Sunday, September 6, 2015

ಗುರವೇ ನಮ :

ನಾನೊಬ್ಬ ಅಸಾಮ.  ಅತೀ ಸಾಮಾನ್ಯ ಮನುಷ್ಯ.  ಆಷ್ಟೇನು ಓದದ, ತಿಳುವಳಿಕೆ ಇರದ, ಸಾಮಾನ್ಯ ಮನುಷ್ಯ. ಸಿಕ್ಕ ವೇದಿಕೆಯಲ್ಲಿ ಹಾಡುವ,ಮಾತುನಾಡುವ ಅವಕಾಶ ಬಿಡುವುದಿಲ್ಲ.    ನನಗನಿಸಿದ್ದನ್ನು Facebookನಲ್ಲಿ, ಸಿಕ್ಕ ಸಿಕ್ಕ ಕಡೆ ಬರೆಯುವುದು ಹವ್ಯಾಸ.  ಇದೆಲ್ಲಾ ಸಾಹಿತ್ಯ ಎಂದು ಕೊಳ್ಳುವ ದುಸ್ಸಾಹಸ ಮಾಡಲಾರೆ.  ಇಂತಹದೇ ಸಂದರ್ಬ teachers day ಬಗ್ಗೆ  impromptu ಮಾತಾಡಬೇಕಾಯ್ತು.  ಮಾತಾಡಿದ್ದು  ಒಂದು ನಿಮಿಷ ಆದರೂ ಅನಿಸಿದ್ದು ನೂರಾರು.  ಅದನ್ನೇ ಇಲ್ಲಿ ಬರೆಯುತ್ತಿದ್ದೇನೆ.

Teachers day ಬಗ್ಗೆ ನಮಗಲ್ಲರಿಗೆ ತಿಳಿದಿದೆ. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟುಹಬ್ಬ.  ಗುರುಗಳಿಗೆ ವಂದನೆ ಸಲ್ಲಿಸುವುದು ಸಂಪ್ರದಾಯ.  ಮಕ್ಕಳೆಲ್ಲಾ ಸೇರಿ ಇಷ್ಟವೋ, ಕಷ್ಟವೋ ಒಂದಿಷ್ಟು ದುಡ್ಡು ಸೇರಿಸಿ chocolate ಅಥವಾ ಹೂವು ತಂದು ಕೊಡುವುದು.  ಕೆಲವೊಂದು ಕಡೆ, ಟೀಚರ್ಸೇ ಏನು, ಹೇಗೆ ಮಾಡಬೇಕು ಎಂದು ಸೂಚಿಸಿ, ಗೌರವ ತೆಗೆದು ಕೊಳ್ಳುತ್ತಾರೆ !

ಗುರುವೇ ಬ್ರಹ್ಮ, ಗುರುವೇ ವಿಷ್ಣು, ಗುರುವೇ ಮಹದೇಶ್ವರ ( ಯಾಕೆ ಮೂರು ದೇವರು ಎಂದಿರಾ ?  ಮತ್ತೆ ನಮ್ಮಲ್ಲಿ ಎಷ್ಟು ಜಾತಿ, ಉಪಜಾತಿ, ಪಂಗಡಗಳಿವೆ.. ಎಲ್ಲರಿಗೂ ಅನ್ವಯಿಸುವುದು ಬೇಡವೇ ! ) ಎಂದು ಅನಾದಿಯಿಂದ ಹೇಳಿದ್ದು ನಮ್ಮ ಸಂಸ್ಕೃತಿ.  ಹಿಂದೆ, ಗುರುಕುಲ ಪದ್ದತಿ ಇತ್ತಂತೆ.  ವಿಧ್ಯಾರ್ಥಿಗಳನ್ನು ಅಲ್ಲಿ ಕಳುಹಿಸುತ್ಥಿದ್ದರು.  ಸುಮಾರು 12 -15 ವರ್ಷಗಳ ಸತತ ಅಭ್ಯಾಸ.  ಮೊದಲೆರಡು ವರ್ಷ ಕೇವಲ ಕೆಲಸ.  ದನಕ್ಕೆ ಮೇವು ಕೊಡುವುದು, ಕಸ ಗುಡಿಸುವುದು, ಒಟ್ಟಿನಲ್ಲಿ ಗುರುಗಳ, ಗುರುಕುಲದ ಸೇವೆ ಮಾಡುವುದು.  ನಿಸ್ವಾರ್ಥ ಸೇವೆಯೇ ಮೊದಲ ಪಾಠ. ಆನಂತರ, ಗುರುಗಳದೇ syllabus, ಅವರದೇ ಪರೀಕ್ಷೆ !.   ಈ ವ್ಯವಸ್ಥೆಯನ್ನೇ Macaulay ಬುಡಮೇಲು ಮಾಡಿದ್ದು...  ಇದಿಷ್ಟೂ ಕೇಳಿದ್ದು,..ಓದಿದ್ದು.

ಇನ್ನು ನನ್ನೊಬ್ಬ ಗುರುಗಳ ಬಗ್ಗೆ ಬರೆಯೋಣ ಅಂತ.  ಇವರು ನಮ್ಮ ಪ್ರೌಢಶಾಲೆಯ Geometry ಮೇಷ್ಟ್ರು.  ಸ್ವಲ್ಪ ಬೊಕ್ಕತಲೆ, ಯಾವಾಗಲೂ ಬಿಳಿ ಬಣ್ಣದ ಅರ್ಧ ತೋಳಿನ ಷರ್ಟ್. ಇವರ ಜ್ನಾನ ಅಪಾರ.  ಅವರು ಕೊಡುತ್ತಿದ್ದ ಲೆಕ್ಕಗಳು ಒಂದು ರೀತಿ ತಲೆ ಒಳಗೆ ಕೈ ಹಾಕಿ ಪರಪರ ಅಂತ ಕೆರೆದುಬಿಡುತಿದ್ದವು. ಈಗಲು ನೆನಪಿದೆ, ಒಂದು ಸರ್ಕಸ್ ಟೆಂಟೀನ volume ಲೆಕ್ಕ  ಕೊಟ್ಟಿದ್ದು.  ಈ ಟೆಂಟು ಒಂದು ಸಿಲಿಂಡರ್ ಮೇಲಿಟ್ಟಿರುವ ಕೋನ್ ತರಹ ಎಂದು ತಿಳಿಯಬೇಕಿತ್ತು. ಇದು ಕೇವಲ ಗಣಿತ ಅಷ್ಟೇ ಅಲ್ಲ.  ಒಮ್ಮೆ ಕಪ್ಪು ಹಲಗೆಯಲ್ಲಿ thought for the day ಬರೆದಿದ್ದೆ..  . 'ಸರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ' ಅಂತ.  ಬಂದವರೇ ಕೇಳಿದ್ದು ಯಾರಿಗಾದರೂ ಈ ಪದ್ಯ ಸಂಪೂರ್ಣವಾಗಿ ಬರುತ್ತದೆಯ ಎಂದು.  ಯಾರಿಗೂ ಗೊತ್ತಿರಲಿಲ್ಲ.  ಅವರೇ ತಮ್ಮ ಗುಂಡಗಿನ ಕೈಅಕ್ಷರದಲ್ಲಿ ಸಂಪೂರ್ಣ ಪದ್ಯ ಬರೆದರು.  ಇನೂಮ್ಮೆ ಪ್ರರ್ಥನಾ ಸಭೆಯಲ್ಲಿ,  ಪ್ರಾಂಶುಪಾಲರು, ಉತ್ತರಾಯಣ ಪುಣ್ಯಕಾಲದ ಬಗ್ಗೆ ಯಾವುದಾದರೂ ಶಿಕ್ಷಕರು ಹೇಳಿ ಎಂದಾಗ, ಮತ್ತೆ ಇವರದೇ ನಿರರ್ಗಳ ಭಾಷಣ. ಇದೇ ರೀತಿ ಒಮ್ಮೆ ಕೈಲಾಸಂ ಬಗ್ಗೆ ಒಂದು ನಾಟಕ ಮಾಡಿ ತೋರಿಸಿದ್ದರು !  ಯಾವುದೇ ಪೂರ್ವಸಿದ್ದತೆ ಇಲ್ಲದೆ ಯಾವುದೇ ವಿಷಯದ ಬಗ್ಗೆ ಮಾತನಾಡಬಲ್ಲ ಚತುರತೆ ಇವರದ್ದು.  ಅವರ ಪ್ರಾಸ ಬದ್ದ ಮಾತುಗಳು ಇಂದಿಗೂ ಅಚ್ಚಳಿಯದೆ ನೆನಪಿನಲ್ಲಿದೆ. 'ಇಂದು (ಮತಿ) ನೀನು ಪ್ರಶ್ನೆ ಉತ್ತರಿಸುವುದು ಎಂದು?!'  " ಕೀರ್ತಿ ನೀನು ಲೆಕ್ಕ ಮಾಡುವುದು ಯಾವಾಗ ಪೂರ್ತಿ?!" " ಶಂಕರ ಏನು ಇದು ನಿನ್ನ ಹಾಂಡ್ ರೈಟಿಂಗ್ ಭಯಂಕರ"...ಅದಕ್ಕೆ ನಮ್ಮ ಸಹಪಾಠಿಗಳು ಹೇಳಿದ್ದ ಪ್ರತ್ಯುತ್ತರ 'ಪಿ, ಎಸ್,ಸಿ ನೀವು ಬರದಿದ್ದರೆ ವಾಸಿ' ಅಂತ.  ಅವರ ಹೆಸರು ಪಿ ಎಸ್ ಚಿದಂಬರ ಮೂರ್ತಿ ಎಂದು..  ಅವರ ಮಗ ನನ್ನ ಸ್ನೇಹಿತ.  ಕೊನೆಯ ಬಾರಿ ಸಿಕ್ಕಿದಾಗ " ಪಿ ಎಸ್ ಸಿ ಕಾಲ ವಶವರದು" ಎಂದು ಹೇಳಿದ್ದ.  ಕಾಲಾಯ ತಸ್ಮೈ ನಮ:. ..

ಎಲ್ಲ ಗುರುಗಳಿಗೆ ನನ್ನದೊಂದು ದೊಡ್ಡ ನಮಸ್ಕಾರ. ನಿಮ್ಮ ಜ್ನಾನಕ್ಕೆ ಶರಣು. ಗುರವೇ ನಮಃ

No comments:

Post a Comment