English version of the same is avaialable here
ಹಿಂದಿನ ಸಿದ್ಧತೆ ಮತ್ತು ಸೂಚನೆ
ಓದುಗರಿಗೆ ಕೆಲವೊಂದು ಅತೀ ಅಗತ್ಯ ಇರುವ ವಿಷಯ ತಿಳಿಸುವ ಪ್ರಯತ್ನ ಇಲ್ಲಿ
1. ನಿಮ್ಮ ಪ್ರಿಪೇಯ್ಡ್ ಮೊಬೈಲ್ ಗೆ ಜಮ್ಮು , ಕಾಶ್ಮೀರ ಮತ್ತು ಲಡಾಕ್ ನಲ್ಲಿ ನಿರ್ಬಂಧ ಇದೆ. ಮೊಬೈಲ್ ಅಗತ್ಯ ಬೇಕಿರುವವರು ಪೋಸ್ಟ್ ಪೇಡ್ ಮಾಡಿಕೊಂಡು ಹೋಗುವುದು ಒಳಿತು . ಸಾಮಾನ್ಯವಾಗಿ ಎಲ್ಲಾ ಹೋಟೆಲ್ ಗಳಲ್ಲಿ wifi ಸಿಗುತ್ತದೆ. ರೂಂ ನಲ್ಲಿ ಇದ್ದಾಗ ಉಪಯೋಗಿಸಬಹದು
2. ಕೆಲವು ಕಡೆ ಉಸಿರಾಟ ಕಷ್ಟ ಸಾಧ್ಯವಾಗಬಹುದು. ಮೊದಲನೆಯದಾಗಿ, ರಕ್ತ ತೆಳು ಮಾಡುವ ಕೆಲವೊಂದು ಔಷಧಿ ತೆಗೆದುಕೊಳ್ಳುವುದು ಒಳ್ಳೆಯದು (ಉಧಾ : Diamox 250); ಆಮೇಲೆ ಕಾರ್ ನಲ್ಲಿ oxygen cylinder ಇರುವುದು ಖಚಿತ ಪಡಿಸಿಕೊಳ್ಳಿ .
3. ರಸ್ತೆಗಳು (?!) ಕೆಲವು ಕಡೆ ತುಂಬಾ ಕೆಟ್ಟದಾಗಿದೆ. ಮಾನಸಿಕವಾಗಿ ತಯಾರಾಗಿ. ಕೀಲೋ ಮೀಟರ್ ಗಟ್ಟಲೆ traffic jam ಆಗುವುದು ಸಹಜ. ತಮ್ಮ ಮುಂದಿನ ಪ್ರಯಾಣ ಸರಿಯಾಗಿ ಪ್ಲಾನ್ ಮಾಡಿಕೊಳ್ಳಿ
4. Lip Balm, ಸನ್ ಕ್ರೀಂ ಕೇವಲ ಆಲಂಕಾರಿಕ ಪ್ರಸಾಧನ ಅಲ್ಲ, ಇಲ್ಲಿ ಅತ್ಯಗತ್ಯ. Thermal dress, ಒಳ್ಳೆಯ ಸ್ವೆಟರ್/ಜಾಕೆಟ್ ಅಗತ್ಯ. ಎಲೆಕ್ಟ್ರಾಲ್ , Dry Fruits ಇರವುದು ಒಳಿತು.
ಸಿಂಹಾವಲೋಕನ
ನಮ್ಮ ಪ್ರಯಾಣದ ಉದ್ದೇಶ ಆದಷ್ಟು ಜಾಗ ನೋಡುವುದು ಮಾತ್ರವಲ್ಲದೆ ಹಣ ಸರಿಯಾಗಿ ಖರ್ಚು ಮಾಡುವುದು. ನಾವು ಸುಮಾರು 8೦೦೦ ಕಿಲೋ ಮೀಟರ್ ಹೋದರು ಪ್ಲೇನ್ ನಲ್ಲಿ ಹೋಗದೆ ರೈಲ್ ನಲ್ಲಿ, ಸಾಧ್ಯವಾದಷ್ಟು ಸಾರ್ವಜನಿಕ ಬಸ್ ನಲ್ಲಿ , ಅಗತ್ಯ ಬಿದ್ದಾಗ ಟ್ಯಾಕ್ಸಿ ಯಲ್ಲಿ ಹೋಗಿದ್ದೆವು. ರೈಲ್ ನ ಎಲ್ಲಾ ಮಜಲು ನೋಡಿದೆವು - ವಂದೆಭಾರತ್, ರಾಜಧಾನಿ ಎಕ್ಸ್ಪ್ರೆಸ್ ನಲ್ಲಿ ಪ್ರಯಾಣ. ನಾವು Vaishno ದೇವಿ /ಕಾಟ್ರಾ, ಶ್ರೀನಗರ್, ಲೇಹ್ -ಲಡಾಕಿನ ಪ್ರಮುಖ ಪಟ್ಟಣ , ನಭ್ಯ ಕಣಿವೆ ಮತ್ತು pangyong ಕೆರೆ ನಾವು ನೋಡಿದ ಪ್ರಮುಖ ಸ್ಥಳಗಳು.
ಶ್ರೀನಗರ್ ಇಂದ ನಾವು ಒಂದು ಸಂಸ್ಥೆಯ (Thrillophollia ) ಸರ್ವಿಸ್ ತೆಗೆದುಕೊಂಡಿದ್ದೆವು. ಅವರು 8 ದಿನ ಮತ್ತು 7 ರಾತ್ರಿ ಎಲ್ಲಾ ಜಾಗಗಳಿಗೆ, ವಸತಿ, ಟ್ಯಾಕ್ಸಿ ಕೊಟ್ಟಿದ್ದರು. ಒಂದು ಮಹಿಂದ್ರ xylo ನಮ್ಮ ಬಳಿಯೇ ಇತ್ತು . ಇದು ಖಂಡಿತ ನಮಗೆ ಅನುಕೂಲ ಆಯಿತು. ಕೊನೆಯಲ್ಲಿ ಲೇಹ್ ನಲ್ಲಿ ನಮ್ಮ ಈ ಪ್ರವಾಸ ಮುಗಿಯುತು. ಮುಂದಿನ ಪ್ರಯಾಣ ನಾವೇ ಮಾಡಿಕೊಂಡಿದ್ದೆವು.
ನಾವು ಮಾಡಿದ ಒಟ್ಟು ಖರ್ಚು ಸುಮಾರು 60,000
ಮೊದಲು ನಾವು ಸಂದರ್ಶಿಸಿದ ಸ್ಥಳ Vaishno ದೇವಿ. ಇದು ಒಂದು ಬೆಟ್ಟದ ಮೇಲಿದೆ. ಇಲ್ಲಿ ಎರಡು ಮೂರು ದಾರಿ ಇವೆ. ನಾವು ಆಯ್ಕೆ ಮಾಡಿಕೊಂಡ ಮಾರ್ಗ ತಾರಾಕೋಟ್ ಎಂಬ ಹೊಸದಾದ ಮಾರ್ಗ. ಇಲ್ಲಿ ಮೊದಲೇ ರಿಜಿಸ್ಟರ್ ಮಾಡಿ RFID ಟ್ಯಾಗ್ ಕೊಡುತ್ತಾರೆ . ಬೇರೆಯ ಮಾರ್ಗದಲ್ಲಿ ಕುದುರೆ ಮೇಲೆ ಮತ್ತು ಡೋಲಿ ( 4 ಜನ ಬುಟ್ಟಿಯಲ್ಲಿ ಹೊತ್ತುಕೊಂಡು ) ಕೂಡಾ ದೊರೆಯುತ್ತವೆ . ನಾವು 1 ಕೀ ಮೀ ದೂರವಾದರೂ ಚೆಂದದ ಹೊಸ ದಾರಿ ಯಲ್ಲಿ ಹೊರಟೆವು. ಇದು 15 ಕೀ ಮೀ ಇರುವ ಮಾರ್ಗ. ಕಷ್ಟ ಪಟ್ಟು, ದಣಿವಾರಿಸಿ ಕೊಂಡು ಹತ್ತಿದಾಗ, ಸುಮಾರು 12 ಘಂಟೆ. ಮಂದಿರದ ಒಳಗೆ ಬಿಡದ ನಮ್ಮ ಕೈ ಚೀಲ, ಮೊಬೈಲ್., ಚಪ್ಪಲಿ ಬಿಡಲು lock ರೂಮ್ ನಲ್ಲಿ ಇಡಲು, ಒಂದು ಘಂಟೆ. ಕ್ಯೂ ನಲ್ಲಿ ನಿಂತು ಧರ್ಶನ ವಾದಾಗ 2 ಗಂಟೆ. ಇಲ್ಲಿ ಲಕ್ಷ್ಮಿ, ಸರಸ್ವತಿ ಮತ್ತು ಕಾಳಿಯವರ ಸಣ್ಣ ಕಲ್ಲುಗಳು ( ಅಲ್ಲಿ ಪಿಂಡಿ ಎನ್ನುತ್ತಾರೆ ), ಎರಡು ಕೋನಗಳಲ್ಲಿ , ದರುಶನ ಮಾಡುವುದು. ರೋಪ್ ವೇ ಮೂಲಕ ಭೈರವನ ಮಂದಿರ ನೋಡಿಕೊಂಡು ಇಳಿಯ ತೊಡಗಿದೆವು . ಇದು 13 ಕೀ ಮೀ ದೂರ. ಅಂತೂ ಕಷ್ಟ ಪಟ್ಟು ಇಳಿದೆವು.
ನಮ್ಮ ಮುಂದಿನ ಸ್ಥಳ ಶ್ರೀನಗರ್. ಟ್ಯಾಕ್ಸಿ ಯಲ್ಲಿ ಹೋಗುತ್ತಿದ್ದಾಗ, ಅತಿ ಹೆಚ್ಚು ಸುರಕ್ಷತೆ ಕಂಡು ಬಂದಿತು. CRPF ಯೋಧರು ಕಡೆ ಪಕ್ಷ 5 ಸ್ಥಳಗಳಲ್ಲಿ ನಿಲ್ಲಿಸಿ ತಪಾಸಣೆ ಮಾಡುತಿದ್ದರು . ಶ್ರೀನಗರದ ವಿಶೇಷ ದಲ್ ಸರೋವರ. ಇದು ಸುಮಾರು 22 ಚದುರ ಕೀ ಮೀ ಇರುವ ದೊಡ್ಡ ಸರೋವರ. ಇಲ್ಲಿ ತಂಗಲು ಹೌಸ್ ಬೋಟ್ ವ್ಯವಸ್ಥೆ ಇದೆ. ನಾವು ಶಿಕಾರ್ ಬೋಟ್ ಹಿಡಿದು ಒಂದು ಗಂಟೆ ಸುತ್ತಿ ಬಂದೆವು. ಅಷ್ಟರಲ್ಲಿ ಮಾರಲು ಬೋಟ್ ಗಳಲ್ಲಿ, ಟೀ/ಕಾಫಿ , ಹಣ್ಣುಗಳು, ಆಭರಣಗಳು,ಬಾರ್ಬೆಕ್ಯೂ ಇತ್ಯಾದಿ ಮಾರುವರು ಬಂದರು. ಇಲ್ಲಿ ತೇಲುವ ಸಂಪೂರ್ಣ ಮಾರುಕಟ್ಟೆ ಇದೆ. ಬಟ್ಟೆಯ ಅಂಗಡಿ, ಐಸ್ಕ್ರೀಮ್, ಮಸಾಲೆ ಪದಾರ್ಥಗಳು ದೊರೆಯುತ್ತವೆ. ಶ್ರೀನಗರ್ ನಲ್ಲಿ wazwan ಹೋಟೆಲ್ ಗಳಿವೆ ಸುಮಾರು 16 ಕೋರ್ಸ ನ ಮಾಂಸಾಹಾರಿ ಭೋಜನ ಇಲ್ಲಿನ ವಿಶೇಷ. ಶ್ರೀನಗರ್ ನ ಹವಾಮಾನ ಅಷ್ಟು ಚಳಿ ಇಲ್ಲದಿದ್ದರೂ ಹಿತವಾಗಿ ಇತ್ತು. ಒಂದು ರಾತ್ರಿ ತಂಗಿತ್ತು ಮುಂದುವರೆದೆವು
ಮುಂದಿನ ಪ್ರಯಾಣ ಲೇಹ್. ಲೇಹ್ ಹೋಗಲು ದಾರಿ ದುರ್ಗಮ. ಆದ್ದರಿಂದ ದಾರಿಯಲ್ಲಿ ಕಾರ್ಗಿಲ್ನಲ್ಲಿ ತಂಗಿದ್ದೆವು. ಹೋಗುವಾಗ ಡ್ರಾಸ್ ಎಂಬ ಸ್ಥಳದಲ್ಲಿ 1996 ರಲ್ಲಿ ನಡೆದ ಕಾರ್ಗಿಲ್ ಯುದ್ಧದ ವಾರ್ ಮೆಮೋರಿಯಲ್ ಇದೆ. ವೀರ ಯೋಧರ ಕಥೆಗಳು, ಬಳಸಿದ ಉಪಕರಣಗಳು. ಬೆಟ್ಟಗಳ ಮಾಡೆಲ್ ಗಳು ಅವುಗಳನ್ನು ಮತ್ತೆ ಪಡೆದ ರೋಚಕ ವಿಷಯವನ್ನು ರಸವತ್ತಾಗಿ ವಿವರಿಸುತ್ತಾರೆ. ದೇಶ ರಕ್ಷಣೆಗೆ ಹುತಾತ್ಮರಾದ ಯೋಧರನ್ನು ಅಲ್ಲಿಯೇ ಹೂತುಹಾಕಿದ್ದಾರೆ . ಎಂತಹವರೂ ಭಾವಾಜೀವಿ ಮಾಡುವ ಪುಣ್ಯ ಸ್ಥಳ. ರಸ್ತೆಗಳು ಅಷ್ಟೆನೂ ಚೆನ್ನಾಗಿಲ್ಲವಾದರೂ ಪ್ರಕೃತಿ ರುದ್ರ ರಮಣೀಯ. ಹಿಮಬರಿತ ಪರ್ವತಗಳು, ದೊಡ್ಡ ದೊಡ್ಡ ಶಿಖರಗಳು ಎದರಾದವು. ವಾತಾವರಣ ತಣ್ಣಗಾಗ ತೊಡಗಿತ್ತು . ಒಂದು ಬೌದ್ಧರ ದೇವಾಲಯ - ಮಾನೇಸ್ತ್ರಿ ನೋಡಿ ತಂಗುದಾಣಕ್ಕೆ ತೆರಳಿದೆವು.
ನಮ್ಮ ಕೊನೆಯ ಸ್ಥಳ pyongong ಸರೋವರ. ಇದು ಅತಿ ದೊಡ್ಡ ಎತ್ತರದ ಉಪ್ಪಿನ ನೀರು ತಿಳಿಯಾಗಿ ಸ್ವಚ್ಛವಾಗಿ ಇರುವ ಸರೋವರ. ನೀಲಿ, ಕಪ್ಪು, ನವಿಲು ಬಣ್ಣ ಕಾಣುವ ತುಂಬಾ ಚೆಂದದ ಸರೋವರ .ಈ ಸರೋವರದ 1/3 ಜಾಗ ಮಾತ್ರ ಭಾರತದ್ದು . ಮಿಕ್ಕಿದ್ದು ಚೈನಾ ದೇಶದ್ದು. ಇಲ್ಲಿ ಗಡಿ ಪ್ರದೇಶ ಆಗುವುದರಿಂದ ಯಾವುದೇ ಮೊಬೈಲ್ ಸಿಗುವುದಿಲ್ಲ. .ಅತೀ ತಣ್ಣಗಿನ ಪ್ರದೇಶ. ನೀರು ಮುಟ್ಟಲೂ ಆಗುವುದಿಲ್ಲ. ಇಲ್ಲಿ ಕೂಡ ಟೆಂಟ್ ನಲ್ಲಿ ಇದ್ದೆವು. ರೂಮ್ ಹೀಟರ್ಸ್ ಇರುತ್ತವೆ. ನಿಯಮಿತ ಅವಧಿಗೆ ವಿದ್ಯುತ್
ವಾಪಸ್ಸು ಲೇಹ್ ಗೆ ಬಂದು ಹಿಂರುಗುವ ದಾರಿ ಕೂಡ ದುರ್ಗಮ. ಲೇಹ್ ನಲ್ಲಿ ಇಟ್ಟಿದ್ದ luggage ತೆಗೆದುಕೊಂಡು ಒಂದು ಟ್ಯಾಕ್ಸಿ ಹಿಡಿದು ಹಿಮಾಚಲ್ ಪ್ರದೇಶದ keylong ಗೆ ಬಂದು, ಅಲ್ಲಿಂದ ಬಸ್ ನಲ್ಲಿ 19 ಘಂಟೆಗಳು ಪ್ರಯಾಣಿಸಿ ದೆಹಲಿಗೆ ಬಂದು, ನಂತರ ಬೆಂಗಳೂರಿಗೆ ಸೇರಿದಾಗ ಸಾರ್ಥಕತೆಯಾ ಭಾವ .
ನೋಡಿದ , ಅನುಭವಿಸಿದನ್ನು ಬರಿಯುವುದು ಕಷ್ಟದ ಕೆಲಸ. ತೆಗೆದ ಎಷ್ಟೋ ಚಿತ್ರಗಳಲ್ಲಿ ಕೆಲವನ್ನೇ ಆಯ್ಕೆ ಮಾಡಿ ತೋರಿಸುವುದು ಇನ್ನೊ ಕಷ್ಟದ ಕೆಲಸ. ಅರೋಗ್ಯ ಸರಿಯಿದ್ದು, ಹೆಚ್ಚು ತೊಂದರೆಯಾಗದಿದ್ದು ಸಂತಸದ ವಿಷಯ.
No comments:
Post a Comment