅದೇ ಮೂಲ ರಾಮ ವಿಗ್ರಹ.ಈಗಲೂ ಪ್ರತಿನಿತ್ಯ ಪೂಜಿಸಲ್ಪಡುತ್ತಿದೆ.  ಸಾಲಿನಿಂದ ಹೊರ ಬಂದ ಮೇಲೂ ಮತ್ತೆ ಇನ್ನೊಂದು ಬಾರಿ ಜನಗಳ ಮದ್ಯೆ ನುಗ್ಗಿಯಾದರು ಹೋಗಿ ನೋಡಬೇಕೆಂಬ ಉತ್ಕಟ ಹಂಬಲ ಪ್ರತಿಯೊಬ್ಬರಿಗೂ ಹುಟ್ಟುತ್ತದೆ   ಹೀಗೆಯೇ ನಮ್ಮ ತಂಡದ ಸ್ತೋತ್ರ ಪಠನ ಕೇಳಿ ಅಲ್ಲಿಯ ಸಿಬ್ಬಂದಿಯೊಬ್ಬರು 15 ನಿಮಿಷಗಳ ಕಾಲ ನಿಲ್ಲಲುಅವಕಾಶ ನೀಡಿದ. ಅತ್ಯಂತ ಸಂತೋಷದಿಂದ ಪದೇ ಪದೇ ಪ್ರಭು ರಾಮನ ಕಣ್ತುಂಬಿಕೊಂಡು ಹೊರ ಬಂದೆವು. ಕಣ್ಣಿನ ಕ್ಯಾಮರಾದಲ್ಲಿ ಶಾಶ್ವತ ಸೆರೆಯಾದ ನಮ್ಮ ಬಾಲ ರಾಮ.  ಹೊರಗೆ ಬರುವಷ್ಟರಲ್ಲಿ ಬೆವರಿ ನೀರಾಗಿ ಹೋದೆವು. ಮನಸ್ಸು ಮಾತ್ರ ಪ್ರಪುಲ್ಲವಾಗಿ ಜನ್ಮ ಸಾರ್ಥಕವಾದ ಅನುಭೂತಿ ಕೊಟ್ಟಿತು. ಇದಕ್ಕೆಲ್ಲಾ ಕಾರಣವಾದ ಮಹನೀಯರ ಪಾದರವಿಂದಗಳಿಗೆ ಶಿರಸಾ ವಂದನೆಗಳನ್ನು ಸಲ್ಲಿಸಿದೆವು.

ನಮ್ಮ ಜೀವನ ಕಾಲದಲ್ಲಿ ಕನಿಷ್ಠ ಒಮ್ಮೆಯಾದರೂ ಅಯ್ಯೋದ್ಯ ರಾಮನ ನೋಡಲೇ ಬೇಕು.

ರಾಮನ ಜನ್ಮ ಭೂಮಿ ನೋಡಿದೆವು ಮುಂದೆ ದಶರಥ ಮಹಲ್ ಎಂಬ ಅರಮನೆ ಇದೆ.ಇಲ್ಲಿ ಕೌಸಲ್ಯ,ಸುಮಿತ್ರಾ,ಕೈಕೇಯಿ ಕೋಣೆಗಳು ಅಡುಗೆ ಮನೆ, ರಾಮ ಲಕ್ಷ್ಮಣರು ಆಟವಾಡುತ್ತಿದ್ದ ಕೋಣೆಗಳು ಮೇಲೆ ಬರೆದಿದ್ದಾರೆ ಸಹ ಕಾಣಬಹುದು. ಜೀರ್ಣೋದ್ಧಾರದ ಪ್ರಕ್ರಿಯೆ ನಡೆಯುತ್ತಿದೆ.ರಾಮಸೀತೆಯ ಕಲ್ಯಾಣವಾದಾಗ ಸೀತೆಯನ್ನು ಮನೆ ತುಂಬಿಸಿಕೊಂಡ ಸ್ಥಳ ಕನಕ ಮಹಲ್ ಸಹ ಇದೆ. ಇಲ್ಲಿಯೂ ಸಹ ಸರಯೂ ನದಿಯಲ್ಲಿ ಮಿಂದು ಶ್ರದ್ಧಾ ಕಾರ್ಯಗಳನ್ನು ಮಾಡಬಹುದಾಗಿದೆ.







*********************************************************************************

                                       ಪ್ರಯಾಗ

ಅಯೋಧ್ಯೆಯಿಂದ ಪ್ರಯಾಗ್ ಸುಮಾರು 170 km ದೂರದಲ್ಲಿದೆ.  ಗಂಗಾ,ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವೇ ಈ ಸ್ಥಳದ ವಿಶೇಷ. ಹೆಚ್ಚೇನೂ ಪ್ರೇಕ್ಷಣೀಯ ಸ್ಥಳವಲ್ಲಾ.  ಮೂರು ನದಿಯ ಸೇರುವ ಜಾಗಕ್ಕೆ ದೋಣಿ ಯಲ್ಲಿ ಕರೆದು ಕೊಂಡು ಹೋಗುತ್ತಾರೆ. ತೀರ್ಥಸ್ನಾನ ಪುಣ್ಯದಾಯಕ ಎನ್ನುವ ನಂಬಿಕೆ.  ದೋಣಿಯಲ್ಲಿ ಹೋಗುವಾಗ ತಿಳಿಹಸಿರು ಬಣ್ಣದ ಗಂಗೆ ಮತ್ತು ಮಣ್ಣಿನ ಬಣ್ಣದ ಯಮುನಾ ಹರಿದು ಸೇರುವುದನ್ನು ಬಹಳವೇ ಸ್ಪಷ್ಟವಾಗಿ ಕಾಣಬಹುದು.ಇಲ್ಲಿಯೂ ಸರಸ್ವತಿ ಗುಪ್ತಗಾಮಿನಿಯಾಗಿ ಹರಿದು ಬರುತ್ತಾಳೆ.  ಸರಸ್ವತಿ ನದಿಯ ಹರಿವು ಏಕೆ ಗುಪ್ತ ಎನ್ನುವುದಕ್ಕೆ ಒಂದು ಕಥೆ ಇದೆ.  ಬದರೀ ಕ್ಷೇತ್ರದಲ್ಲಿ ಮಾನ ಎಂಬ ಸ್ಥಳದಲ್ಲಿ ವ್ಯಾಸರು ಗಣಪತಿಗೆ ಮಹಾಭಾರತವನ್ನು ಹೇಳಿ ಬರೆಸುವಾಗ ಸರಸ್ವತಿ ನದಿ ಜೋರಾಗಿ ಸದ್ದು ಮಾಡುತ್ತಾ ಹರಿಯುತ್ತಿದ್ದಳು. ಆ ಶಬ್ದಕ್ಕೆ ವ್ಯಾಸರು ಹೇಳುವುದು ಗಣಪತಿಗೆ ಕೇಳದೆ ಹೋಗುತ್ತದೆ. ಆಗ ವ್ಯಾಸರು ಸರಸ್ವತಿ ನದಿಗೆ "ನಿನ್ನ ಹರಿವು ನಿಶಬ್ದವಾಗಿರಲಿ" ಅಂತ ಆದೇಶಿಸಿದರು. ಅಲ್ಲಿ ಒಂದು ಕಡೆ ನೆಲದಲ್ಲಿ ಇದ್ದಕ್ಕಿದಂತೆ ಅದೃಷ್ಯವಾಗಿ ಹೋಗುತ್ತದೆ ಸರಸ್ವತಿ ನದಿ.ಮುಂದೆ ಪ್ರಯಾಗದಲ್ಲಿ ಗುಪ್ತಗಾಮಿನಿಯಾಗಿ ಮತ್ತೆ ಕಾಣಿಸಿಕೊಳ್ಳುತ್ತಾಳೆ.

     ಇಲ್ಲಿ ವೇಣಿದಾನ ಹಿಂದೂಗಳಲ್ಲಿ ಸಂಪ್ರದಾಯವಾಗಿ ನಡೆದು ಬಂದಿದೆ. ಪುರೋಹಿತರ ಮುಖೇನ ಸಂಕಲ್ಪ ಮಾಡಿ ಮೂರು ಹಿಡಿ ಅಥವಾ ಮೂರು ಇಂಚು ಕೂದಲು ಮುತ್ತೈದೆ ಸ್ತ್ರೀಯರು ತಮ್ಮ ಪತಿಯಿಂದ ಕತ್ತರಿಸಿ ಒಂದು ಮರದ ಬಾಗಿನದ ಸಮೇತ ಈ ಸಂಗಮ ಸ್ಥಳದಲ್ಲಿ ಬಂದು ನೀರಿಗೆ ಬಿಡುತ್ತಾರೆ.  ಸ್ತ್ರೀಯರಿಗೆ ಅವರ ಪಾಪಗಳೆಲ್ಲವೂ ಕೇಶದ ತುದಿಯಲ್ಲಿ  ಸಂಗ್ರಹವಾಗಿರುತ್ತದೆ ಎನ್ನುವ ನಂಬಿಕೆ ಅದಕ್ಕಾಗಿ ಇಲ್ಲಿ ಪಾಪ ವಿಮೋಚನೆಗೆ ವೇಣಿ ದಾನ ಮಾಡುವ ಪದ್ಧತಿ ಇದೆ

ಅಲ್ಲಿಂದ 120 km ಅಂತರದಲ್ಲಿ ಕಾಶಿ.


*********************************************************************************

                                            ಕಾಶಿ

ಕಾಶಿ ವಿಶ್ವನಾಥನ ದರುಶನಕ್ಕೂ ಸಾಲಿನಲ್ಲಿ ನಿಂತು ಕನಿಷ್ಠ 2 ಗಂಟೆಗಳ ಕಾಯುವಿಕೆ ಇರುತ್ತದೆ.ಸರ್ಕಾರಿ ಟಿಕೆಟ್ ವಿಶೇಷ ದರ್ಶನಕ್ಕೆ 300 ಆದರೆ,ಅಲ್ಲಿನ ಮಧ್ಯವರ್ತಿಗಳು ಲಿಂಗ ಸ್ಪರ್ಶ ಮಾಡಿಸುವುದಾಗಿ ಸುಳ್ಳೇ ಹೇಳಿ ತಲಾ 1000 ಹೆಚ್ಚುವರಿ ಕೇಳುತ್ತಾರೆ.  ಕಾಶಿ ವಿಶ್ವನಾಥ ಲಿಂಗದ ಸುತ್ತಾ ಕಬ್ಬಿಣದ ಕಂಬಿಗಳುಹಾಕಿ ಹಾಲನ್ನು ಲಿಂಗದ ಮೇಲೆ ಬೀಳುವಂತೆ ಕಾಲುವೆ ಯಾಕಾರದ ಕೊಳವೆಗಳನ್ನು ಇಟ್ಟಿದ್ದಾರೆ. ಅಲ್ಲಿಂದಲೇ ಲಿಂಗದ ಮೇಲೆಬೀಳುವಂತೆ ಹಾಲನ್ನು ಮತ್ತು ಇತರೆ ಹೂ ಗಳನ್ನು ಹಾಕಬೇಕು ಪ್ರಸಾದ ಅರ್ಚಕರೆ ದೂರದಿಂದ ತೋರಿಸಿ ನೀಡುತ್ತಾರೆ.  ಲಿಂಗ ಸ್ಪರ್ಶ ಸಾದ್ಯವೇ ಇಲ್ಲ ಈಗ.(ಹಿಂದೆ ಇತ್ತಂತೆ)  ಮಧ್ಯವರ್ತಿಗಳಿಂದ ಮೋಸಹೋದೀರಿ ಹುಷಾರು.  ಪ್ರಸ್ತುತ, ಕಾಶಿ ಕಾರಿಡಾರ್ ಸ್ವಚ್ಚವಾಗಿದೆ.ಆದರೆ ಅದರಿಂದ ಒಂದು ಅರ್ಧ km ಸುತ್ತಳತೆಯಲ್ಲಿ ಬಹಳವೇ ಸ್ವಚ್ಛತೆ ಇರದ ಗಲ್ಲಿಗಳು. ನಿಜಕ್ಕೂ ವಿಶ್ವ ವಿಖ್ಯಾತ ಪವಿತ್ರ ಸ್ಥಳವನ್ನು ಕೊಳಕಾಗಿ , ನಿರ್ವಹಣೆ ಇಲ್ಲದೆ ಇರುವುದು ಕಂಡರೆ ಬೇಸರವಾಗುತ್ತದೆ.  ಪಾರ್ವತಿ ದೇವಿಯ ಕಿವಿಯ ಓಲೆ ಬಿದ್ದ ಜಾಗದಲ್ಲಿ ವಿಶಾಲಾಕ್ಷಿ ಮಾತೆಯ ದೇಗುಲವಿದೆ.

ಶಿವನ ಅಂಗ ರಕ್ಷಕನಾದ ಕಾಲ ಬೈರೇಶ್ವರ ದೇವಸ್ಥಾನ ನೋಡಲೇ ಬೇಕಾದ ಸ್ಥಳ. ಕಾಶಿ ವಿಶ್ವನಾಥನ ನೋಡಿ ಬಂದಿದ್ದನ್ನು ಇಲ್ಲಿ ಬೈರೇಶ್ವರನಿಗೆ ಒಪ್ಪಿಸಬೇಕಂತೆ ಆಗಲೇ ದರುಶನ ಪುಣ್ಯ ಲಭ್ಯವಾಗುತ್ತದೆ ಎನ್ನುವ ಮಾತಿದೆ.  ಇಲ್ಲಿ ದೃಷ್ಟಿ ಗೊಂಬೆಗಳು ಮನೆಗಳಲ್ಲಿ ತೂಗಿಹಾಕಲು ಲಭ್ಯವಿದೆ. ಕಾಲ ಬೈರೇಶ್ವರ ಕೆಟ್ಟ ದೃಷ್ಟಿಯನ್ನೆಲ್ಲಾ ನುಂಗಿ ಮನೆಯನ್ನು ಸುರಕ್ಷಿತವಾಗಿ ಕಾಪಾಡುತ್ತಾನೆ ಎನ್ನುವುದು ಜನರ ನಂಬಿಕೆ.  ಶಿವ ಪಾರ್ವತಿಯರ ಪುತ್ರ ಷಣ್ಮುಗನ ಜನನ ಹಾಗು ತಾರಕಾಸುರದ ವಧೆ ಆದದ್ದು ಈ ಕ್ಷೇತ್ರದಲ್ಲಿ ಎಂಬುದಾಗಿ ತಿಳಿದು ಬಂದಿತು.

ಗಂಗಾ ನದಿಯ ತಟದಲ್ಲಿರುವ ಕಾಶಿ ಕ್ಷೇತ್ರದಲ್ಲಿ ಪ್ರತಿದಿನ ರಾತ್ರಿ 7 ಗಂಟೆಗೆ ಸರಿಯಾಗಿ(ಹರಿದ್ವಾರದಲ್ಲಿಯೂ ಇದೆ ರೀತಿಯ) ಗಂಗಾರತಿ ಮಾಡುವ ಪದ್ಧತಿ ಇದೆ.  ಸಾವಿರಾರು ಮಂದಿ ಕಿಕ್ಕಿರಿದು ನೋಡಲು ಕಾತುರದಿಂದ ನಿಲ್ಲುತ್ತಾರೆ.  ಗಂಗಾ ನದಿಯ ತೀರದುದ್ದಕ್ಕೂ 84 ಘಾಟ್ ಗಳು (ಸ್ನಾನ ಘಟ್ಟ) ಇವೆ.ಇದರಲ್ಲಿ ದಶಾಹರಘಟ್ ನಲ್ಲಿ ಗಾಂಗಾರತಿ ನಡೆಯುತ್ತದೆ.  ನಮೋ ಘಾಟ್ ಎಂಬುದು ಒಂದು ಸ್ನಾನ ಘಟ್ಟ ಇಲ್ಲಿಂದ ಬೋಟ್ ನಲ್ಲಿ ಕುಳಿತು ನೋಡಲು ಹೋದೆವು.  ಹರಿಶ್ಚಂದ್ರ ಘಾಟ್ ಮತ್ತು ಮಣಿಕರ್ಣಿಕ ಘಾಟ್ ಳಲ್ಲಿ ಮೃತರ ಹೆಣ ಸುಡುವ ಅವಾಶವಿದೆ.ಉರಿಯುವ ಬೆಂಕಿಯ ನೋಡುತ್ತಾ ಈ ಬದುಕು ಅದೆಷ್ಟು ನಶ್ವರ ಎನ್ನಿಸದೇ ಇರದು.  ಅರೆಕ್ಷಣ ಕಣ್ಣುಗಳು ತುಂಬಿ ಬಂತು.ಇಲ್ಲಿ ಕರ್ನಾಟಕ ಭವನ ವಿದೆ. ವೃದ್ಧರು ಅನಾಥರನ್ನು ಇಲ್ಲಿ ತಂದು ಬಿಟ್ಟು ಹೋಗುತ್ತಾರೆ ಅಥವಾ ಒಂದಷ್ಟು ನಿರ್ಧಿಷ್ಟ ಹಣ ಕೊಟ್ಟು ಅಂತ್ಯ ಕ್ರಿಯೆ ಮಾಡಲೂ ಇಲ್ಲಿಯವರೆಗೆ ತಿಳಿಸುತ್ತಾರಂತೆ. ವಾರಸುದಾರರಿಲ್ಲದವರಿಗೆ ಅಂತ್ಯಸಂಸ್ಕಾರ ಇಲ್ಲೇ.  ಇಲ್ಲಿ ಬದುಕು ಅಂತ್ಯವಾದರೆ ಕೊನೇ ಘಳಿಗೆ ಯಲ್ಲಿ ರುದ್ರದೇವರು ಕಿವಿಯಲ್ಲಿ ರಾಮ ತಾರಕ ಮಂತ್ರ ಹೇಳುತ್ತಾರೆ ಎಂಬುದು ಸಹ ಒಂದು ನಂಬಿಕೆ

ಕಾಶಿ ಬಿಡುವ ಮುನ್ನ ಬಿಂದು ಮಾಧವನನ್ನು ನೋಡಿ ಬರಬೇಕು.

ಅಲ್ಲಿಂದ ಸಾರನಾಥ್ ಕಡೆ ಪಯಣ. ಬುದ್ಧಿಸಂ ಸಹ ಭಾರತದಲ್ಲಿ ಹುಟ್ಟಿದ ಒಂದು ಧರ್ಮ. ಆದರೆ ಬೆಳವಣಿಗೆಗೆ ಸಾಧ್ಯವಾಗದೆ ವಿದೇಶಗಳಲ್ಲಿ ಹರಡಿಕೊಂಡು ಬೆಳೆಯುತ್ತಾ ಬಂತು ಬುದ್ಧ ಹುಟ್ಟಿದ್ದು ಲುಂಬಿನಿ ನಗರದಲ್ಲಿ ಜ್ಞಾನೋದಯ ಬೌದ್ಧಗಾಯದಲ್ಲಿ, ಸಾರನಾತದಲ್ಲಿ ಶಿಷ್ಯರಿಗೆ ದೀಕ್ಷೆ ನೀಡಿದ್ದರು.  ಬುದ್ಧನು ತನ್ನ ನಾಲ್ಕು ಶಿಷ್ಯರಿಗೆ ಬೌದ್ಧ ಸಿದ್ಧಾಂತ ಭೋದನೆ ಮತ್ತು ದೀಕ್ಷೆ ನೀಡಿದ ಸ್ಥಳ ವಿದೆ ಮತ್ತು ಇಲ್ಲಿನ ಭೋಧಿ ವೃಕ್ಷ ಅಶೋಕನ ಮಕ್ಕಳು ಶ್ರೀಲಂಕದಿಂದ ತಂದು ನೆಟ್ಟದ್ದು ಎಂದು ತಿಳಿದುಬಂತು.  ತೈವಾನ್ ರಾಜ ನೀಡಿದ ದೊಡ್ಡ ಗಂಟೆ ಇದೆ ಒಮ್ಮೆ ಸದ್ದು ಮಾಡಿದರೆ ಸುಮಾರು 3,5km ದೂರದ ವರೆಗೆ ಗಂಟೆಯ ಶಬ್ಧ ಕೇಳುತ್ತದೆ. 2300ಹಿಂದಿನ ಸ್ತೂಪ ಇಲ್ಲಿದೆ. ಬುದ್ದನ ಅಸ್ತಿ ಇಲ್ಲಿ ಒಳಗೆ ಇಡಲಾಗಿದೆಯಂತೆ.  ವಿಶ್ವವಿಖ್ಯಾತ ಬೆನರಸ್ ವಿಶ್ವ ವಿದ್ಯಾಲಯ, ಮತ್ತು ಸಂಕಟ ವಿಮೋಚನಾ ಹನುಮಾನ್ ದೇಗುಲ ನೋಡಲೇ ಬೇಕಾದ ಸ್ಥಳಗಳು.





*********************************************************************************

                                                   ಗಯ

ಇದು ಬಿಹಾರ್ ರಾಜ್ಯದಲ್ಲಿದೆ.  ಗಯ ಮತ್ತು ಬೌದ್ಧ ಗಯ ಎರಡು ಧಾರ್ಮಿಕ ಕೇಂದ್ರಗಳು ಆದರೆ ಎರಡೂ ಬಿನ್ನ ಧರ್ಮಕ್ಕೆ ಸೇರಿದ್ದು.  ವಿಷ್ಣು ಗಾಯಾಸುರನನ್ನು ಕೊಂದ ಮತ್ತು ಅವನ ಪಾದವನ್ನು ಭೂಮಿಯ ಮೇಲೆ ಊರಿದ ಸ್ಥಳ ಇಲ್ಲಿದೆ ಅದನ್ನು 18 ನೇ ಶತಮಾನದಲ್ಲಿ ಇಂದೂರಿನ ರಾಣಿ ಅಹಲ್ಯಾಭಾಯಿ ನವೀಕರಿಸಿದಳು.  ಫಲ್ಗುಣಿ ನದಿ ತೀರದಲ್ಲಿರುವ ಈ ಕ್ಷೇತ್ರದಲ್ಲಿ ಹಿರಿಯರ ಶ್ರದ್ಧಾ ಕಾರ್ಯವನ್ನು ಶ್ರೀರಾಮನೇ ಮಾಡಿದನು ಎಂಬುದು ತಿಳಿದುಬರುತ್ತದೆ.ಅದಕ್ಕಾಗಿಯೇ ಎಲ್ಲಾ ವರ್ಣಿಯರು ಇಲ್ಲಿ ಬಂದು ಹಿರಿಯರ ಕಾರ್ಯ ಮಾಡುತ್ತಾರೆ.  ಸಂಜೆ ಈ ವಿಷ್ಣು ಪಾದಕ್ಕೆ ಗಂಧ ಮತ್ತು ಕುಂಕುಮದಿಂದ ಅಲಂಕಾರ ಮಾಡುತ್ತಾರೆ.  ಪಾದದ ಮಾದರಿ ಅಚ್ಚನ್ನು ಶುಭ್ರ ಬಿಳಿಯ ಬಟ್ಟೆಯ ಮೇಲೆ ಒತ್ತಿ ಕೊಡುತ್ತಾರೆ.(150/-,) ಅದನ್ನು ಮನೆಯಲ್ಲಿಟ್ಟು ಪೂಜೆ ಮಾಡಬಹುದಾಗಿದೆ.  

ಇಲ್ಲಿಂದ 15 km ಅಂತರದಲ್ಲಿ ಬೌದ್ಧ ಗಯ ಇದೆ. ಮಹಾಬೋಧಿ ದೇವಾಲಯ ಮತ್ತು ವಟ ವೃಕ್ಷ.  ಮೌರ್ಯ ವಂಶದ ಅಶೋಕನಿಂದ ನಿರ್ಮಿತವಾದ ಅಶೋಕ ಸ್ಥಂಭ ಸ್ತೂಪಗಳು, ಅದ್ಭುತ ಬುದ್ದನ ಮೂರ್ತಿಗಳು ಸುಂದರ ಶಿಲ್ಪ ಕಲೆಗಳನ್ನೂ ನೋಡಬಹುದು.  ಆದರೆ ಮೊಗಲ್ ಕಾಲದಲ್ಲಿ ಮಹಮದ್ ಗಜ್ನಿಯಿಂದ ದಾಳಿಗೆ ಒಳಪಟ್ಟು ಹಲವು ಕೆತ್ತನೆಗಳು ಹಾಳಾಗಿವೆ.  ಇದು ಬೇಸರದ ಸಂಗತಿ.  ಬುದ್ಧನಿಗೆ ಜ್ಞಾನೋದಯ ಆದ ಸ್ಥಳ. ಮುಖ್ಯ ದೇಗುಲದ ಮೇಲೇರುವ ದೇಗುಲದ ತುದಿಯಲ್ಲಿ 289 ಕೆಜಿಯ ಚಿನ್ನದ ಗೋಪುರವಿದೆ. ಅಶೋಕನ ನಂತರ ಸಮುದ್ರ ಗುಪ್ತ ಹೌದಾ ಧರ್ಮವನ್ನು ಭಾರತದಲ್ಲಿ ಹೆಚ್ಚು ಪ್ರಚಾರಪಡಿಸಿದ.  ಬೌದ್ಧ ಧರ್ಮ ವೇಗವಾಗಿ ಹಿಂದೂ ಧರ್ಮವನ್ನು ಹಿಂದಿಕ್ಕಿ ಬೆಳೆಯುತ್ತಿದ್ದ ಕಾಲದಲ್ಲಿ ಶ್ರೀ ಶಂಕರಾಚಾರ್ಯರು ಹಿಂದೂ ಧರ್ಮದ ಉಳಿವಿಗಾಗಿ ಬಹಳಷ್ಟು ಶ್ರಮ ವಹಿಸಿದರು  ಅದರ ಪರಿಣಾಮವೇ ಭಾರತ ಇಂದೂ ಹಿಂದೂಗಳ ರಾಷ್ಟ್ರವಾಗಿ ಉಳಿಯಲು ಸಾಧ್ಯವಾಯಿತು.




ಪ್ರವಾಸದ ಮಾಹಿತಿ ಇಷ್ಟವಾಯಿತು ಅಂತ ತಿಳಿದಿದ್ದೇನೆ.

ಸರ್ವೇ ಜನೋ ಸುಖಿನೋ ಭವಂತು. ಶುಭವಾಗಲಿ.

Thursday, July 11, 2024

A Journey to Leh and Ladakh


ಇದು ಮೂಲವಾಗಿ ಕನ್ನಡದಲ್ಲಿ ಬರೆದದ್ದು, ತರ್ಜುಮೆ ಮಾಡಿದ್ದೇನೆ.  ಕನ್ನಡದ ಬ್ಲಾಗ್ ಇಲ್ಲಿ 

Preparation and Instructions

Here's an effort to convey some essential information to the readers:

1. Your prepaid mobile phone will not work in Jammu, Kashmir, and Ladakh. If you need a mobile phone, it’s better to have a postpaid connection. Generally, all hotels provide WiFi, which you can use while in your room.

2. Breathing difficulties can occur in some places. First, it's advisable to take some blood-thinning medication (e.g., Diamox 250); then ensure that the car has an oxygen cylinder.

3. Roads are really bad in some areas. Be mentally prepared. It’s common to encounter traffic jams for kilometers. Plan your next travel carefully.

4. Lip balm and sunscreen are not just cosmetic items but essential here. Thermal clothing and a good sweater/jacket are necessary. Keeping Electral (an oral rehydration solution) and dry fruits is beneficial.

 Overview

Our journey aimed to explore as many places as possible while spending money wisely. We traveled around 8,000 kilometers by train, public bus whenever possible, and taxi when necessary. We experienced all classes of train travel, including Vande Bharat and Rajdhani Express. Key places we visited include Vaishno Devi/Katra, Srinagar, Leh (Ladakh's main town), Nubra Valley, and Pangong Lake.

From Srinagar, we took a service from a company (Thrillophilia). They provided accommodation and taxis for all places for 8 days and 7 nights. We had a Mahindra Xylo vehicle with us, which was convenient. Our trip concluded at Leh, after which we arranged our own travel.

Our total expenditure was around 60,000 INR.


The first place we visited was Vaishno Devi, located on  top of a hill. There are two or three routes to reach it. We chose the new Tarakote route.. You need register first and receive an RFID tag. Other routes offer horse rides and 'doli' (where four people carry you in a chair). We chose the 15-kilometer scenic new route. It took us 12 hours to climb, enduring considerable effort. Inside the temple, it took another hour to store our bags, mobile phones, and slippers in a locker. The queue for the darshan (viewing) took 2 hours. Inside, you view small stones (called 'pindis') of Lakshmi, Saraswati, and Kali in two different angles We then took the ropeway to Bhairav Temple and began our 13-kilometer descent, which was quite tiring.


Our next destination was Srinagar. During our taxi journey, we encountered significant security checks by CRPF soldiers at lest in five different places. The highlight of Srinagar is the Dal Lake, which spans about 22 square kilometers. Houseboat accommodationsfor all  are available here. We took a Shikara boat ride for an hour, during which vendors approached us in their boats selling tea, coffee, fruits, jewelry, and barbecue items. There's a floating market selling clothes, ice cream, spices, and more. We dined at Wazwan restaurants, which are famous for their 16-course non-vegetarian meals. The weather in Srinagar was pleasantly cool, and we stayed there for one night.



Our journey to Leh was challenging, so we stopped at Kargil on the way. At Drass, we visited the 1996 Kargil War Memorial, which showcases stories of brave soldiers, used equipment, and models of the mountains involved in the battle. Fallen soldiers are buried there, and the site evokes deep emotions of patriotism. Though the roads were not great, the rugged beauty of snow-covered mountains and peaks made up for it. We visited a Buddhist monastery (Manestry) before heading to our lodging.



On the way from Kargil to Leh, we saw the confluence of the Indus and Zanskar rivers. The distinct colors of the two rivers make the confluence clearly visible. 


We spent the next day exploring Leh. The 9-story Leh Palace, built between 1595-1615 by the Namgyal dynasty, has very narrow doorways. Locals here are generally short and stocky with rosy cheeks. We visited another war memorial (Hall of Fame) and the Shanti Stupa, a large monastery. The local market offers army jackets, Pashmina shawls, saffron, and the special Markhor biscuits


Next, we traveled to Nubra Valley. The route passes through Khardung La, the highest motorable road in the world at about 18,000 feet above sea level. The extreme cold and lack of oxygen mean vehicles carry oxygen cylinders, and visitors are allowed to stay only for 10 minutes. We walked on the snow but didn’t stay long due to the onset of headaches. Nubra Valley features Sand Dunes, and two-humped camels (Mangolinan camels) are available for rides. These camels originated from Mongolia for trade along the Silk Route. We stayed in tents with limited electricity.

Our final destination was Pangong Lake, the largest high-altitude saltwater lake, known for its clear and pristine water. The lake displays different colors, including blue, black, and peacock shades. Only one-third of the lake lies in India, with the rest in China. Due to the border location, mobile phones don’t work here. It’s an extremely cold area, making the water too cold to touch. We stayed in tents with room heaters and limited electricity.


Returning to Leh, we retrieved our luggage and took a taxi to Keylong in Himachal Pradesh, then traveled 19 hours by bus to Delhi and finally to Bangalore. 

The sense of accomplishment upon reaching home was immense. Writing about our experiences and selecting a few pictures from the many we took was a challenging task. We were happy that our health remained good and the trip was relatively trouble-free.

Wednesday, July 10, 2024

ಲೇ ಲಡಾಕ್ ಪ್ರವಾಸ

English version of the same is avaialable here

ಹಿಂದಿನ ಸಿದ್ಧತೆ ಮತ್ತು ಸೂಚನೆ

ಓದುಗರಿಗೆ ಕೆಲವೊಂದು ಅತೀ ಅಗತ್ಯ ಇರುವ ವಿಷಯ ತಿಳಿಸುವ ಪ್ರಯತ್ನ ಇಲ್ಲಿ 

      1.  ನಿಮ್ಮ ಪ್ರಿಪೇಯ್ಡ್ ಮೊಬೈಲ್ ಗೆ ಜಮ್ಮು , ಕಾಶ್ಮೀರ ಮತ್ತು ಲಡಾಕ್ ನಲ್ಲಿ  ನಿರ್ಬಂಧ ಇದೆ.  ಮೊಬೈಲ್  ಅಗತ್ಯ ಬೇಕಿರುವವರು ಪೋಸ್ಟ್ ಪೇಡ್ ಮಾಡಿಕೊಂಡು ಹೋಗುವುದು ಒಳಿತು .  ಸಾಮಾನ್ಯವಾಗಿ ಎಲ್ಲಾ ಹೋಟೆಲ್ ಗಳಲ್ಲಿ  wifi ಸಿಗುತ್ತದೆ.  ರೂಂ ನಲ್ಲಿ ಇದ್ದಾಗ ಉಪಯೋಗಿಸಬಹದು

      2. ಕೆಲವು ಕಡೆ ಉಸಿರಾಟ ಕಷ್ಟ ಸಾಧ್ಯವಾಗಬಹುದು.  ಮೊದಲನೆಯದಾಗಿ, ರಕ್ತ ತೆಳು ಮಾಡುವ ಕೆಲವೊಂದು ಔಷಧಿ ತೆಗೆದುಕೊಳ್ಳುವುದು ಒಳ್ಳೆಯದು (ಉಧಾ : Diamox 250); ಆಮೇಲೆ ಕಾರ್ ನಲ್ಲಿ oxygen cylinder ಇರುವುದು ಖಚಿತ ಪಡಿಸಿಕೊಳ್ಳಿ .

       3. ರಸ್ತೆಗಳು (?!) ಕೆಲವು ಕಡೆ ತುಂಬಾ ಕೆಟ್ಟದಾಗಿದೆ.   ಮಾನಸಿಕವಾಗಿ ತಯಾರಾಗಿ. ಕೀಲೋ ಮೀಟರ್ ಗಟ್ಟಲೆ traffic jam ಆಗುವುದು ಸಹಜ.   ತಮ್ಮ ಮುಂದಿನ  ಪ್ರಯಾಣ  ಸರಿಯಾಗಿ ಪ್ಲಾನ್ ಮಾಡಿಕೊಳ್ಳಿ 

      4. Lip Balm, ಸನ್ ಕ್ರೀಂ ಕೇವಲ ಆಲಂಕಾರಿಕ ಪ್ರಸಾಧನ ಅಲ್ಲ, ಇಲ್ಲಿ ಅತ್ಯಗತ್ಯ. Thermal dress, ಒಳ್ಳೆಯ ಸ್ವೆಟರ್/ಜಾಕೆಟ್  ಅಗತ್ಯ. ಎಲೆಕ್ಟ್ರಾಲ್ , Dry Fruits ಇರವುದು ಒಳಿತು. 


ಸಿಂಹಾವಲೋಕನ

ನಮ್ಮ ಪ್ರಯಾಣದ ಉದ್ದೇಶ ಆದಷ್ಟು ಜಾಗ ನೋಡುವುದು ಮಾತ್ರವಲ್ಲದೆ ಹಣ ಸರಿಯಾಗಿ ಖರ್ಚು ಮಾಡುವುದು.  ನಾವು ಸುಮಾರು 8೦೦೦ ಕಿಲೋ ಮೀಟರ್ ಹೋದರು ಪ್ಲೇನ್ ನಲ್ಲಿ ಹೋಗದೆ   ರೈಲ್ ನಲ್ಲಿ, ಸಾಧ್ಯವಾದಷ್ಟು ಸಾರ್ವಜನಿಕ ಬಸ್ ನಲ್ಲಿ , ಅಗತ್ಯ ಬಿದ್ದಾಗ ಟ್ಯಾಕ್ಸಿ ಯಲ್ಲಿ ಹೋಗಿದ್ದೆವು.  ರೈಲ್ ನ ಎಲ್ಲಾ ಮಜಲು ನೋಡಿದೆವು -   ವಂದೆಭಾರತ್, ರಾಜಧಾನಿ ಎಕ್ಸ್ಪ್ರೆಸ್ ನಲ್ಲಿ ಪ್ರಯಾಣ.  ನಾವು Vaishno ದೇವಿ /ಕಾಟ್ರಾ, ಶ್ರೀನಗರ್, ಲೇಹ್ -ಲಡಾಕಿನ ಪ್ರಮುಖ ಪಟ್ಟಣ , ನಭ್ಯ ಕಣಿವೆ ಮತ್ತು pangyong ಕೆರೆ ನಾವು ನೋಡಿದ ಪ್ರಮುಖ ಸ್ಥಳಗಳು.  

ಶ್ರೀನಗರ್ ಇಂದ ನಾವು ಒಂದು ಸಂಸ್ಥೆಯ  (Thrillophollia ) ಸರ್ವಿಸ್ ತೆಗೆದುಕೊಂಡಿದ್ದೆವು.  ಅವರು 8 ದಿನ ಮತ್ತು 7 ರಾತ್ರಿ ಎಲ್ಲಾ ಜಾಗಗಳಿಗೆ, ವಸತಿ, ಟ್ಯಾಕ್ಸಿ ಕೊಟ್ಟಿದ್ದರು.  ಒಂದು ಮಹಿಂದ್ರ xylo  ನಮ್ಮ ಬಳಿಯೇ ಇತ್ತು .  ಇದು ಖಂಡಿತ ನಮಗೆ ಅನುಕೂಲ ಆಯಿತು.  ಕೊನೆಯಲ್ಲಿ ಲೇಹ್ ನಲ್ಲಿ ನಮ್ಮ ಈ ಪ್ರವಾಸ ಮುಗಿಯುತು.  ಮುಂದಿನ ಪ್ರಯಾಣ ನಾವೇ ಮಾಡಿಕೊಂಡಿದ್ದೆವು.

ನಾವು ಮಾಡಿದ ಒಟ್ಟು ಖರ್ಚು ಸುಮಾರು 60,000 

ಮೊದಲು ನಾವು ಸಂದರ್ಶಿಸಿದ ಸ್ಥಳ Vaishno ದೇವಿ.  ಇದು ಒಂದು ಬೆಟ್ಟದ ಮೇಲಿದೆ.   ಇಲ್ಲಿ ಎರಡು ಮೂರು ದಾರಿ ಇವೆ.  ನಾವು ಆಯ್ಕೆ ಮಾಡಿಕೊಂಡ ಮಾರ್ಗ ತಾರಾಕೋಟ್ ಎಂಬ ಹೊಸದಾದ ಮಾರ್ಗ.  ಇಲ್ಲಿ ಮೊದಲೇ ರಿಜಿಸ್ಟರ್ ಮಾಡಿ RFID ಟ್ಯಾಗ್ ಕೊಡುತ್ತಾರೆ . ಬೇರೆಯ ಮಾರ್ಗದಲ್ಲಿ ಕುದುರೆ ಮೇಲೆ ಮತ್ತು ಡೋಲಿ ( 4 ಜನ ಬುಟ್ಟಿಯಲ್ಲಿ ಹೊತ್ತುಕೊಂಡು ) ಕೂಡಾ ದೊರೆಯುತ್ತವೆ .  ನಾವು 1 ಕೀ ಮೀ ದೂರವಾದರೂ ಚೆಂದದ ಹೊಸ ದಾರಿ ಯಲ್ಲಿ ಹೊರಟೆವು. ಇದು 15 ಕೀ ಮೀ ಇರುವ ಮಾರ್ಗ.  ಕಷ್ಟ ಪಟ್ಟು, ದಣಿವಾರಿಸಿ ಕೊಂಡು ಹತ್ತಿದಾಗ, ಸುಮಾರು 12 ಘಂಟೆ.  ಮಂದಿರದ ಒಳಗೆ  ಬಿಡದ ನಮ್ಮ ಕೈ ಚೀಲ, ಮೊಬೈಲ್., ಚಪ್ಪಲಿ ಬಿಡಲು lock ರೂಮ್ ನಲ್ಲಿ ಇಡಲು, ಒಂದು ಘಂಟೆ. ಕ್ಯೂ ನಲ್ಲಿ ನಿಂತು ಧರ್ಶನ ವಾದಾಗ  2 ಗಂಟೆ.  ಇಲ್ಲಿ ಲಕ್ಷ್ಮಿ, ಸರಸ್ವತಿ   ಮತ್ತು ಕಾಳಿಯವರ ಸಣ್ಣ ಕಲ್ಲುಗಳು ( ಅಲ್ಲಿ ಪಿಂಡಿ ಎನ್ನುತ್ತಾರೆ ), ಎರಡು  ಕೋನಗಳಲ್ಲಿ , ದರುಶನ ಮಾಡುವುದು.   ರೋಪ್ ವೇ ಮೂಲಕ ಭೈರವನ ಮಂದಿರ ನೋಡಿಕೊಂಡು ಇಳಿಯ ತೊಡಗಿದೆವು .  ಇದು 13 ಕೀ ಮೀ ದೂರ.  ಅಂತೂ ಕಷ್ಟ ಪಟ್ಟು ಇಳಿದೆವು.

ನಮ್ಮ ಮುಂದಿನ ಸ್ಥಳ ಶ್ರೀನಗರ್.  ಟ್ಯಾಕ್ಸಿ ಯಲ್ಲಿ ಹೋಗುತ್ತಿದ್ದಾಗ, ಅತಿ ಹೆಚ್ಚು ಸುರಕ್ಷತೆ ಕಂಡು ಬಂದಿತು. CRPF ಯೋಧರು ಕಡೆ ಪಕ್ಷ 5 ಸ್ಥಳಗಳಲ್ಲಿ ನಿಲ್ಲಿಸಿ ತಪಾಸಣೆ ಮಾಡುತಿದ್ದರು .  ಶ್ರೀನಗರದ ವಿಶೇಷ ದಲ್ ಸರೋವರ.  ಇದು ಸುಮಾರು 22 ಚದುರ ಕೀ ಮೀ ಇರುವ ದೊಡ್ಡ ಸರೋವರ.  ಇಲ್ಲಿ ತಂಗಲು ಹೌಸ್ ಬೋಟ್ ವ್ಯವಸ್ಥೆ ಇದೆ.  ನಾವು ಶಿಕಾರ್ ಬೋಟ್ ಹಿಡಿದು ಒಂದು ಗಂಟೆ ಸುತ್ತಿ ಬಂದೆವು. ಅಷ್ಟರಲ್ಲಿ ಮಾರಲು ಬೋಟ್ ಗಳಲ್ಲಿ,   ಟೀ/ಕಾಫಿ , ಹಣ್ಣುಗಳು, ಆಭರಣಗಳು,ಬಾರ್ಬೆಕ್ಯೂ  ಇತ್ಯಾದಿ ಮಾರುವರು ಬಂದರು. ಇಲ್ಲಿ ತೇಲುವ ಸಂಪೂರ್ಣ ಮಾರುಕಟ್ಟೆ ಇದೆ.  ಬಟ್ಟೆಯ ಅಂಗಡಿ, ಐಸ್ಕ್ರೀಮ್, ಮಸಾಲೆ ಪದಾರ್ಥಗಳು ದೊರೆಯುತ್ತವೆ.  ಶ್ರೀನಗರ್ ನಲ್ಲಿ  wazwan ಹೋಟೆಲ್ ಗಳಿವೆ ಸುಮಾರು 16 ಕೋರ್ಸ ನ ಮಾಂಸಾಹಾರಿ ಭೋಜನ ಇಲ್ಲಿನ ವಿಶೇಷ.  ಶ್ರೀನಗರ್ ನ ಹವಾಮಾನ ಅಷ್ಟು ಚಳಿ ಇಲ್ಲದಿದ್ದರೂ ಹಿತವಾಗಿ ಇತ್ತು. ಒಂದು ರಾತ್ರಿ ತಂಗಿತ್ತು ಮುಂದುವರೆದೆವು 


ಮುಂದಿನ ಪ್ರಯಾಣ ಲೇಹ್.  ಲೇಹ್  ಹೋಗಲು ದಾರಿ ದುರ್ಗಮ. ಆದ್ದರಿಂದ  ದಾರಿಯಲ್ಲಿ ಕಾರ್ಗಿಲ್ನಲ್ಲಿ  ತಂಗಿದ್ದೆವು.  ಹೋಗುವಾಗ ಡ್ರಾಸ್ ಎಂಬ ಸ್ಥಳದಲ್ಲಿ 1996 ರಲ್ಲಿ ನಡೆದ ಕಾರ್ಗಿಲ್ ಯುದ್ಧದ ವಾರ್ ಮೆಮೋರಿಯಲ್ ಇದೆ.  ವೀರ ಯೋಧರ ಕಥೆಗಳು, ಬಳಸಿದ ಉಪಕರಣಗಳು. ಬೆಟ್ಟಗಳ ಮಾಡೆಲ್ ಗಳು ಅವುಗಳನ್ನು ಮತ್ತೆ ಪಡೆದ ರೋಚಕ ವಿಷಯವನ್ನು ರಸವತ್ತಾಗಿ ವಿವರಿಸುತ್ತಾರೆ.  ದೇಶ ರಕ್ಷಣೆಗೆ ಹುತಾತ್ಮರಾದ ಯೋಧರನ್ನು ಅಲ್ಲಿಯೇ ಹೂತುಹಾಕಿದ್ದಾರೆ .  ಎಂತಹವರೂ ಭಾವಾಜೀವಿ ಮಾಡುವ ಪುಣ್ಯ ಸ್ಥಳ.   ರಸ್ತೆಗಳು ಅಷ್ಟೆನೂ ಚೆನ್ನಾಗಿಲ್ಲವಾದರೂ ಪ್ರಕೃತಿ ರುದ್ರ ರಮಣೀಯ.  ಹಿಮಬರಿತ ಪರ್ವತಗಳು, ದೊಡ್ಡ ದೊಡ್ಡ ಶಿಖರಗಳು ಎದರಾದವು.  ವಾತಾವರಣ ತಣ್ಣಗಾಗ ತೊಡಗಿತ್ತು .  ಒಂದು ಬೌದ್ಧರ ದೇವಾಲಯ - ಮಾನೇಸ್ತ್ರಿ ನೋಡಿ ತಂಗುದಾಣಕ್ಕೆ ತೆರಳಿದೆವು. 



ಕಾರ್ಗಿಲ್ ನಿಂದ ಲೇಹ್ ಗೆ ಹೋಗುವಾಗ ಸಿಂಧೂ ನದಿ ಮತ್ತು ಝನ್ಸ್ಕಾರ್ ನದಿ ಸಂಗಮದ , ಝನ್ಸ್ಕಾರ್ vally ಸಿಗುತ್ತ್ತದೆ ಎರಡೂ ನದಿಗಳು ಬೇರೆ ಬಣ್ಣ ಇರುವುದರಿಂದ ಸಂಗಮ ಸ್ಪಷ್ಟವಾಗಿ ಕಾಣುತ್ತದೆ



ಲೇಹ್ ಪಟ್ಟಣ ಸುತ್ತವ ದಿನ ಮುಂದೆ. 9 ಮಹಡಿಯ 1595-1615 ರ ಕಾಲ ಘಟ್ಟದಲ್ಲಿ nymgagal ವಂಶದವರು ಕಟ್ಟಿದ ಅರಮನೆ ಇದೆ.  ಇಲ್ಲಿನ ದ್ವಾರಗಳು ತುಂಬಾ ಚಿಕ್ಕವು.  ಇಲ್ಲಿನ ಸ್ಥಳೀಯರು ಸಾಮಾನ್ಯವಾಗಿ ಸ್ವಲ್ಪ ಕುಬ್ಜರು.  ಕೆಂಪು ಸೇಬಿನ ತರಹ ಕೆನ್ನೆ ಉಳ್ಳವರು.  ವಿಶಾಲವಾದ ಅರಮನೆ ನೋಡಿ.  ಇನ್ನೊಂದು ಯುದ್ಧದ ಮೆಮೋರಿಯಲ್ - ಹಾಲ್ ಆಫ್ ಫೇಮ್ ನೋಡಿದೆವು.  ಶಾಂತಿ ಸ್ತೂಪ ದೊಡ್ಡ monestry.   ಇಲ್ಲಿನ ಮಾರುಕಟ್ಟೆಯಲ್ಲಿ ಆರ್ಮಿ ಜಾಕೆಟ್ಗಳು, ಪಾಶ್ಮಿನ ಶಾಲುಗಳು, ಕೇಸರಿ ಇತ್ಯಾದಿ ದೊರೆಯುತ್ತ್ತದೆ. ಮಾರ್ಕುರ್ ಬಿಸ್ಕತ್ತು ಇಲ್ಲಿನ ವಿಶೇಷ 


ಮುಂದೆ, ನಭ್ಯ valey ಗೆ ಹೋದೆವು.  ದಾರಿಯಲ್ಲಿ ವಿಶ್ವದ ಅತಿ ಎತ್ತರದ motarable ರಸ್ತೆ ,  kardhung la ಪಾಸ್ ಸಿಗುತ್ತದೆ. ಇದು ಸುಮಾರು 18,000 ಫೀಟ್ ಸಮುದ್ರ ಮಟ್ಟಕ್ಕಿಂತ ಎತ್ತರದಲ್ಲಿ .  ಅತೀ ಹೆಚ್ಚಿನ ಚಳಿ ಮತ್ತು ಆಮ್ಲಜನಕದ ಕೊರತೆ ಇರುವ ಸ್ಥಳ.  ಕಾರ್ ನಲ್ಲಿ ಆಕ್ಸಿಜನ್ ಸಿಲಿಂಡರ್ ಇರತ್ತದೆ.  ಕೇವಲ ಹತ್ತು ನಿಮಿಷ ಮಾತ್ರ ತಂಗಲು ಬಿಡುತ್ತಾರೆ.  .  ಹಿಮದಲ್ಲಿ ಓಡಾಡಿದೆವು.  ಹೆಚ್ಚು ಇದ್ದರೆ ಸಾಮಾನ್ಯವಾಗಿ ತಲೆನೋವು ಶುರುವಾಗುತ್ತದೆ.  ನಭ್ಯ ವ್ಯಾಲಿಯಲ್ಲಿ ಮರಳಿನ ರಾಶಿ ಇರುವ sand dunne ಇದೆ. ಹೋಗಲು ಎರಡು ಹಂಪ್ ಇರುವ ಒಂಟೆಗಳು ಇವೆ.  ಇದು ಸಿಲ್ಕ್ ರೂಟ್ ಆಗಿದ್ದರಿಂದ ಮಂಗೋಲಿಯಾ ಕಡೆಯಿಂದ ವ್ಯಾಪಾರಕ್ಕಾಗಿ ಬಳಸಿಕೊಂಡು ಕುಬ್ಜ ಒಂಟೆಗಳು ಇವು.  ಇಲ್ಲಿ ತಂಗಲು ಟೆಂಟ್ ಇರುತ್ತವೆ. ವಿದ್ಯುತ್ ನಿಯಮಿತ ಅವಧಿಗೆ ಮಾತ್ರ. 

ನಮ್ಮ ಕೊನೆಯ ಸ್ಥಳ pyongong ಸರೋವರ.  ಇದು ಅತಿ ದೊಡ್ಡ ಎತ್ತರದ ಉಪ್ಪಿನ ನೀರು ತಿಳಿಯಾಗಿ ಸ್ವಚ್ಛವಾಗಿ ಇರುವ ಸರೋವರ.  ನೀಲಿ, ಕಪ್ಪು, ನವಿಲು ಬಣ್ಣ ಕಾಣುವ ತುಂಬಾ ಚೆಂದದ ಸರೋವರ .ಈ ಸರೋವರದ 1/3 ಜಾಗ ಮಾತ್ರ ಭಾರತದ್ದು .  ಮಿಕ್ಕಿದ್ದು ಚೈನಾ ದೇಶದ್ದು. ಇಲ್ಲಿ ಗಡಿ ಪ್ರದೇಶ ಆಗುವುದರಿಂದ  ಯಾವುದೇ ಮೊಬೈಲ್ ಸಿಗುವುದಿಲ್ಲ. .ಅತೀ ತಣ್ಣಗಿನ ಪ್ರದೇಶ.  ನೀರು ಮುಟ್ಟಲೂ ಆಗುವುದಿಲ್ಲ.   ಇಲ್ಲಿ ಕೂಡ ಟೆಂಟ್ ನಲ್ಲಿ ಇದ್ದೆವು.  ರೂಮ್ ಹೀಟರ್ಸ್ ಇರುತ್ತವೆ. ನಿಯಮಿತ ಅವಧಿಗೆ ವಿದ್ಯುತ್  


ವಾಪಸ್ಸು ಲೇಹ್ ಗೆ ಬಂದು ಹಿಂರುಗುವ ದಾರಿ ಕೂಡ ದುರ್ಗಮ.  ಲೇಹ್ ನಲ್ಲಿ ಇಟ್ಟಿದ್ದ luggage ತೆಗೆದುಕೊಂಡು  ಒಂದು ಟ್ಯಾಕ್ಸಿ ಹಿಡಿದು ಹಿಮಾಚಲ್ ಪ್ರದೇಶದ keylong ಗೆ ಬಂದು,  ಅಲ್ಲಿಂದ ಬಸ್ ನಲ್ಲಿ 19 ಘಂಟೆಗಳು
 ಪ್ರಯಾಣಿಸಿ  ದೆಹಲಿಗೆ ಬಂದು, ನಂತರ ಬೆಂಗಳೂರಿಗೆ ಸೇರಿದಾಗ  ಸಾರ್ಥಕತೆಯಾ ಭಾವ .  

ನೋಡಿದ , ಅನುಭವಿಸಿದನ್ನು ಬರಿಯುವುದು ಕಷ್ಟದ ಕೆಲಸ.  ತೆಗೆದ ಎಷ್ಟೋ ಚಿತ್ರಗಳಲ್ಲಿ ಕೆಲವನ್ನೇ ಆಯ್ಕೆ ಮಾಡಿ ತೋರಿಸುವುದು ಇನ್ನೊ ಕಷ್ಟದ ಕೆಲಸ.  ಅರೋಗ್ಯ ಸರಿಯಿದ್ದು, ಹೆಚ್ಚು ತೊಂದರೆಯಾಗದಿದ್ದು ಸಂತಸದ ವಿಷಯ. 



Tuesday, October 3, 2023

ಕರ್ನಾಟಕ - ಭಾರತ ಗೌರವ ಕಾಶೀ ಯಾತ್ರೆ

  For English Translation  go to later portion of this blog
 *****************************************************

 ಕರ್ನಾಟಕ - ಭಾರತ್ ಗೌರವ್ ಯಾತ್ರೆ, IRCTC ಆಯೋಜಿಸಿರುವ ಯಾತ್ರೆ ಬಗ್ಗೆ ತಿಳಿದಾಗ, ಬಾರಿ ಸಂತೋಷದಿಂದ ಟಿಕೆಟ್ ತೆಗೆದುಕೊಂಡೆ. ಹಿಂದೆ ಪ್ರಧಾನ ಮಂತ್ರಿ ಉದ್ಘಾಟಿಸಿದ ವಿಷಯ ತಿಳಿದಿತ್ತು.  ಪ್ರಥಮ ಬಾರಿಗೆ ಈ ವಿಶೇಷ ಕಾಶೀ ಯಾತ್ರೆಗೆ  ರಿಯಾಯತಿ ಕೊಡಲಾಗಿತ್ತು.  ಈ ಯಾತ್ರೆಯ ನಾಲ್ಕನೇ ಆವೃತ್ತಿಗೆ ಭಾಗವಹಿಸುವ ಸದವಕಾಶ ದೊರಕಿತ್ತು.  ಎಲ್ಲರಿಗೂ ಉಪಯೋಗವಾಗಲಿ ಎಂಬುದು ಈ ಬರವಣಿಗೆಯ ಉದ್ದೇಶ. 

  ಮೊದಲಿಗೆ, ರಿಸರ್ವೇಶನ್ ಮಾಡುವ ರೀತಿ.   IRCTC ವೆಬ್ಸೈಟ್ ನಲ್ಲಿ  ಪ್ಯಾಕೇಜ್ ಟೂರ್ ಎಂಬಡಿಯಲ್ಲಿ ಹುಡುಕುತ್ತಿದ್ದರೆ, ಬೇರೆ ಯಾೂೀಾ ನಡುವೆ ತಿಂಗಳಿಗೊಮ್ಮೆ ಈ ಕಾಶೀ ಯಾತ್ರೆ ಸಿಗುತ್ತದೆ. ಮೊದಲೇ ನಿರ್ಧರಿಸಿ, ತತ್ ಕ್ಷಣ ಬುಕ್ ಮಾಡುವುದು ಒಳಿತು.  700 ಸೀಟು ಇದ್ದರೂ,   ಬೇಗ ಮುಗಿಯುತ್ತದೆ.  ವಿಶದವಾಗಿ ಮಾಹಿತಿ ಅಲ್ಲೆಯೆ ಸಿಗುತ್ತದೆ.  ಸಂಕ್ಷಿಪ್ತವಾಗಿ, 9ದಿನ /8 ರಾತ್ರಿಗಳು . ಕಾಶಿ, ಪ್ರಯಗರಾಜ್, ಅಯೋಧ್ಯ, ಗಯಾ ನಾಲ್ಕು ಸ್ಥಳಗಳು. ಶುಲ್ಕ 15,000( ಸರ್ಕಾರದ ವತಿಯಿಂದ 7,500/-)

      ಈಗ ನನ್ನ ಅನುಭವ,  ಒಟ್ಟಿನಲ್ಲಿ 100% ನನಗೆ ಬೇಕಾದ ಹಾಗೆ ಇತ್ತು.  ಬಹಳ ಇಷ್ಟವಾಯಿತು.  ನಿಗದಿತ 9 ಘಂಟೆಗೆ ಯಶವಂತಪುರ ರೈಲ್ವೇ  ಸ್ಟೇಷನ್ ತಲುಪಿದಾಗ, ಬಾರಿ ಸ್ವಾಗತ.  ಡೊಳ್ಳು ಕುಣಿತ, ರೆಡ್ ಕಾರ್ಪೆಟ್, ಪ್ರತೀ ಬಾಗಿಲಲ್ಲಿ ಬಾಳೆ ಕಂದು. ಒಂದು ಜಪಮಾಲೆ, ಹೂಗುಚ್ಛ, ಪಾನೀಯ ನಮ್ಮನ್ನು ಸ್ವಾಗತಿಸಿತು.  ಒಳಗೆ ಹೋದ ಮೇಲೆ, ಗುರುತಿಗಾಗಿ, id card, ಟೋಪಿ, ಛತ್ರಿ ಕೂಡ ಕೊಟ್ಟರು.  ಇವನ್ನೂ ಹೊರಗಡೆ ಹೋದಾಗ ಖಂಡಿತ ಹಾಕಿ ಕೊಳ್ಳಬೇಕು.  ಒಂದು ಸಣ್ಣ ಕೈಚೀಲ ಇರುವುದು ಒಳಿತು.  ಇದು ಮುಂದಿನ ಪ್ರಯಾಣಕ್ಕೆ ಬಾರಿ ಅನುಕೂಲ ಆಗುತ್ತದೆ.

      ಪ್ರಯಾಣ ಶುರುವಾದ ಒಂದು ಗಂಟೆಯಲ್ಲಿ ಎಲ್ಲರಿಗೂ ದಿಂಬು, ರಗ್ಗು, ಹೊದಿಕೆ ವಿತರಣೆಯಾಯಿತು. ಒಂದು ತಟ್ಟೆ ಕೊಟ್ಟಿದ್ದರು.  ಅದರಲ್ಲಿ, ಒಂದು ಬಟರ್ ಪೇಪರ್ ಹಾಕಿ, ಅದರ ಮೇಲೆ ಬಡಿಸುವುದು/ ತಿನ್ನುವುದು.   ಟ್ರೈನ್ ನಲ್ಲಿ ನಮ್ಮ ದಿನಚರಿ ಹೀಗೆ - ಬೆಳಿಗ್ಗೆ 7 ರ ಒಳಗೆ, ಒಂದು ಗುಡ್ ಡೆ ಬಿಸ್ಕತ್ತು ಕಾಫೀ/ ಟೀ ಸರಬರಾಜು, ಪೇಪರ್ ಕಪ್ ನಲ್ಲಿ.  8:30 ರ ಓಲಗೆ ಘಂಟೆಗೆ ಬಿಸಿ ತಿಂಡಿ, ಮತ್ತೆ  ಟೀ/ ಕಾಫಿ.  12:30 ಕೇ ಊಟ.  ಚಪಾತಿ, ತರಕಾರಿ ಸಾಗು, ಅನ್ನ ಸಾಂಬಾರ್, ಕೆಲವೊಮ್ಮೆ ಸಾರು, ಕಪ್ ನಲ್ಲಿ ಮಜ್ಜಿಗೆ.  ಅಲ್ಲಿನ ಹುಡುಗರು ಕೈಯಲ್ಲಿ ಸ್ಟೀಲ್ ಬಕಿಟ್ ನಲ್ಲಿ ಬಡಿಸುತ್ತಾರೆ. ಸಂಜೆ  5 ಗಂಟೆಗೆ, ಪಾಕೆಟ್ ನಲ್ಲಿ ಕುರುಕಲು ತಿಂಡಿ, ಕಾಪಿ ಟೀ.  ರಾತ್ರಿ 8 ರ ಒಳಗೆ ಮತ್ತೆ ಊಟ.  ಒಂದು ದಿನಕ್ಕೆ ಒಂದು ಸಲವಾದರೂ ಸಿಹಿ.  ಒಟ್ಟಿನಲ್ಲಿ ಒಳ್ಳೆಯ ಆತಿಥ್ಯ. ಟ್ರೈನ್ ನಲ್ಲಿ ಸುಮಾರು 6 ರಾತ್ರಿ ಕಳೆದೆವು.  ಎರಡು ದಿನ ಹೋಟೆಲ್ ನಲ್ಲಿ ತಂಗಿದ್ದೆವು.  ಊಟ ಮತ್ತೆಲ್ಲ ಕಲ್ಯಾಣ ಮಂಟಪ / ರೆಸಾರ್ಟ್ ನಲ್ಲಿ.  700 ಜನ ಇರುವುದರಿಂದ ವಿತರಣೆ ಕಷ್ಟ. 

        ಒಳ್ಳೆಯ ತಿಂಡಿಪೋತ ಅಂದು ಕೊಳ್ಳವ ಮೊದಲು, ನಾವು ಸಂದರ್ಶಿಸಿದ ಜಾಗಗಳ ಬಗ್ಗೆ.  ನಾವು ಮೊದಲು ವಾರಾಣಸಿ ತಲುಪಿದೆವು. ನಿಮಗೆ ತಿಳಿದಂತೆ ವಾರಾಣಸಿ, ಬನಾರಸ್, ಕಾಶೀ ಎಲ್ಲಾ ಹೆಸರಲ್ಲೂ ಕರೆಯುವ, ಗಂಗಾ ತೀರದಲ್ಲಿ ಬೆಳೆದಿರುವ ವಿಶ್ವದ ಅತೀ ಪುರಾತನ ನಗರ ಇದು.  ಆದ್ದರಿಂದ ರಸ್ತೆಗಳೆಲ್ಲ ಸಣ್ಣವು ಮತ್ತು ಅಂಕು ಡೊಂಕು.  ಎಲ್ಲಾಕಡೆ ಎಲೆಕ್ಟ್ರಿಕ್ ಅಟೋನಲ್ಲೇ ಓಡಾಡಬೇಕು. ನಾವು ಬೆಳಿಗ್ಗೆ ಸಂಕಟ್ ಮೋಚನ್ ಹನುಮಂತನ ಗುಡಿ, ತುಳಸಿ ಮಂದಿರ ಮತ್ತು ಗಣೇಶನ ದೇವಸ್ಥಾನ ನೋಡಿದ್ದೆವು.  ಊಟದ ನಂತರ, ಹೊಸದಾಗಿ ನವೀಕರಿಸಿದ ವಿಶ್ವನಾಥನ ದೇವಸ್ಥಾನ ಮತ್ತು ಗಂಗಾ ಆರತಿಗೆ ಹೋಗಿದ್ದೆವು. ಗಂಗಾ ಆರತಿ ಸರಿಯಾಗಿ ವೀಕ್ಷಿಸಲು ಒಂದು ದೋಣಿಯ ಮೇಲೆ ಕುಳಿತಿದ್ದೆವು.  ಸೂರ್ಯಾಸ್ತ ದಲ್ಲಿ ಶುರುವಾಗುವ ಆರತಿ ಸುಮಾರು ಒಂದು ಘಂಟೆ ಇರುತ್ತದೆ.  ಒಳ್ಳೆಯ ದೀಪ, ಸ್ಪೀಕರ್ ವ್ಯವಸ್ಥೆ ಇದೆ.   ಎಲ್ಲಾಕಡೆ ತುಂಬಾ ಸೆಕೆ,  ರಾಶಿ ರಾಶಿ ಜನಸ್ತೋಮ.  ದೇವಸ್ಥಾನ ಗಳಲ್ಲಿ ಮೊಬೈಲ್ ಎಲೆಕ್ಟ್ರಾನಿಕ್  ಉಪಕರಣ ಬಿಡುವುದು ಇಲ್ಲ. 

       ಎರಡನೇ ಸ್ಥಳ, ಪ್ರಾಯಾಗರಾಜ್ ಹಿಂದೆ ಇದಕ್ಕೆ ಅಲಹಾಬಾದ್ ಎಂದು ಕರೆಯುತ್ತಿದ್ದರು.  ಇಲ್ಲಿನ  ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವುದು ವಿಷೇಶ. ( ಗಂಗಾ, ಯಮುನಾ ಮತ್ತು ಗುಪ್ತಗಾಮಿನಿ ಸರಸ್ವತಿ )  ಬಸ್ಇ ಳಿದು ದೋಣಿ ತೆಗೆದು ಕೊಂಡು ಹೋದರೆ, ಸಂಗಮ ಸ್ಥಾನದಲ್ಲಿ, ಎರಡು ದೊಡ್ಡ ದೋಣಿಗಳು ನಡುವೆ ಹಾಕಿರುವ ಬೊಂಬಿನ ಸಹಾಯದಿಂದ ಮುಳುಗಿ ಸ್ನಾನ ಮಾಡಬೇಕು.  ನಂತರ ಮಲಗಿರುವ ಹನುಮಂತನ ಗುಡಿಗೆ ಹೋಗಿದ್ದೆವು.

    ಮೂರನೆಯ ದಿನ, ಅಯೋದ್ಯೆಗೆ ಹೋಗಿದ್ದೆವು. ರಸ್ತೆ ಮತ್ತಿತರ ಕಟ್ಟುವ ಕೆಲಸ ಮಾಡುತ್ತಿದ್ದಾರೆ.  ಇಕ್ಕಟ್ಟು ಇನ್ನೂ ಹೆಚ್ಚು.   ನಂದಿಗ್ರಾಮಕ್ಕೆ ಹೋಗಿದ್ದೆವು.  ಇದು ಭರತ, ರಾಮ ಕಾಡಿಗೆ ಹೋದ ಸಮಯದಲ್ಲಿ, ರಾಜ್ಯವಾಳಿದ ಸ್ಥಳ.  ಭರತ ಗುಹ ಭೇಟಿಯ ಗುಹೆ, ಹನುಮಂತ ಮೊದಲೇ ಬಂದು ಅಗ್ನಿಪ್ರವೇಶ ಮಾಡಲು ತಯಾರಾಗಿದ್ದ ಭರತನಿಗೆ, ರಾಮ ಬರುತ್ತಿರುವ ವಿಷಯ ತಿಳಿಸಲು ಭೇಟಿ ಮಾಡಿದ ಜಾಗ ತೋರಿಸುತ್ತಾರೆ.  ಇದು ದೊಡ್ಡ ವಿಸ್ತೀರ್ಣದಲ್ಲಿ ಇದೆ. ಊಟದ ನಂತರ,  ಹನುಮಾನ್ ಘಡಿ, ದಶರಥನ ಮಹಲ್, ಮತ್ತು ರಾಮ ಜನ್ಮ ಭೂಮಿಗೆ ಹೋದೆವು.  ಇಲ್ಲಿ ವಿಪರೀತ ಭದ್ರತೆ.  ಎಲ್ಲಾ ವಸ್ತುಗಳನ್ನು ಲಾಕರ್ ನಲ್ಲಿ ಇಡಬೇಕು. ಒಂದು ತಾತ್ಕಲಿಕವಾದ ಜಾಗದಲ್ಲಿ ರಾಮ್ ಲಲ್ಲನ ಪುಟ್ಟು ವಿಗ್ರಹ ಇಟ್ಟಿದ್ದಾರೆ.  ಭವ್ಯವಾದ ದೇವಸ್ಥಾನ ನಿರ್ಮಾಣವಾಗುತ್ತಿದೆ.  ಅಯೋಧ್ಯ ಸಂಪೂರ್ಣವಾಗಿ ಬದಲಾಯಿಸುವ ಯೋಜನೆ ಇದೆ.  ಪೂರ್ಣವಾಗಿ 2032 ಆಗುತ್ತದೆ 


     ಕೊನೆಯ ಸ್ಥಳ ಗಯಾ. ಇಲ್ಲಿ ಪಲ್ಗುಣಿ ನದಿಯ ತೀರದಲ್ಲಿ ಪಿಂಡ ಪ್ರದಾನ ಮಾಡುವುದು ಪ್ರತೀತಿ  ನಮ್ಮ ಸಮಯ ಈ ಕಾರ್ಯದಲ್ಲಿ ಕಳೆದು ಹೋಯ್ತು.  ಅದೃಷ್ಟವಶಾತ್ ಒಳ್ಳೆಯ ಪುರುಹಿತರು ಸಿಕ್ಕಿದ ಕಾರಣ ಚೆನ್ನಾಗಿ ಕಾರ್ಯ ಮಾಡುವ ಯೋಗ ದೊರೆಯಿತು.  ಅಲ್ಲಿಯೇ ವಿಷ್ನುಪಾದ ದೇವಸ್ಥಾನಕ್ಕೆ ಹೋಗಿದ್ದೆವು.  ಬೇರೆಯವರಿಗೆ ಬುದ್ಧ ದೀಕ್ಷೆ ಪಡೆದ ಬೋಧ್ ಗಯಾಕ್ಕೆ ಹೋಗುವ ವ್ಯವಸ್ಥೆ ಇತ್ತು. ಟ್ರೈನ್ ವಿಳಂಬವಾಗಿ ತಲುಪಿದ್ದರಿಂದ ಎರಡೂ ಕೆಲಸ ಸಾಧ್ಯವಿರಲಿಲ್ಲ.

ಎಲ್ಲವೂ ತುಂಬಾ ಚೆನ್ನಾಗಿದ್ದರೂ, ತಮ್ಮ ನಿರೀಕ್ಷೆ ಸರಿ ಇರಲಿ ಎಂಬ ಉದ್ದೇಶದಿಂದ ಕೆಲವೊಂದು ಋಣಾತ್ಮಕ ವಿಷಯಗಳು. ಈ ಟ್ರೈನ್ ನಿಗದಿತ ಸಮಯ ಇರುವುದಿಲ್ಲ.  ಟ್ರಾಕ್ ಖಾಲಿ ಇದ್ದಾಗ ಬಿಡುತ್ತಾರೆ ಪ್ರಯಾಣ ಉದ್ದವಾಗುವ ಸಾದ್ಯತೆ ಹೆಚ್ಚು.  ನಾವು ಒಂದು ದಿನ ಹೆಚ್ಚು ಆಯಿತು.   72 ಜನ ಇರುವ ಕೋಚ್ ನಲ್ಲಿ ನಾಲ್ಕು ಟಾಯ್ಲೆಟ್ ಎರಡು ಭಾರತೀಯ ಭಾರತೀಯ ಪದ್ಧತಿ ಇದ್ದರೆ, ಇನ್ನೆರಡು ಪಾಶ್ಚಾತ್ಯ ರೀತಿಯದ್ದು. ಒಂದರಲ್ಲಿ ಯಾರೋ ತಾಜ್ಯ ವಸ್ತು ಹಾಕಿ ಅದು ಮುಚ್ಚಿದ್ದರು.   ಎರಡನೆಯದು ಅವರು ಕೊಟ್ಟಿದ್ದ ಕೋಣೆಗಳು ಚಿಕ್ಕವು.. ಚೊಕ್ಕವಾಗಿ ಇರಲಿಲ್ಲ.  ಕೊನೆ ಎರಡು ದಿನ ಸುಮಾರು 50% ಹುಷಾರು ತಪ್ಪಿದ್ದರು.  ಹವಾಮಾನದ ಏರುಪೇರು ಮುಖ್ಯ ಕಾರಣ.

ಒಟ್ಟಿನಲ್ಲಿ ವೈಯಕ್ತಿಕವಾಗಿ ತುಂಬಾ ತೃಪಿಕೊಟ್ಟ ಪ್ರಯಾಣ.  ದಾರಿ ಉದ್ದಕ್ಕೂ ಹಾಡು, ಭಜನೆ, ವಿಷ್ಣಸಹಸ್ರನಾಮ ಪಾರಾಯಣ ಮಾಡಿ ಪುನೀತರಾಗುವ ಸುಸಂದರ್ಭ.  ಪಿತೃ ಕಾರ್ಯ ಮಾಡಿದ ಖುಷಿ.  ಹೀಗೆ ವ್ಯವಸ್ಥೆ ಮಾಡಿದವರಿಗೆ ವಂದನೆಸಲ್ಲಿಸುತ್ತಾ ಮನೆ ಸೇರಿದೆವು.

English Translation

 When I learnt about the Karnataka - Bharat Gaurav Kashi yatra organised by IRCTC , I booked my ticket with great excitement. I had heard about this journey as inaugurated by the Prime Minister earlier. I had the opportunity to participate in the fourth edition of this journey.  Purpose of this blog is to give an insight into this 

First, let me explain how the reservations are made. If you search for the "Package Tour" on the IRCTC website, you can find this 'Kashi Yatra'. Booking it immediately is a wise decision, as even though 700 seats are available, they fill up quickly. Detailed information is available on the website. In short, it's a 9 days/8 nights journey covering four places: Kashi, Prayagraj, Ayodhya, and Gaya, with a cost of 15,000 rupees (subsidized by the government to 7,500 rupees).

Now, let me share my experience. .  We were welcomed warmly at Yashwantpur Railway station.  Literally red-carpet welcome.  As a welcome kit, we were given a small Japamala, a flower bouquet, and refreshments .  There was famous dance with drums called DoLLu KuNitha.  They  provided us with an ID card, cap, and umbrella for our use. We had to carry all this all the time. It is good to carry a  small handbag. This is useful throughout the journey,

We had to spend 6 days in the train. A glimpse of a typical day is as follows. In the morning before 7 AM, Coffee/ Tea were served with biscuits. At around 8:30 AM, we were served a very tasty, good breakfast. Lunch used to be served after 12:30 PM. It consisted of chapatis, vegetables, rice, and sambar, sometimes rasam and buttermilk. Again, in the evening Tea /coffee was served before 5 PM with a snack packet, Dinner was at 8 PM, and There was sweet / kheer every other day. Water bottles were given as much required.  Despite the meals being simple, the hospitality was excellent.

    We first reached Varanasi. As you may know, Varanasi, Banaras, and Kashi are all names for the same ancient city situated on the banks of the Ganges. The streets are narrow and winding, suitable only for electric auto-rickshaws. We visited the Sankat Mochan Temple, Tulsi Manas Mandir, and the Ganesha Temple. After lunch, we visited the newly renovated Vishwanath Temple and attended the Ganga Aarti. Watching the Ganga Aarti during sunset from a boat is a unique experience. It lasts for about an hour and is beautifully done with lamps and an excellent sound system. The atmosphere is vibrant with a large crowd.

     Our next stop was Prayagraj (formerly Allahabad), where the Triveni Sangam ( Ganga, Yamuna and guptagamini, Saraswathi ) is a significant attraction. Taking a boat to the confluence of the three rivers for a ritual bath is a special experience. We also visited the Hanuman ( who is sleeping ), temple on the way back.


      Our next destination was Ayodhya. Morning, we went to Nandigram.   Bharata ruled the country while Lord Rama went to Vanavas from this place. It's a vast area, also has a place where Hanuman jumped ahead and informed Bharatha about the arrival of lord Rama , while Bharatha was ready to jump into fire.. After lunch, we went to a few temples. Hanuman Ghadi, Dhasharath Mahal and finally Rama Janma Bhoomi. Rama lalla is a beautiful small idol housed in temporary structure and grand temple is coming up. There are plans for the complete renovation of Ayodhya. It is expected to be completed by 2032.  Evening there was Sarayu Aarathi, although this is much smaller  

Our final destination was Gaya. Here, we participated in the Pinda pradaan ceremony on the banks of the Phalgini River.  We were fortunate that  we  met good  priests to assist us with the ritual  We also visited the Vishnupad Temple.  There was visit arranged to Bodhgaya, the place where lord Buddha got enlightenment. Due to lack of time, those of us who performed the ritual had to skip this visit. 


Although everything was excellent, Obviously, there were a few shortcomings. The train schedule is never fixed, and delays were very common. Totally when we reached back to Bangalore, there was  1 day delay.   Next,   72 people had to share 4 toilets and it was tough during peak hours. Cleanliness can improve a lot. Then, almost 50% fell sick, due to major change in temperature and may be viral infection. There was doctor on the trail and good stock of medicines in train - He had to work hard and always busy

Overall, it was a great experience, and I hope this gives some idea about the journey.  Sarve Janaha Sikhino bhavantu


Thursday, August 17, 2023

ನಾನೇಕೆ ಕನ್ನಡದಲ್ಲಿಯೇ ಬರೆಯುತ್ತೇನೆ

 ಇದು ನನ್ನೊಡನೆ ವ್ಯವಹಿಸುವರ ಜಿಜ್ಞಾಸೆ.  ಎಲ್ಲ ಸಾಮಾಜಿಕ ತಾಣಗಳಲ್ಲಿ, ನಾನು ಕನ್ನಡದಲ್ಲಿ ಬರೆಯುತ್ತೇನೆ.  ಫೇಸ್ಬುಕ್, ವಾಟ್ಸಾಪ್ ಎಲ್ಲಾ ಕಡೆ ಬರೆಯುತ್ತೇನೆ. ಖಂಡಿತ ನಾನೊಬ್ಬ ಕನ್ನಡ ಪಂಡಿತ ಅಲ್ಲ .  ಬರೆದು, ಬರೆದು ಅಭ್ಯಾಸವಾಗಿದೆ.  ನಾನು ವೃತ್ತಿಯ ಕಾರಣ ಪ್ರಪಂಚದ ಬಹುತೇಕ ಎಲ್ಲ ಕಡೆ ವ್ಯವಹರಿಸುವ ಅನಿವಾರ್ಯತೆ ಇತ್ತು.. ಇಂಗ್ಲಿಷ್ ಚೆನ್ನಾಗಿ ಬಲ್ಲೆ.  ಕನ್ನಡಾಭಿಮಾನ ಹೆಚ್ಚಿದೆ. ಇಂಗ್ಲಿಷ್ ನಲ್ಲಿ ಬರೆದದ್ದು ಈ ಬ್ಲಾಗ್ ನಲ್ಲಿ ಇದೆ.  ನನ್ನ ಮೊದಲ ಆದ್ಯತೆ, ಕನ್ನಡ ಕಾರಣ ಹೀಗಿದೆ.

ಇದು 1992 ರಲ್ಲಿ ನಡೆದ್ದದ್ದು.  CMC ಎಂಬ ಸಾರ್ವಜನಿಕ ಸಂಸ್ಥೆಯಲ್ಲಿ ವೃತ್ತಿ ಆರಂಭಿಸಿದ್ದೆ.  ಅಲ್ಲಿ ತರಭೇತಿಗಾಗಿ ಅಂದಿನ ಮದ್ರಾಸು (ಇಂದಿನ ಚೆನ್ನೈ ) ಗೆ ಹೋಗಿದ್ದೆ.  ನಮ್ಮ ತಂಗುದಾಣ ಕೀಲ್ಪಾಕ್ ಹುಚ್ಚಾಸ್ಪತ್ರೆಗೆ ಹತ್ತಿರ ಇತ್ತು. 😉😁😁 ಕಛೇರಿ ಅಣ್ಣಾ ಸಾಲೆ ಯಲ್ಲಿ ಇತ್ತು.  ನಾವು ಹೊರಗಿರುವ ಕಾರಣ ದಿನ ಭತ್ಯೆ ನೀಡುತ್ತಿದ್ದರು.  ಅದರಲ್ಲಿ ಹಣ ಉಳಿಸುವುದಕ್ಕೆ, ಟ್ಯಾಕ್ಸಿ, ಆಟೋ ಬಿಟ್ಟು, ಸಾರ್ವಜನಿಕ ಬಸ್ ನಲ್ಲಿ ಹೋಗುತ್ತಿದ್ದೆವು.  ಬಸ್ ಮೇಲೆ ತಮಿಳಿನಲ್ಲಿ ಮಾತ್ರ ಬರೆದಿರುತಿದ್ದರು.  ಎಲ್ಲ ವ್ಯವಹಾರ ತಮಿಳು ನಲ್ಲಿಯೇ ! ನಾನು ತಮಿಳು ಲಿಪಿ ಕಲಿಯಬೇಕಾಯಿತು.  ಕಚೇರಿಯಲ್ಲಿ ಕೂಡ, ಸಾಕಷ್ಟು ಸೀನಿಯರ್ಸ್ ಅವರವರಲ್ಲಿ ತಮಿಳುನಲ್ಲಿಯೇ ವ್ಯವಹರಿಸುತಿದ್ದರು.  ಅಲ್ಲಿ ವೃತ್ತ ಪತ್ರಿಕೆಗಳು ವಾರ/ ಮಾಸ ಪತ್ರಿಕೆಗಳು ತಮಿಳು ಭಾಷೆಯಲ್ಲಿ. ಅವರ ಭಾಷಾಭಿಮಾನ ದೊಡ್ಡದು.  ನಾಡಿನ ಬಗ್ಗೆ ಅವರಿಗೆ ಹೆಮ್ಮೆ ಇದೆ. ಒಂದು ವರ್ಷಕ್ಕೂ ಹೆಚ್ಚು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದ ನನಗೆ, ವ್ಯತ್ಯಾಸ ದೃಗ್ಗೋಚರ ಆಯಿತು.  


ಇನ್ನೊಂದು ಅನುಭವ, ಕಾಂಪ್ಯಾಕ್ ಎನ್ನುವ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗ ಮಾಡುತಿದ್ದೆ.  2002 ರಲ್ಲಿ ತರಬೇತಿಗಾಗಿ, ದಕ್ಷಿಣ ಕೊರಿಯಾದ ಸಿಯೋಲ್ ಗೆ ಹೋಗಿದ್ದೆ.  ನಮ್ಮ ಮಾರ್ಗದರ್ಶಕ ಆಸ್ಟ್ರೇಲಿಯಾ ದೇಶದವನು.  ಇಬ್ಬರು ಸ್ಥಳೀಯರು ಮತ್ತೋರ್ವ ಇಂಡೋನೇಷ್ಯಾದಿಂದ ಬಂದಿದ್ದ.  ನಾವು ಪ್ರಸಿದ್ಧ ಕಂಪನಿ ಸ್ಯಾಮ್ಸಂಗ್ ನಲ್ಲಿ ಗ್ಲೋಬಲ್ ಸರ್ವರ್ಸ್ ಇನ್ಸ್ಟಾಲ್ ಮಾಡುವ ಮೂಲಕ ಕಲಿಯ ಬೇಕಿತ್ತು.  ವೃತ್ತಿಯ ಬಗ್ಗೆ ಹೆಚ್ಚು ಬೇಡ.  ಅಲ್ಲಿ ಎಲ್ಲಾರೂ ಕೊರಿಯನ್ ಮಾತಾಡುತಿದ್ದರು.  ಇಂಗ್ಲಿಷ್ ಬರುವುದೇ ಇಲ್ಲ. ಸಾಮಾನ್ಯ ವ್ಯವಹಾರ ತುಂಬಾ ಕಷ್ಟ. ಲಿಫ್ಟ್ ಗಳಲ್ಲಿ ಮೆಟ್ರೋ ಗಳಲ್ಲಿ ಅವರ ಭಾಷೆಯಲ್ಲಿಯೇ ನಿರ್ದೇಶನ ನೀಡುತಿದ್ದರು.  ಆದರೆ ಜನ ಒಳ್ಳೆಯವರು.   ನನ್ನ ಗಾಜಿನ ಕನ್ನಡಕ ಒಡೆದು ಹೋಯ್ತು.  ತುಂಬಾ ಕಷ್ಟ ನನಗೆ.  ಕಣ್ಣು ಪರೀಕ್ಷೆ ಮಾಡಲು ಹೋದರೆ,  ಲಿಪಿ ಕೂಡಾ ಅವರದ್ದೇ ಭಾಷೆ.  ಮನೆಯಿಂದ ಕನ್ನಡಕದ ಸಂಖ್ಯೆ ತರಿಸಿ.. ಮಾಡಿಸಿಕೊಳಬೇಕಿತ್ತು..  ತಕ್ಷಣ ಮಾಡಿಕೊಟ್ಟರು.  ಇಲ್ಲಿ ಅರಿತ ವಿಷಯ, ಭಾಷಾಭಿಮಾನ ಇದ್ದರೂ, ಬೇರೆಯವರಿಗೆ ಸಹಾಯ ಮಾಡುವ ಅವರ ಮನೋಧರ್ಮ.  


ಈ ಎರಡೂ ಅನುಭವಗಳು ನನ್ನ ಸಂಕಲ್ಪ ದೃಢ ಮಾಡಿದೆ.  ಆದಷ್ಟೂ ಕನ್ನಡದಲ್ಲಿಯೇ ವ್ಯವಹಾರ.   ನಾವು ಕನ್ನಡ ಬಿಟ್ಟರೆ, ಇಂಗ್ಲೆಂಡ್ ನಲ್ಲಿ ಮಾತಾಡುತ್ತಾರ ?! ಸಂಖ್ಯೆ ಮರೆತಿದ್ದೇವೆ.  ನಿಮ್ಮ ಮೊಬೈಲ್ ಸಂಖ್ಯೆ ಕನ್ನಡದಲ್ಲಿ ಹೇಳಿ ನೋಡುವ !!  ತರಕಾರಿ, ಹಣ್ಣುಗಳನ್ನು ಕನ್ನಡದಲ್ಲಿಯೇ ಹೇಳೋಣ.  ಹತ್ತಾರು ವರ್ಷಗಳ ಕಾಲ ಬೆಂಗಳೂರಿನಲ್ಲಿ ಇದ್ದರೂ ಕನ್ನಡ ಕಲಿಯುವ ಪ್ರಮೇಯ ಬರುವುದಿಲ್ಲ.  ಕಲಿಸೋಣ. ನಾವು ಅವರ ಭಾಷೆ ಮಾತಾಡುವ ಅಗತ್ಯ ಇಲ್ಲ


ಸಿರಿಗನ್ನಡಂ ಗೆಲ್ಗೆ.. ಸಿರಿಗನ್ನಡಂ ಬಾಳ್ಗೆ, ಸಿರಿಗನ್ನಡಂ ಗಲ್ಲಿ ಗಲ್ಲಿಗೆ... ಏನಂತೀರ ?!!

Sunday, March 27, 2022

ವೃಂದಾವನ ಯಾತ್ರೆ.

 ಬಹಳ ದಿನಗಳ ನಂತರ ಬರೆಯುತ್ತಿದ್ದೇನೆ. ನಾನು ಸಾಹಿತಿಯಲ್ಲ. ಮಾಡಿದ ಯಾತ್ರೆಯ ಅನುಭವ ಹಂಚಿದರೆ.. ಯಾರಿಗಾದರೂ ಉಪಯೋಗವಾಗಬಹುದು ಎನ್ನುವ ನಿರೀಕ್ಷೆ.

  ISKCON,  ಮಂಗಳೂರು,  4 ದಿನಗಳ ವೃಂದಾವನ, ಮಥುರ.. ಯಾತ್ರೆ ಆಯೋಜಿಸಿ ತಿಳಿಸಿದಾಗ  register ಮಾಡಿದೆ, ನನ್ನೊಡನೆ 500 ಭಕ್ತಾದಿಗಳು ಬರುತ್ತಾರೆ ತಿಳಿದು ಸಂತೋಷವಾಯಿತು.  ಇಸ್ಕಾನ್, ನಿಮಗೂ ತಿಳಿದಿರುವ ಹಾಗೆ ಎಲ್ಲಾವನ್ನೂ ಅಚ್ಚುಕಟ್ಟಾಗಿ ಮಾಡುತ್ತಾರೆ. ಸಮಯ ಸರಿಯಾಗಿ ಎಲ್ಲಾ ಕಾರ್ಯಕ್ರಮ ನಡೆಯುತ್ತವೆ.. ಪ್ರತಿದಿನದ ಕಾರ್ಯಕ್ರಮ, ತಂಗುದಾಣ - ಕೊಠಡಿ ಸಂಖ್ಯೆ ಕೂಡ ಮೊದಲೇ ತಿಳಿಸಿದ್ದರು !   ಯಾತ್ರೆ 4 ದಿನವಾದರೂ ಪ್ರಯಾಣ ಸೇರಿ ಒಂದು ವಾರ ಹೊರಗಿರಬೇಕಾಗುತ್ತದೆ.  36 ಗಂಟೆಗಳ ರೈಲ್ ಪ್ರಯಾಣ, ವಾಪಸ್ಸು ವಿಮಾನಯಾನದ ಪೂರ್ವಸಿದ್ಧತೆ ಮಾಡಿದ್ದಾಗಿತ್ತು


ದಿನ 0 - ಒಂದು ದಿನ ಬೇಗ ತಲುಪಿದ್ದು ಎರಡು ಮುಖ್ಯ ದೇವಸ್ಥಾನಗಳನ್ನು ನೋಡಿದೆವು.  ಒಂದು ಇಸ್ಕಾನ್ ದೇವಸ್ಥಾನ.  ಊರಿನ ಮಧ್ಯೆಯಲ್ಲಿರುವ ಇದನ್ನು ಯಾರಾದರೂ ಸುಲುಭವಾಗಿ ತೋರಿಸುತ್ತಾರೆ. ಭವ್ಯ ಅಮೃತಶಿಲೆ ಕಟ್ಟಡ.  ಪ್ರವೇಶಿಸಿದಂತೆ.. ಮುಂದೆ ಪ್ರಭುಪಾದರ ಸ್ಥಳ, ಅದೇ ಮಹಡಿಯಲ್ಲಿ ನಾಮ ಸಂಕೀರ್ತನೆಗೆ ಅವಕಾಶ.. ಮುಂದೆ ಹೋದರೆ.. ಮಧ್ಯೆ ಜಾಗ ಬಿಟ್ಟು ಸುತ್ತಲೂ ಕಟ್ಟಿರುವ ಮಂದಿರ.. ಎಂದಿನಂತೆ, ಮಧ್ಯೆ ಕೃಷ್ಣ ಬಲರಾಮ, ಬಲ ಬದಿಯಲ್ಲಿ ರಾಧ ಕೃಷ್ಣ, ಎಡಬದಿಯಲ್ಲಿ ಗೌರಂಗ, ನಿತ್ಯಾನಂದ..  ತುಂಬಾ ಚೆನ್ನಾಗಿ ಅಲಂಕಾರ ಮಾಡಿರುತ್ತಾರೆ.. ಬೆಂಗಳೂರಿನ ಇಸ್ಕಾನ್ ನೋಡಿದ್ದರೆ.. ಇದು  ಚಿಕ್ಕದು.. ಆದರೆ ಮಹತ್ವದ್ದು.  ಊರಿನಲ್ಲಿ ಇರುವ ಎಷ್ಟೊಂದು ದೇವಸ್ಥಾನಗಳನ್ನು,  ಪ್ರಭುಪಾದರ ಶಿಷ್ಯರು ಕಟ್ಟಿಸಿದ್ದಾರೆ.. ಎಲ್ಲವೂ ವಿಶೇಷ..

ಎರಡನೇ ದೇವಸ್ಥಾನ ರಾಧ ಪ್ರೇಮ ಮಂದಿರ.. ಇದು ಕೃಪಾಳು ಮಹಾರಾಜ್ ಎಂಬ ಗುರುಗಳು ಕಟ್ಟಿಸಿರುವ ದೊಡ್ಡ ದೇವಸ್ಥಾನ. ಸುಂದರ ಗೋಪುರಗಳು ಅತೀ ಮೆರಗು ಕೊಡುತ್ತವೆ.. ಬೆಳ್ಳಗಿನ ಅಮೃತ ಶಿಲೆ.. 10 ವರ್ಷಗಳ ಕಟ್ಟಿಸಿದ ಮಂದಿರ 2013 ಕ್ಕೆ ಪೂರ್ಣಗೊಂಡಿದೆ.  ಮಂದಿರದ ಸುತ್ತಲೂ, ರಾಧ ಕೃಷ್ಣರ ವಿವಿಧ ಲೀಲೆಗಳನ್ನು ತುಂಬಾ ಆಲಂಕರವಾಗಿ ಮಾಡಿದ್ದಾರೆ.   ಸದಾ ನೀರು ಬೀಳುತ್ತಿರುವ ಗೋವರ್ಧನ ಗಿರಿ, ಗೋ ಪಾಲ, ಉಯ್ಯಾಲೆ ಆಡುತ್ತಿರುವ ರಾಧಾಕೃಷ್ಣ ಮತ್ತು ಗೋಪಿಯರು,  ಹೋಲಿ ಪಿಚಕಾರಿಯೊಡನೆ ನಲಿಯುತ್ತಿರುವ ದೃಶ್ಯ, ಕಾಳಿಂಗ ಮರ್ಧನ... ಎಷ್ಟೊಂದು ಸ್ವಚ್ಛ ವಾಗಿ ಇಟ್ಟಿದ್ದಾರೆ.  ದೊಡ್ಡ LCD ಸ್ಕ್ರೀನ್, ಸಂಗೀತ ಕಾರಂಜಿ. ಎನ್ನು ವಿಶೇಷ..  ಮಂದಿರದ ಒಳಗಿರುವ ಮೂರ್ತಿಗಳೂ ಅತೀ ಸುಂದರ.. 

ದಿನ 1 :  ದಿನಚರಿ ಶುರುವಾಯಿತು.  ಬೆಳಿಗ್ಗೆ 4 10 ಆರತಿಯಲ್ಲಿ ಭಾಗವಹಿಸುವುದು ಅವಶ್ಯ.  ಕೀರ್ತನೆ ನಿರಂತರವಾಗಿರುತ್ತದೆ.   ನಾವು ಅದರಲ್ಲಿ ಭಾಗವಹಿಸಿದ್ದು.   ತಿಂಡಿಯ ನಂತರ ವೃಂದಾವನ  ಸುತ್ತುವುದು ಕಾರ್ಯಕ್ರಮ.  ಮೊದಲು ಕಾಳಿಂಗ ಮರ್ದನದ. ಜಾಗಕ್ಕೆ ಹೋದೆವು.  ಯಮುನಾ ನದಿಯಲ್ಲಿ ಈ ಕೃಷ್ಣ ಲೀಲೆ ನಡೆದ್ದದ್ದು.  . ಕೃಷ್ಣ ಏರಿದ ಮರ ತೋರಿಸುತ್ತಾರೆ. ಅಲ್ಲಿಂದ ಸರ್ಪದ ಮೇಲೆ ನರ್ತಿಸುತ್ತಾ  ಆಡಿದ್ದು.  ಆದರೆ ಯಮುನಾ ಹಿಂದೆ ಸರಿದಿದೆ..  ಸುಮಾರು ದೂರದಲ್ಲಿ ಯಮುನೆ ಹರೆಯಿತ್ತಾಳೆ.  ನಂತರ ಸುಮಾರು ಮಂದಿರಕ್ಕೆ ಹೊದೆವು.  ಒಂದೊಂದಕ್ಕೂ ವಿಶೇಷ ಇದೆ.. ಈ ಮಂದಿರವನ್ನು ಪ್ರಭುಪಾದರ ನಂತರ ಬಂದ ಗುರುಗಳು ಕಟ್ಟಿಸಿದ್ದು. ಎಲ್ಲಾ ಮಂದಿರದ ಬಗ್ಗೆ ಬರೆಯುವ ಬದಲು  ಲಿಂಕ್ ಕೊಡುತ್ತೇನೆ. 

https://drive.google.com/drive/my-drive


ವೃಂದಾವನದಲ್ಲಿ ರಸ್ತೆಗಳು ಕಿರಿದು.  ಆಟೋಗಳ ಹಾವಳಿ.  ಹಾರ್ನ್ ಮಾಡುತ್ತಾ ಕಾಲು ಮೇಲೆ ಬಿಡುತ್ತಾರೆ...ಇಲ್ಲಿ ಕೋತಿಗಳು ತುಂಬಾ ತೊಂದರೆ ಕೊಡುತ್ತವೆ.  ಏನು ಸಿಕ್ಕಿದ್ದರೂ, ಮೊಬೈಲ್, ಪರ್ಸ್, ಕೊನೆಗೆ ಕನ್ನಡಕ ಕೂಡ  ತೆಗೆದು ಓಡುತ್ತವೆ.  ನನ್ನ ಕನ್ನಡಕ ಕಿತ್ತುಕೊಂಡು ಹೋಯ್ತು.. ಹೆಲ್ಪ್ ಹೆಲ್ಪ್ ಎಂದು ಜೋರಾಗಿ ಕೂಗಿದೆ.  ಸ್ಥಳೀಯ ಹುಡುಗ ಪ್ರೂಟಿ ಕೊಡಿ ಎಂದ .. ಅವನು ತಂದು ಅದಕ್ಕೆ ಕೊಟ್ಟ ಮೇಲೆ.. ಅದು ಕನ್ನಡಕ ಎಸೆಯಿತು.. ಹೋದ ಜೀವ ಮರಳಿ ಬಂದ ಹಾಗಾಯ್ತು.. ಇನ್ನೆಬ್ಬರಿಗೂ ಹೀಗೆ ಆಯ್ತು.. ಅವ್ರಿಗೆ ಸಿಗಲೇ ಇಲ್ಲ.. 


ದಿನ 2 :  ತಿಂಡಿಗೆ ಮೊದಲೇ ಗೋಶಾಲೆಗೆ ಹೋದೆವು.  ಇದು ಇಸ್ಕಾನ್ ಸಂಸ್ಥೆ ನಡೆಸುತ್ತದೆ.  ಸುಮಾರು 20 ಎಕರೆ ಜಾಗದಲ್ಲಿ 1000 ಕ್ಕೂ ಹೆಚ್ಚು ಹಸು/ ಎತ್ತುಗಳಿವೆ.. ಅವು ಸ್ವಚ್ಛಂದವಾಗಿ ಓಡಾಡಿಕೊಂಡಿವೆ. ವಿಶೇಷ ಪೇಯ ತಿನ್ನಿಸಿದೆವು..  ಯಜ್ಞ ಶಾಲೆ, research ಇನ್ಸ್ಟಿಟ್ಯೂಟ್.  ಗೋವಿನ ಉತ್ಪತ್ತಿಯನ್ನು ಮಾರಾಟ  ಮಾಡುತ್ತಾರೆ

ನಂತರ ಬಸ್ ನಲ್ಲಿ ಹೊರಟೆವು.  ಮೊದಲು  ರಾಧರಾಣೀ ಬೆಳೆದ, ಲೀಲೆ ತೋರಿಸಿದ ಬರ್ಸಾನ ಎಂಬ ಜಾಗ.. ಒಂದು ಸಣ್ಣ ಪರ್ವತದ ಮೇಲಿದೆ.  ಸುಂದರವಾದ ಮಂದಿರ.. ಇಲ್ಲಿ ಲಾಡ್ಲಾ ಲಾಡ್ಲಿ ಅಂತ ಪುಟ್ಟ ಕೃಷ್ಣ ರಾಧೇಯರ ವಿಗ್ರಹವಿದೆ..  ಫೋಟೋ ತೆಗೆಯಲು ಈ ಎಲ್ಲಾ ದೇವಸ್ಥಾನಗಳ ಪ್ರಾಂಗಣದಲ್ಲಿ ಬಿಡುವುದಿಲ್ಲ.  ಕಥೆಯ ಪ್ರಕಾರ ಘೋರ ತಪಸ್ಸು ಮಾಡಿದ ಬ್ರಹ್ಮನ ಒಂದು ಶಿರಸ್ಸು ಮೇಲೆ ಈ ರಾಧ ಮಂದಿರವಿದೆ.

ಆಮೇಲೆ ಕೃಷ್ಣ ಬೆಳೆದ ನಂದಗಾವ್ ಗೆ ಹೋದೆವು. ಇದು ಕೂಡ ಒಂದು ಸಣ್ಣ ದಿಬ್ಬದ ಮೇಲಿದೆ.  ಕೃಷ್ಣ, ಬಲರಾಮ, ಯಶೋಧ ಮತ್ತು ಆಕೆಯ ಪತಿಯ ವಿಗ್ರಹಗಳಿವೆ.  ಸಂಕೀರ್ಣ ಪ್ರವೇಶ.. ಒಳಗೆ ಹೋಗಿ  ಬರುವುದು ಸಾಹಸ.  ಬರ್ಸಾನ ಮತ್ತು ನಂದಗಾವ್ ಸುಮಾರು 7 ಕಿಮೀ ಅಂತರದಲ್ಲಿದೆ.  ಕೃಷ್ಣ ರಾಧೇಯರು ಪಂಜಿನ ಮೂಲಕ, ಸಂಜ್ಞ ಭಾಷೆಯಲ್ಲಿ ಮಾತನಾಡುತ್ತಿದ್ದರಂತೆ.. !!!

ದಿನ 3 :  ಸಮಯ ಉಳಿಯಲೆಂದು, ತಿಂಡಿ ಕಟ್ಟಿಕೊಂಡು ಹೊರೆಟೆವು.  ಮೊದಲಿಗೆ ಮಥುರನಲ್ಲಿರುವ ಕೃಷ್ಣನ ಜನ್ಮಸ್ಥಾನ.  ಇಲ್ಲಿ ಅತೀ ಹೆಚ್ಚಿನ ಸುರಕ್ಷತೆಯ ವ್ಯವಸ್ಥೆ.  ಮೊಬೈಲ್ ಕ್ಯಾಮೆರಾ ಯಾವುದೇ electronic ಉಪಕರಣಗಳಿರಲಿ, ವಾಚು ,  ನೀರಿನ ಬಾಟಲ್ ಕೂಡ ಬಿಡುವುದಿಲ್ಲ.  ಸುಮಾರು 2 ಕಿ ಮಿ ನಡೆದು ಎಲ್ಲಾ ಚೆಕ್ ಮಾಡಿದಮೇಲೆ ಒಳಗೆ ಪ್ರವೇಶ.   ಸುರಂಗದಂತೆ ನಡೆದು ಯಾವುದೇ ಕಿಟಕಿ ದ್ವಾರಗಳು ಇಲ್ಲದ.. ಅಂದಿನ ಜೈಲ್  ಒಳಗೆ ಕಾಲಿಟ್ಟಾಗ ದಿವ್ಯ ಕೃಷನ ಜನ್ಮಸ್ಥಳ ಕಾಣುತ್ತದೆ.. ಒಂದು ಬಾಲ ಕೃಷ್ಣನ ಪ್ರತಿಮೆ ಇಟ್ಟು ಸರಳ ಅಲಂಕಾರ ಮಾಡಿದ್ದರು.   ಪಕ್ಕದಲ್ಲಿಯೇ ದೊಡ್ಡ ಮಸೀದಿ.. machine gun ಹಿಡಿದ ರಕ್ಷಣಾ ಪಡೆ ಸುತ್ತಾ ಕಾವಲಿಟ್ಟಿದ್ದಾರೆ.   ಸ್ವಲ್ಪ ಪಕ್ಕದಲ್ಲಿ ಮೇಲೆ ಭವ್ಯವಾದ ಬಿರ್ಲಾ ಮಂದಿರ ಎಂದು ಗುರುತಿಸಿಕೊಂಡಿರುವ  ಕೃಷನ  ಮುದ್ದಾದ ವಿಗ್ರಹ ಬಲರಾಮ, ದೇವಕಿ ವಸುದೇವರ ಮೂರ್ತಿ ಗಳಿವೆ.   ಪ್ರದಕ್ಷಿಣೆ ಹಾಕಿದಾಗ ಎದರು ನಿಲ್ಲುವ ಅದೇ ಮಸೀದಿ 😶😶

ಅಲ್ಲಿಂದ ರಾಧರಾಣಿ ಸಿಕ್ಕಿದ ರಾವಲ್ ಎಂಬ ಜಾಗ ದೊರೆಯುತ್ತದೆ.  ಕೃಷ್ಣನ ಜನ್ಮದಲ್ಲಿ ನಡೆದ ಕಥೆ ಪ್ರಚಲಿತೆ.. ಅಷ್ಟೇ ರೋಚಕವಾದ ರಾಧೆ ಕಥೆ ಅಷ್ಟು ತಿಳಿದಿರಲಿಲ್ಲ.   ತಂದೆ ಬ್ರಾಹ್ಮೀ ಮಹೂರ್ತದಲ್ಲಿ ಸ್ನಾನಕ್ಕೆಂದು ಹತ್ತಿರದಲ್ಲಿ ಯಮುನೆಗೆ ಹೋದಾಗ.. ಕಮಲದ ನಡುವೆ ಪ್ರಕಾಶಮಾನವಾಗಿ ಆಗತಾನೆ ಹುಟ್ಟಿರುವ ಹೆಣ್ಣು ಮಗು ಕಂಡ.. ಯಾರೂ ಕಾಣದಾಗ ತನ್ನ ಮನೆಗೆ ತಂದು ಪ್ರೀತಿಯಿಂದ ಸಾಕಿದ.  ಅಷ್ಟು ತೇಜೋಮಯವಾದ ಬಾಲಕಿ ಕಣ್ಣು ಬಿಡಲಿಲ್ಲ, ಮಾತು ಆಡಲಿಲ್ಲ.. ಕಿವಿ ಕೇಳಲಿಲ್ಲ.. ದುಃಖದಿಂದಿರುವಾಗ,  ನಾರದರು ಬಂದು, ಬಾಲಕಿಗೆ ವರ್ಷದ ನಂತರ ದೊಡ್ಡ ಯಜ್ಞ ಮಾಡಿ , ಬೃಜ ಕ್ಷೇತ್ರದಲ್ಲಿ ಇರುವ ಎಲ್ಲರನ್ನೂ ಕರೆದು ಉತ್ಸವ ಮಾಡು ಎಂದು ಸೂಚಿದರು.   ಅಂತೆ ಮಾಡಿದಾಗ, ನಂದಗಾವ್ ಇಂದ ಕೃಷ್ಣ ತಂದೆ ತಾಯಿಯರೊಡನೆ ಬಂದ.. 6 ತಿಂಗಳ ಪೋರ ಎಲ್ಲರನ್ನೂ ಆಕರ್ಷಿಸಿದ್ದ.   ರಾಧೇಯನ್ನು ಕೂಡಿಟ್ಟ ಕೋಣೆಗೆ ಬಂದ.   ರಾಧೆ ಕಣ್ಣು ತೆರೆದಳು.  ನಿಧಾನವಾಗಿ 'ಶ್ಯಾಮ್ ಶ್ಯಾಮ್' ಎಂದು ಕರೆದಳು.. ಕಿವಿಕೇಳಿಸಿದವು..  ರಾಧೆ ಕೃಷ್ಣನಿಗಿಂತ ದೊಡ್ಡವಾಳದರೂ ಅನನ್ಯ ಭಕ್ತಿ ಪ್ರೇಮದ ಸಂಖ್ಯೆಯವಾದಳು.. ಈಗ ಅಲ್ಲೊಂದು ರಾಧೆಯ ಮಂದಿರ ಇದೆ.. ಅಂಬೆಗಾಲಿಡುತ್ತಿರುವ ರಾಧೆಯ ಮುದ್ದು ವಿಗ್ರಹ ಇದೆ

ನಂತರ ನಾವು ರಮನ್ ರೇತಿ ಎಂಬ ಸ್ಥಳಕ್ಕೆ ಬಂದೆವು.. ಕೃಷ ಬಲರಾಮ ಆಡಿದ ವಿಶಾಲ ಜಾಗ. ತೆಳ್ಳಗಿನ ಮರಳು.  ಈ ಮಣ್ಣಿನಲ್ಲಿ ಹೊರಲಾಡುವುದು, ಆ ಮಣ್ಣನು ತೆಗೆದುಕೊಂಡು ಹೋಗುವುದು ಪ್ರತೀತಿ.  ಕೃಷ್ಣ ನಡೆದಾಡಿದ ಅವನ ಪಾದದ ದೂಳಿ ನಮಗೂ ಸೋಕಲಿ ಎಂದು.    ಈ ಮರಳನ್ನು ನೋಡಿದರೆ ಪ್ರಾಯಶಃ  ಯಮುನೆಯ ದಡವಾಗಿತ್ತೇನೋ.. ಅಲ್ಲೊಂದು ಮಂದಿರ ಇದೆ..


ದಿನ 4 : ಈ ದಿನ ಸಂಪೂರ್ಣವಾಗಿ ಗೋವರ್ಧನ ಗಿರಿಯ ಪ್ರದಕ್ಷಿಣೆ..  21 ಕಿ ಮಿ ಇದೆ ಅಂತ ಹೇಳಿದರು. ನನ್ನ ಪೇಡಾಮಿಟರ್ 33 ಕಿ ಮಿ ನಡೆದಿದ್ದೆವು.. ಈ ಪರ್ವತ ಶ್ರೇಣಿ ವಿಶೇಷವಾಗಿದೆ.   ಎಲ್ಲೂ ಎತ್ತರವಿಲ್ಲ..  ಸುಮಾರು 50 ಅಡಿ ಇರಬಹುದು.    ಆದರೆ ವಿಶಾಲ ಜಾಗದಲ್ಲಿ ಹರಡಿದೆ. ಪ್ರಾಯಶಃ ಮೇಲಿಂದ ನೋಡಿದರೆ ಛತ್ರಿಯಂತೆ ಕಾಣಬಹುದು.   ಅದೇ ಅಲ್ಲವೇ ಕೃಷ್ಣ ಕಿರುಬೆರಲಿನಲ್ಲಿ ಎತ್ತಿ ವರುಣನ ಅಹಮ್ ಮುರಿದ್ದದ್ದು.  ಇಲ್ಲಿ ಹಲವಾರು ಕ್ಷೇತ್ರಗಳಿವೆ.  ನರಸಿಂಹ ಸ್ವಾಮಿಯ ದೇವಸ್ಥಾನ ಗೋವಿಂದ ಕುಂಡ, ಶ್ಯಾಮ್ ಕುಂಡ ಮುಂತಾದ ದೇವಸ್ಥಾನಗಳಿವೆ.  ಸುಮಾರು 4 ಗಂಟೆಗೆ ನಡೆಯಲು ಶುರುಮಾಡಿದ ನಾವು, ಪ್ರರಿಕ್ರಮ ಮುಗಿಸಿದಾಗ 10: 30.  ರಾಧಾಕುಂಡಲ್ಲಿ ವಿಶಾಂತಿ ಪಡೆದುಕೊಂಡು ಮರಳಿದೆವು

ಧನ್ಯ ಅನುಭವ,  ಪ್ರತಿ ದಿನ 4 ಘಂಟೆಗೆ ತಯಾರಿರುವುದು, ಸಂಜೆ 5 ರಿಂದ 8 ಘಂಟೆ ತನಕ ಪ್ರವಚನ, ಕೀರ್ತನ ಅಪೂರ್ವ ಆನಂದ ತಂದಿತು.  5 ದಿನಗಳ ಸುಂದರ ಕ್ಷಣಗಳ ನೆನಪು ಹೊತ್ತು ಮರಳಿದವು. 



Saturday, December 21, 2019

ಮೂಕಜ್ಜಿಯ ಕನಸುಗಳು.

ಮೂಕಜ್ಜಿಯ ಕನಸುಗಳು.. ಎಲ್ಲಾ ಸಹೃದಯರು ನೋಡಲೇಬೇಕಾದ ಚಿತ್ರ..ಈ ಚಿತ್ರ ವೀಕ್ಷಿಸಿದ್ದು ನಮ್ಮ ಅದೃಷ್ಟ.  ಶಿವರಾಮ ಕಾರಂತರಿಗೆ ಜ್ಞಾನಪೀಠ ತಂದು ಕೊಟ್ಟ ಮೇರು ಕೃತಿ.

P ಶೇಷಾದ್ರಿಯವರ ನಿರ್ದೇಶನ,  ಮುಖ್ಯ ಪಾತ್ರದಲ್ಲಿ ಮೂಕಜ್ಜಿಯಾಗಿ B ಜಯಶ್ರೀ, ಭಾಸ್ಕರ್ ಅವರ ಛಾಯಾಗ್ರಹಣ.. ಮೃಷ್ಟಾನ್ನ ಭೋಜನ.   ಬೇರೆ ಚಿತ್ರದಂತೆ ಹಾಡಿಲ್ಲ, ಡಾನ್ಸ್ ಇಲ್ಲ.. ಫೈಟಿಂಗ್ ಇಲ್ಲ.  ಆದರೂ ಕತೆಯ ಹಂದರ, ಹೇಳುವ ಬಿಗಿತನ  ಎಲ್ಲೂ ಬೋರ್ ಆಗುವುದಿಲ್ಲ.  ಆಲದ ಮರದ  ಕೆಳಗೆ ಕುಳಿತ ಬಾಲ ವಿಧವೆ ಮೂಕಾಂಬಿಕಾ, ಮೂಕಿ ಮತ್ತು ಮೂಕಜ್ಜಿ ಆದದ್ದೇ ಮುಖ್ಯ ಕಥೆ.  ಆಡುವ ವಯಸ್ಸಿನಲ್ಲಿ ವಿಧವೆಯಾಗಿ, ಐಹಿಕ ಆಸೆ ಬಿಟ್ಟು, ಪ್ರಯಾಣದುದ್ದಕ್ಕೂ ಪಟ್ಟ ಪಾಡು, ನೋಡಿಯೇ ತೀರಬೇಕು..
 ದೇವರನ್ನೇ ಪ್ರಶ್ನೆ ಮಾಡಿ, ಎಲ್ಲರ ಪ್ರಶ್ನೆಗೆ ಸಮಂಜಸ ಉತ್ತರ ಕೊಡುವ ಅಜ್ಜಿ, ಕೆಲವೊಮ್ಮೆ ಅತಿಮಾನುಷ ಶಕ್ತಿಯನ್ನು ತೋರಿಸುತ್ತಾರೆ.  ದೈಹಿಕ ಆಸೆಗಾಗಿ ಗಂಡನನ್ನು ಬಿಟ್ಟು, ಸಾಹುಕಾರನ ಸಹವಾಸ ಮಾಡಿದ ನಾಗಿ ರಮಣ್ಣರ ಕಥೆ ಒಂದಾದರೆ, ಅದನ್ನು ಸಮರ್ಥಿಸುವ ಅಜ್ಜಿ, ಸಲಿಂಗ ಕಾಮ ವಿರೋಧಿಸುತ್ತಾರೆ.

ಹೆಚ್ಚೇನು ಓದಿರದ ಅವರ ಚಿಂತನೆ, ಕೆಲವೊಮ್ಮೆ ತತ್ವ, ಶಾಸ್ತ್ರವಾಗಿ ಕಂಡರೆ, ಅದು ಅವರ ಜೀವನದ ಅನುಭವವಷ್ಟೆ.
ದೇವರು ಇದ್ದಾನೆಯೇ? ಅಂದರೆ 'ದೇವರನ್ನು ನಂಬಿದರೆ ಇದ್ದಾನೆ, ಇಲ್ಲ ಅಂದರೆ ಇಲ್ಲ'. ಅಂತ ಸುಲುಭವಾಗಿ ಉತ್ತರಿಸುತ್ತಾರೆ..

ಒಟ್ಟಿನಲ್ಲಿ, ನಮ್ಮೆಲ್ಲರೊಳಗಿರುವ
ಮಲಕು ಹಾಕುವ ಸ್ವಭಾವವನ್ನು ಅಜ್ಜಿ ಬಿಂಬಿಸುತ್ತಾರೆ..

 ಶಿವರಾಮ ಕಾರಂತರು ಅಜ್ಜಿಯಾ? ಎಂಬ ಸಂಶಯ.
ಚಿತ್ರ  ನೋಡುವ ಪ್ರಯತ್ನ ಮಾಡಿ.. ಉಂಡವನೆ ಕಂಡಿಹನು ಅದರ ಹದನು.