Wednesday, March 27, 2019

ಐವತ್ತರ ಆಸು ಪಾಸು....




     ವಯಸ್ಸು ಐವತ್ತಾಯ್ತು.  ಚಾತುರ್ವರ್ಣದ  ಎರಡನೇ ಆಶ್ರಮಕ್ಕೆ ತೆರೆ ಬಿಳಬೀಕಿತ್ತು.  ಊರು ಹೋಗು ಅನ್ನತ್ತಿದೆ.  ಕಾಡು ಕಾಣದಾಗಿದೆ.   ಯಾಕೋ ಜೀವನೋತ್ಸಾಹ ಕಡಿಮೆ ಆಗಿಲ್ಲ.  ಲೌಕಿಕ ಆಸೆಗಳು, ನಮ್ಮ ತಮ್ಮವರ ಮೇಲಿನ ಮಮತೆ ಕುಂದಿಲ್ಲ.  ಒಂದೇ ದಿನದಲ್ಲಿ ಯಾವುದೂ ಬದಲಾಗುವುದಿಲ್ಲ ಅಂತ ತಿಳಿದಿದೆ.  ಈ ಮೈಲಿಗಲ್ಲುಗಳು ಹೀಗೆಯೇ, ಒಮ್ಮೆ ಹಿಂದೆ ನೋಡುವ, ಮುಂದಿನದನ್ನು ಯೋಚಿಸುವ ಪ್ರಚೋದನೆ ನೀಡುತ್ತವೆ.  ಹೀಗೆಯೇ ಒಂದು ಸಣ್ಣ ಬರಹ.  

    ಹಿಂದೆನದನ್ನು ನೆನಪಿಸಿದರೆ ಭಯ ಅನಿಸುತ್ತದೆ.  ಅಮ್ಮ ಇಲ್ಲದೆ ಮೂವತ್ತು ವರ್ಷ ಬದುಕಾಗಿದೆ.  .   ಎಷ್ಟೋ ಜನರನ್ನ ಕಾಲಗರ್ಭ ನುಂಗಿಹಾಕಿದೆ. ಬದುಕಿನ ಬಂಡಿ ಸಾಗುತ್ತಲೇ ಇದೆ.  ಬಂಡಿ ಹತ್ತಿದವರು ಎಷ್ಟೋ , ಇಳಿದವರು ಎಷ್ಟೋ.  ಕೆಲವರು ಮಾತ್ರ ಹಲವು ವರ್ಷಗಳಿಂದ ಸಾಗಿದ್ದಾರೆ.  ರೂಪ ಬಂಡಿಯ ಚಕ್ರವಾಗಿದ್ದಾಳೆ.  ಅದಿತಿಯಲ್ಲಿ ಆದರ್ಶ ಕಂಡಾಗಿದೆ.  ಜೀವನ ತೃಪ್ತಿ ನೀಡಿದೆ.  Blessed ಅನಿಸುತ್ತದೆ.    ಈ ಬಂಡಿ ಓದುಗರಿಗೆ ಬೋರ್ ಮಾಡದೆ ಮುಂದುವರೆಸುವ ಪ್ರಯತ್ನ

    ಇನ್ನು ಮುಂದಿನ ದಾರಿಯ ಸಿದ್ಧತೆಯನ್ನು ಮಾಡಬೇಕಿದೆ.  ಇದು ನನಗೆ ನಾನೇ ಮಾಡಿಕೊಂಡಿರುವ checklist.  
  • ದೈಹಿಕ ಶಕ್ತಿ  ಕ್ರಮೇಣ ಕುಂದಲೇಬೇಕು.  ಕೈ ಉಳುಕಿದೆ, ಮಂಡಿ ನೋವು, ಬೆನ್ನು ನೋವು ಇತ್ಯಾದಿಗಳನ್ನು ಸಹಜವಾಗಿ ಸ್ವೀಕರಿಸುವ ಮಾನಸಿಕ ಶಕ್ತಿ ಬೇಕಾಗಿದೆ. ಆಸ್ಪತ್ರೆಗಳ ಓಡಾಟ, ವೈದ್ಯರ, diagnostic center ಗಳಲ್ಲಿ ಕಾಲಕಳೆಯಬೇಕಾಗಿದೆ
  •  ನಮ್ಮ ಮಾತು, ಚಿಂತನೆಗಳಿಗೆ ಬೆಲೆ ಕಡಿಮೆ.  ಬೇಸರವಿಲ್ಲದೆ ಇದನ್ನು ಒಪ್ಪಿಕೊಳ್ಳಬೇಕಿದೆ..    ಚಿಕ್ಕ ವಯಸ್ಸಿನವರ ವರ್ತನೆಗಳು ಕೆಲವೊಮ್ಮೆ ಇಷ್ತವಾಗದಿದ್ದರೂ ನಿಂದಿಸದೆ,   ಅವರೊಡನೆ ಹೊಂದಿ ಬಾಳುವ ಸಾಮರ್ಥ್ಯ ಬೆಳಸಿಕೊಳ್ಳಬೇಕಿದೆ.  ಯಾವುದೊ ಗತಕಾಲದ ವೈಭವವನ್ನು ಬಣ್ಣ ಕಟ್ಟಿ ಬೇಜಾರು ಮಾಡಿಕೊಳ್ಳದೆ,  ಬಂದಿದ್ದನ್ನು, ನಗು ನಗುತ ಸ್ವೀಕರಿಸುವ ಮನಸನ್ನು ರೂಡಿಸಿ ಕೊಳ್ಳಬೇಕಿದೆ.  ಹಣ್ಣೆಲೆ ಬೀಳಬೇಕು.  ಚಿಗುರು ಮೂಡಲೇ ಬೇಕು, ಇದು ನಿಸರ್ಗದ ನಿಯಮ.
  • ಹಣ ಎಷ್ಟಾದರೂ ಸಾಲದು. ಅದಕ್ಕಾಗಿ Rat race ನಡೆಸಿದ್ದು ಸಾಕು.  ನಮಗೆ ಇಷ್ಟ ಬಂದದನ್ನು, ಖುಶಿಯಿಂದ ಮಾಡುವ  ಆರ್ಥಿಕ ಭದ್ರತೆ ಇರವುದನ್ನು ಗುರುತಿಸಬೇಕಾಗಿದೆ.
  • ಐಹಿಕ ಭೋಗಕ್ಕಿಂತ ಸ್ವಾರ್ಥರಹಿತ ಸೇವಾ ಭಾವದಲ್ಲಿ ತೃಪ್ತಿ ಕಾಣಬೇಕಿದೆ.  ಸಮವಯಸ್ಕರ ಒಡನಾಟ,  ಸ್ನೇಹಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕಿದೆ.
  • ಸಮಯ ಹೆಚ್ಚು ಸಿಗಲಿದೆ.  ಓಡುವ ವೇಗ ಕಡಿಮೆಯಾಗಲಿದೆ.  ನಿವೃತ್ತ ಜೀವನದ ಒಂದು ಮಜಲು ಸಿಗುವ ವಿರಾಮ.  ಏನಾದರು ಹವ್ಯಾಸದಲ್ಲಿ ತೊಡಗಿಸಿ ಕೊಳ್ಳಬೇಕು.  ಬೇರೆಯವರಿಗೆ ತೊಂದರೆ ಕೊಡದೇ ಸಮಯವನ್ನು ಬೇಕಾದ ಹಾಗೆ ಕಳೆಯಬೇಕು
  • ಜೀವನದ ಈ ಘಟ್ಟದಲ್ಲಿ  ಪ್ರತಿಕ್ಷಣವನ್ನು ಆಂದಿಸಿ,  ನಾಲ್ಕು ಜನರಿಗೆ ಕೈಲಾದ ಸಹಾಯ ಮಾಡಬೇಕಾಗಿದೆ
  ಎಷ್ಟೊಂದು ಜನರ ಆಶೀರ್ವಾದ, ಪ್ರೀತಿ, ವಿಶ್ವಾಸಕ್ಕೆ ಆಭಾರಿಯಾಗಿದ್ದೇನೆ. ಮುಂದಿನ ಪ್ರಯಾಣಕ್ಕೆ ಜೊತೆ ಇರುತ್ತೀರಲ್ಲವೇ ?

        ಎಲ್ಲಿಗೇ ಪಯಣ.. ಯಾವುದೋ ದಾರೀ....



5 comments:

  1. ಎಂತ ಅದ್ಭುತವಾದ ಆಲೋಚನೆ.ಇರುವಷ್ಟು ದಿನ ನಗು, ಹುಸಿ ಜಗಳ , ಆನಂದದಿಂದ ಇದ್ದರಾಯಿತು.

    ಜನ್ಮದಿನಕ್ಕೆ ನನ್ನ ಹಾರೈಕೆ 'ನೆಮ್ಮದಿ'ಯ ಜೀವನ ನಿನ್ನದಾಗಲಿ. ಬದುಕಲ್ಲಿ ಬಹು ಮುಖ್ಯ ನೆಮ್ಮದಿ. ಏನಂತೀರಿ!?

    ReplyDelete
    Replies
    1. ಹೌದು...ಖಂಡಿತ ನೆಮ್ಮದಿ ಬೇಕು. ವಂದನೆಗಳು

      Delete
  2. ಅಣ್ಣಯ್ಯ ನಿನ್ನ ಜೀವನದ ಒಂದು ಭಾಗವಾಗಿದ್ದೆ ನಾನು(ಇಂದೂ ಸಹ) ನಮ್ಮ ಬಾಲ್ಯ ಸಿಹಿ,ಕಹಿಗಳ ಮಿಶ್ರಣ. ಅದನ್ನು ಸಮವಾವಾಗಿ ಹಂಚಿ ಉಂಡವರು ನಾವು. ಕಾಲ ಎಷ್ಟು ಬೇಗ ಉರುಳುತ್ತಿದೆ.
    ನಿನ್ನ ಮುಂದಿನ ಯೋಜನೆ perfect. ಮುಂದಿನ ಭವಿಷ್ಯದಲ್ಲಿ ಸಂತಸ,ಸಮೃದ್ಧಿ ತುಂಬಿದ ಸುಂದರ ಬದುಕು ಆ ದೇವರು ನಿನಗೆ
    ಕರುಣಿಸಲಿ ಎಂದು ಪ್ರಾರ್ಥಿಸುವೆ.
    ಜನುಮ ದಿನದ ಶುಭಕಾಮನೆಗಳು.ಶಾವಿಗೆ ಪಾಯಸ,ಬಿಸಿಬೇಳೆ ಬಾತ್ ಉಂಡು ಸಂತಸದಿಂದಿರು.🌹💐

    ReplyDelete
    Replies
    1. ತಂಗಿ, ಹೇಗೆ ಮರೆಯುವುದು...ಒಂದೇ ಕ್ಷಣ ಬರೆದು ಬಿಟ್ಟೆ. ಅಮ್ಮನ ಬಿಟ್ಟು 30 ವರ್ಷ ಬದುಕಿ ಬಿಟ್ಟಿದ್ದೇವೆ. ಇವತ್ತಿಗೂ ಅವರ ಕನಸು ಕನ್ನಲ್ಲಿದೆ. ಒಂದು ಸೀರೆ ಕೂಡ ಕೊಡಸಿಲ್ಲ
      . ಇದುವೇ ಜೀವನ ಇದು ಜೀವ. ಅಂದಿನ ಮತ್ತು ಇಂದಿನ ಜೀವನದ ಕೊಂಡಿ ನೀನು.. ತಾಯಿ ಹೀಗೆ ನೀನು ಸುಖವಾಗಿರು. ನಿಮ್ಮ ಹಾರೈಕೆಗೆ ಧನ್ಯವಾದಗಳು

      Delete