Tuesday, October 31, 2017

ಮರೆಯಲಾಗದ ಮಾಂತ್ರಿಕ -ಪಿ ಕಾಳಿಂಗ ರಾವ್



       ನನ್ನ ತಂದೆ ಈಗ ಒಂದು ನೆನಪು.  3 ದಶಕ ಕಳೆದಿದ್ದರೂ, ಅವರ ಮಾತುಗಳಲ್ಲಿ ಮರೆಯಾಗಲಾಗದ್ದು  ಈ ಕಾಳಿಂಗ ರಾಯಾರು.  ಹೀಗೊಂದು  ಕಾಲ ಇತ್ತು.  ಬೆಳಿಗ್ಗೆ ಎದ್ದು ಒಲೆ ಉರಿ ಹಾಕಿದ ನಂತರ, ರೇಡಿಯೋ ಸಂಗೀತ.   Volve Radio ಯಿಂದ ಗೀತಾರಾನೆಯಿಂದ ದಿನ ಪ್ರಾರಂಬ.  ಅವರು ಗುನುಗುತ್ತಿದ್ದ ‘ ಕೈಲಾಸ ವಾಸ.. ಗೌರೀಶ ಈಶ ‘  ಈಗಲೂ ಕಿವಿಯಲ್ಲಿ ಗುಂಯ್ ಗುಡುತ್ತಿದೆ..  ನಂತರ ಸುಗಮ / ಭಾವಗೀತೆಯ ಸಂಗೀತ.  ಅವರ ಮೆಚ್ಚಿನ ಹಾಡುಗಾರ  ಪಿ ಕಾಳಿಂಗ ರಾವ್.

       ಪ್ರಾಯಶಃ ಕನ್ನಡದ ಸಂಗೀತಲೋಕಕ್ಕೆ ಒಂದು ಹೊಸ ಆಯಾಮ ಕೊಟ್ಟವರು ಕಾಳಿಂಗ ರಾಯರು. ಭಾವಗೀತೆಯನ್ನು ಮುಖ್ಯವಾಹಿನಿಗೆ ತಂದ ಆದಿ ಪುರುಷ ಅನ್ನಬಹುದೇನೋ.   (  ಇದು ನನ್ನ ತಿಳುವಳಿಕೆ )  ಅವರ ಸಂಗೀತದಲ್ಲಿ ಅಬ್ಬರ ಇಲ್ಲ.  ಹೆಚ್ಚು ವಾದ್ಯಗಳ ಗಲಾಟೆ ಇಲ್ಲ.  ಕೇವಲ ಒಂದು ಹಾರ್ಮೋನಿಯಂ, ತಬಲ ಅಷ್ಟೇ ಪಕ್ಕವಾದ್ಯ.  ಅಲ್ಲಿ ಅವರ ಧನಿಯೇ ಪ್ರಾಧಾನ್ಯ.  ಅ ಧನಿಯಲ್ಲಿ ಭಾವವೇ ಶೃಂಗಾರ.  ಅವರೊಡನೆ ಅವರ ಹೆಂಡತಿಯರು,  ಸೋಹನ್ ಕುಮಾರಿ, ಮೋಹನ್ ಕುಮಾರಿಯಾರು  ಹಾಡುತಿದ್ದರು. ( ಇಬ್ಬರು ಹೆಂಡತಿಯರು ಈ ಮಾತು ನಮ್ಮ ತಂದೆ  ಹೇಳಿದಂತೆ ಜ್ಞಾಪಕ – ಬೇರೆ ಪುರಾವೆ ಇಲ್ಲ )  ಅವರ ಹಾಡಿನ ಬಹು ಮುಖ್ಯ ಅಂಶ, ಸಾಹಿತ್ಯ.  ಎಲ್ಲಾ ಸುಪ್ರಸಿದ್ಧ ಕವಿಗಳ ಕವನವನ್ನು ಸುಶ್ರಯವಾಗಿ ಸಂಗೀತ ಸಂಯೊಜಿಸಿ ಹಾಡುತಿದ್ದರು.  ಈ ಕವನಗಳು ಹಾಡಿಗಾಗಿ ಬರೆದ್ದಿದ್ದಲ್ಲ.  ಕವನ ವಾಚನ ಮಾಡುವುದು ಹಿಂದಿನ ವಾಡಿಕೆ.   ಈ ಕವನವಾಚನ ಕೇವಲ ‘ಪಂಡಿತ’ರ ಹವ್ಯಾಸ ಮಾತ್ರ ಆಗಿತ್ತು.  ಇಂತಹ ವನಗಳನ್ನು ಹುಡುಕಿ ಭಾವವನ್ನು ಹಿಡಿದು ಹಾಡುವದು ಹರಸಾಹಸ.  ಇಂತಹ ಕೆಲಸ ಮಾಡಿದವರು ಕಾಳಿಂಗ ರಾವ್.  ಈ ಕವನಗಳ ಭಾವದ ಜಾಡು ಹಿಡಿಯಬೇಕು.  ಮೂಲ ಭಾವಕ್ಕೆ ಚ್ಯುತಿ ಬಾರಂತೆ ಸಂಗೀತ ಕೊಡಬೇಕು.  ಸಂಗೀತ ಮತ್ತೆ ಮತ್ತೆ ಕೇಳುವಂತಿರಬೇಕು.  ತಾಳ ತಪ್ಪಬಾರದು.   ಮತ್ತೆ ಹಾಡಬೇಕು.  ಹಾಡುಗಾರ ಕೂಡ ಅಷ್ಟೇ ಭಾವಜೀವಯಾಗಿರಬೇಕು.  ಇಂತಹ ಕ್ಲಿಷ್ಟ ಕೆಲಸವನ್ನು ಹಲವು ಬಾರಿ ಮಾಡಿದ ಹೆಗ್ಗಳಿಕೆ ರಾಯರದ್ದು.  ಇದರಿಂದ ಕವಿ ಕೃತಿ ಪರಿಚಯ ಸಾಮಾನ್ಯ ಮನುಷ್ಯರಿಗೆ ಶುರುವಾಯಿತು.  ಇದೇ ರೀತಿ ಜನಪದ ಗೀತೆಗಳನ್ನು ಕೂಡ ಉಪಯೋಗಿಸಿದರು.  ಜಾನಪದದ ಸೊಗಡು ಹಾಡಿನಲ್ಲಿ ಇರಬೇಕು.  ಈ ಪ್ರಕಾರ ಸುಲುಭವಾಗಿ ಅರ್ಥ ಆಗುತ್ತದೆ.  ರಾಯರ ಭಕ್ತಿ ಗೀತೆಗಳು ಕೊಡ ಸುಪ್ರಸಿದ್ದ.   ಅವರು ಹಳೆಯ ಸಿನಿಮಾಗೂ ಸಯೋಜಿಸಿ ಹಾಡಿದ್ದಾರೆ.   ಹತ್ತು ಹಲವಾರು ಕಡೆ, ಅಂದರೆ ಕಬ್ಬನ್ ಪಾರ್ಕ್, ಲಾಲಬಾಗ್ ನ ಬಾಂಡ್ಸ್ತಂಡಿ ನಲ್ಲಿ  ಹಾಡುತಿದ್ದರು.    ಹೀಗೆ ಒಬ್ಬ ಪರಿಪೂರ್ಣ ಕಲಾವಿದ ಪಿ ಕಾಳಿಂಗರಾವ್.

        ಸಂತೋಷ ಏನೆಂದರೆ ಇವತ್ತಿಗೂ ಅವರ ಹಾಡು youtube ಮತ್ತಿತ್ತರ ಮಧ್ಯಮದಲ್ಲಿ ಲಭ್ಯವಿದೆ.  ಇವರ ನಂತರ ಬಂದ, ಶಿವಮೊಗ್ಗ ಸುಬ್ಬಣ್ಣ, ಅಶ್ವತ್, ರತ್ನಮಾಲ ಪ್ರಕಾಶ್, ಪಲ್ಲವಿ ಮುಂದವರಿಸಿದ್ದಾರೆ  ಎಲ್ಲರ ಸಂಗೀತವೂ ಪ್ರಶಂಸನೀಯ.   ಕಾಲ ಬದಲಾಗಿದೆ.  ಬೇರೆ ಭಾಷೆಗಳಅರ್ಥತಿಳಿಯದೇ ಕೆಟ್ಟ ಉಚ್ಚಾರಣೆಯ,  ಅರ್ಥವಿಲ್ಲದ ಹಾಡುಗಳು ನಿರ್ಮಾಣವಾಗುತ್ತಿದೆ.  ಸಾಹಿತ್ಯ ಗೌಣ.  ಬೇರೆ ಬಾಷೆಯ ಸಂಗೀತವನ್ನು ಕದ್ದು ಹಾಡುವ. ಹಾಡಿಸುವ ಬದಲು, ಈ ಶ್ರೀಮಂತ ಪರಂಪರೆ ಮುಂದುವರೆಸುವುದು ಒಳಿತು.



5 comments:

  1. ನಿಜವಾಗಲೂ ಒಬ್ಬ ಅದ್ಭುತ ಕಲಾವಿದರು.

    ReplyDelete
  2. ಶ್ರೀಕಾಂತ್.. ನೀವು ಇಷ್ಟು ಸೊಗಸಾಗಿ ಬರಿತೀರಾ ಅಂತ .. ಗೊತ್ತೇ ಇರಲಿಲ್ಲ.. ತಂದೆಗೆ ತಕ್ಕ ಮಗ.. ಸೂಪರ್..

    ReplyDelete
  3. ಶ್ರೀಕಾಂತ್.. ನೀವು ಇಷ್ಟು ಸೊಗಸಾಗಿ ಬರಿತೀರಾ ಅಂತ .. ಗೊತ್ತೇ ಇರಲಿಲ್ಲ.. ತಂದೆಗೆ ತಕ್ಕ ಮಗ.. ಸೂಪರ್..

    ReplyDelete
    Replies
    1. ಕ್ಷಮಿಸಿ, ವೇದ ನಿಮ್ಮ ಕಾಮೆಂಟ್ ನೋಡಿರಲಿಲ್ಲ. ನಿಮ್ಮ ಉದಾರತೆಗೆ ಧನ್ಯವಾದಗಳು

      Delete
  4. Nice article sir! from Vijay kumar B K

    ReplyDelete