ಮೂಕಜ್ಜಿಯ ಕನಸುಗಳು.. ಎಲ್ಲಾ ಸಹೃದಯರು ನೋಡಲೇಬೇಕಾದ ಚಿತ್ರ..ಈ ಚಿತ್ರ ವೀಕ್ಷಿಸಿದ್ದು ನಮ್ಮ ಅದೃಷ್ಟ. ಶಿವರಾಮ ಕಾರಂತರಿಗೆ ಜ್ಞಾನಪೀಠ ತಂದು ಕೊಟ್ಟ ಮೇರು ಕೃತಿ.
P ಶೇಷಾದ್ರಿಯವರ ನಿರ್ದೇಶನ, ಮುಖ್ಯ ಪಾತ್ರದಲ್ಲಿ ಮೂಕಜ್ಜಿಯಾಗಿ B ಜಯಶ್ರೀ, ಭಾಸ್ಕರ್ ಅವರ ಛಾಯಾಗ್ರಹಣ.. ಮೃಷ್ಟಾನ್ನ ಭೋಜನ. ಬೇರೆ ಚಿತ್ರದಂತೆ ಹಾಡಿಲ್ಲ, ಡಾನ್ಸ್ ಇಲ್ಲ.. ಫೈಟಿಂಗ್ ಇಲ್ಲ. ಆದರೂ ಕತೆಯ ಹಂದರ, ಹೇಳುವ ಬಿಗಿತನ ಎಲ್ಲೂ ಬೋರ್ ಆಗುವುದಿಲ್ಲ. ಆಲದ ಮರದ ಕೆಳಗೆ ಕುಳಿತ ಬಾಲ ವಿಧವೆ ಮೂಕಾಂಬಿಕಾ, ಮೂಕಿ ಮತ್ತು ಮೂಕಜ್ಜಿ ಆದದ್ದೇ ಮುಖ್ಯ ಕಥೆ. ಆಡುವ ವಯಸ್ಸಿನಲ್ಲಿ ವಿಧವೆಯಾಗಿ, ಐಹಿಕ ಆಸೆ ಬಿಟ್ಟು, ಪ್ರಯಾಣದುದ್ದಕ್ಕೂ ಪಟ್ಟ ಪಾಡು, ನೋಡಿಯೇ ತೀರಬೇಕು..
ದೇವರನ್ನೇ ಪ್ರಶ್ನೆ ಮಾಡಿ, ಎಲ್ಲರ ಪ್ರಶ್ನೆಗೆ ಸಮಂಜಸ ಉತ್ತರ ಕೊಡುವ ಅಜ್ಜಿ, ಕೆಲವೊಮ್ಮೆ ಅತಿಮಾನುಷ ಶಕ್ತಿಯನ್ನು ತೋರಿಸುತ್ತಾರೆ. ದೈಹಿಕ ಆಸೆಗಾಗಿ ಗಂಡನನ್ನು ಬಿಟ್ಟು, ಸಾಹುಕಾರನ ಸಹವಾಸ ಮಾಡಿದ ನಾಗಿ ರಮಣ್ಣರ ಕಥೆ ಒಂದಾದರೆ, ಅದನ್ನು ಸಮರ್ಥಿಸುವ ಅಜ್ಜಿ, ಸಲಿಂಗ ಕಾಮ ವಿರೋಧಿಸುತ್ತಾರೆ.
ಹೆಚ್ಚೇನು ಓದಿರದ ಅವರ ಚಿಂತನೆ, ಕೆಲವೊಮ್ಮೆ ತತ್ವ, ಶಾಸ್ತ್ರವಾಗಿ ಕಂಡರೆ, ಅದು ಅವರ ಜೀವನದ ಅನುಭವವಷ್ಟೆ.
ದೇವರು ಇದ್ದಾನೆಯೇ? ಅಂದರೆ 'ದೇವರನ್ನು ನಂಬಿದರೆ ಇದ್ದಾನೆ, ಇಲ್ಲ ಅಂದರೆ ಇಲ್ಲ'. ಅಂತ ಸುಲುಭವಾಗಿ ಉತ್ತರಿಸುತ್ತಾರೆ..
ಒಟ್ಟಿನಲ್ಲಿ, ನಮ್ಮೆಲ್ಲರೊಳಗಿರುವ
ಮಲಕು ಹಾಕುವ ಸ್ವಭಾವವನ್ನು ಅಜ್ಜಿ ಬಿಂಬಿಸುತ್ತಾರೆ..
ಶಿವರಾಮ ಕಾರಂತರು ಅಜ್ಜಿಯಾ? ಎಂಬ ಸಂಶಯ.
ಚಿತ್ರ ನೋಡುವ ಪ್ರಯತ್ನ ಮಾಡಿ.. ಉಂಡವನೆ ಕಂಡಿಹನು ಅದರ ಹದನು.

No comments:
Post a Comment