Monday, December 11, 2017

Assorted ಕವನಗಳು




ಅಮ್ಮಾ



ಹೆಂಡತಿ ಬಸಿರಾದಾಗ
ಬಸಿರಿಳಿದು, ಬಳವಳಿದು, ಮಗು ಹೆತ್ತಾಗ
ನೋವುಂಡು, ನಲಿವು ಹಂಚಿದಾಗ
ಮಗು ಅತ್ತಾಗ, ನಕ್ಕಾಗ, ತನ್ನ ಜೀವ ಎಂದಾಗ
ಉಚ್ಚೆಕಕ್ಕವ ನಗುನಗುತಾ ಬಳಿದಾಗ








ನೆನಪಾದವಳು....ಅಮ್ಮಾ


******************************************************************************

ನಿನ್ನೆ ನಾಳೆಗಳ ನಡುವೆ



ನಿನ್ನೆ ಸುಖವಿತ್ತೆಂದು ಹಲಬುವುದೇಕೆ 
ನಾಳೆ ಸುಖವಿರದೆಂದು ಚಿಂತಿಸಲೇಕೆ
ನಿನ್ನೆ ನಾಳೆಯನು, ಇಂದು ಬೆರೆಸಲೇಕೆ
ಈ ದಿನವು ನಗುತಿರಲು, ಈ ಕ್ಷಣದ ಜೊತೆಗಿರಲು, 
ಬಾಳು ಹಸನು ಸಂಶಯವೇಕೆ 


(ಸ್ಫೂರ್ತಿ : ಹಿರೇಮಗಳೂರು ಕಣ್ಣನ್)





No comments:

Post a Comment