Wednesday, November 25, 2015

ನಾನು ಮತ್ತು ನನ್ನ ಗೆಳತಿ - College collection

ಒಗಟು

ನಾನು ಮತ್ತು ನನ್ನ ಗೆಳತಿ ದಿನಾಲೂ ಒಂದೇ ಗಾಡಿಯಲ್ಲಿ ದೌಡುತ್ತೇವೆ
ಅವಳು ಮುಂದೆ,  ನಾನು ಹಿಂದೆ !
ಸೊಂಟ ಹಿಡಿಯುವುದಿಲ್ಲಾ, ಕನ್ನಡಿ ತಿರುಗಿಸುವುದಿಲ್ಲ
ದಿನಾಲು ಪಾರ್ಕುಗಳ ಗಸ್ತು ತಿರುಗುತ್ತೇವೆ
ಎಂದೂ ಒಳಗೆ ಹೋಗಿಲ್ಲ, ಕಿಸಿ ಕಿಸಿ ನಕ್ಕಿಲ್ಲ

ಬಿಡಿಸಬಲ್ಲಿರಾ ಒಗಟ

I stayed in Jayanagar and my college was in KR circle
We used to go in BTS bus via Lalbagh and Cubbon part

Now it is easy to understand ?

*****************************************************************

ತ್ಯಾಗ

ನಿನಗಾಗಿ ಅದು ಬಿಟ್ಟೆ ಇದು ಬಿಟ್ಟೆ
ಎಂದೆಲ್ಲಾ ಚೂಡು ಬಿಟ್ಟೆ
ಅವಳು ಕೇಳಿದಳು, ಬಿಡಿವಯಾ ನನಗಾಗಿ ಒಂದನು
ನನ್ನನ್ನೇ  ಬಿಡು ಎಂದಳು

ಕೊನೆಗೆ ಅವಳನ್ನೇ ಬಿಟ್ಟೆ  

*********************************************************

ಬಲ್ಬ್

ನಿನ್ನ ಪ್ರಖರತೆ ತಡೆಯಲು 
ಕಪ್ಪು ಗಾಜಿನ ದಪ್ಪ ಕನ್ನಡಕ ಹಾಕಿಕೊಂಡೆ
ಆದರೂ  ಕಣ್ಣು ಕುಕ್ಕುತ್ತಿದೆ

ಅದೆಸ್ಟು ವಾಟೆಜ್ ನ ಬಲ್ಬ್ ಇದೆಯೇ ನಿನ್ನ ಕಣ್ಣಲ್ಲಿ !



ಸತ್ತ ಇಲಿ ಮತ್ತು ನೊಣ

*********************************************************
ನಿನ್ನೆ    ಸಿ ಯು,  ಇಂದು  ಶವಾಗಾರ
ಸತ್ತೆ ನಾನು, ಸತ್ತು ಬಿದಿದ್ದೆ  ಇಂದು
ಏನೆಲ್ಲ ಕನಸುಹೊಯ್ದಾಡುತಿದೆ ಮನಸು,
ಅತಿ ಬುದ್ದಿವಂತ ಮಗ, ಮುದ್ದಿನ ಮಗಳು
ಯಾರೂ ಇಲ್ಲ, ನಾ ಸತ್ತಾಗ ನನ್ನವರು (?) ಯಾರೂ ಇಲ್ಲ
ಕೈ ಹಿಡಿದು ನಡೆಸಿದೆ ಮಗನ, ಕೈ ಸೋತಾಗ ಬರಲಾರ
ಸಾಗರದಾಚೆಯ ನಾಡೇ ಅವನ ಕಾರ್ಯಾಗಾರ
ಉರುಗೊಲಾಗ ಬೇಕಾಗಿದ್ದ ಮಗಳು,  ಹೊಡೆದಾಗ ಲಕ್ವ
ಇರಲಾರಳು ಎಂಧಿಗೂ ನನ್ನ ಪಕ್ಕ 
ಹುಲಿಯಂದು ಕೊಂಡವಳು ....
                ನಾನಿಂದು ಸತ್ತ ಇಲಿ 
********************************************************
ವಯಸ್ಸಾಯ್ತು ಎಂಭತ್ತು
ಅವಳು ಸತ್ತು  ಬಂತು ನನಗೆ ಕುತ್ತು
ಎಂದೂ ಇರಲಿಲ್ಲ ಹತ್ತಿರ ಮಗ ಮಗಳು
ಇನ್ನು ಮುಂದೆಂದೂ ಇರಲ್ಲ ಅವಳು
ದೇವರೇ ಕೈ ಕೊಟ್ಟಾಗ ಯಾರು ಹೊಣೆ
ಬದುಕಿಯೂ ಬದುಕಲಾರದ ನಾನೊಂದು
ಸಿಂಬಳದೊಳು ಬಿದ್ದಿರುವ ನೊಣ
*******************************************************
One of my friend challenged me
"BKS why not write a kannada poem on "Satta ili mattu nona"
 Let me explain the contest.  A visit to ICU, crematorium and finally sangama @ srirangapatna provoked me to write this.  , I had to visit a close relative ( through wife) .  She was in ICU of Sagar Hospitals – It looked like a star hotel This old lady was suffering from multiple issues started because of diabetes, followed by 2 strokes,  Whatever be the treatment her time had come; next day she died. Unfortunately her Son, nick named  grep ( unix ?) ,was on a short term assignment to US.  He was my classmate & we worked in CMC together, He could not come at all  and Son in law in Kenya.  Her 80 year old husband had to do last rituals


My so-called poem writes about all these