Tuesday, October 3, 2023

ಕರ್ನಾಟಕ - ಭಾರತ ಗೌರವ ಕಾಶೀ ಯಾತ್ರೆ

  For English Translation  go to later portion of this blog
 *****************************************************

 ಕರ್ನಾಟಕ - ಭಾರತ್ ಗೌರವ್ ಯಾತ್ರೆ, IRCTC ಆಯೋಜಿಸಿರುವ ಯಾತ್ರೆ ಬಗ್ಗೆ ತಿಳಿದಾಗ, ಬಾರಿ ಸಂತೋಷದಿಂದ ಟಿಕೆಟ್ ತೆಗೆದುಕೊಂಡೆ. ಹಿಂದೆ ಪ್ರಧಾನ ಮಂತ್ರಿ ಉದ್ಘಾಟಿಸಿದ ವಿಷಯ ತಿಳಿದಿತ್ತು.  ಪ್ರಥಮ ಬಾರಿಗೆ ಈ ವಿಶೇಷ ಕಾಶೀ ಯಾತ್ರೆಗೆ  ರಿಯಾಯತಿ ಕೊಡಲಾಗಿತ್ತು.  ಈ ಯಾತ್ರೆಯ ನಾಲ್ಕನೇ ಆವೃತ್ತಿಗೆ ಭಾಗವಹಿಸುವ ಸದವಕಾಶ ದೊರಕಿತ್ತು.  ಎಲ್ಲರಿಗೂ ಉಪಯೋಗವಾಗಲಿ ಎಂಬುದು ಈ ಬರವಣಿಗೆಯ ಉದ್ದೇಶ. 

  ಮೊದಲಿಗೆ, ರಿಸರ್ವೇಶನ್ ಮಾಡುವ ರೀತಿ.   IRCTC ವೆಬ್ಸೈಟ್ ನಲ್ಲಿ  ಪ್ಯಾಕೇಜ್ ಟೂರ್ ಎಂಬಡಿಯಲ್ಲಿ ಹುಡುಕುತ್ತಿದ್ದರೆ, ಬೇರೆ ಯಾೂೀಾ ನಡುವೆ ತಿಂಗಳಿಗೊಮ್ಮೆ ಈ ಕಾಶೀ ಯಾತ್ರೆ ಸಿಗುತ್ತದೆ. ಮೊದಲೇ ನಿರ್ಧರಿಸಿ, ತತ್ ಕ್ಷಣ ಬುಕ್ ಮಾಡುವುದು ಒಳಿತು.  700 ಸೀಟು ಇದ್ದರೂ,   ಬೇಗ ಮುಗಿಯುತ್ತದೆ.  ವಿಶದವಾಗಿ ಮಾಹಿತಿ ಅಲ್ಲೆಯೆ ಸಿಗುತ್ತದೆ.  ಸಂಕ್ಷಿಪ್ತವಾಗಿ, 9ದಿನ /8 ರಾತ್ರಿಗಳು . ಕಾಶಿ, ಪ್ರಯಗರಾಜ್, ಅಯೋಧ್ಯ, ಗಯಾ ನಾಲ್ಕು ಸ್ಥಳಗಳು. ಶುಲ್ಕ 15,000( ಸರ್ಕಾರದ ವತಿಯಿಂದ 7,500/-)

      ಈಗ ನನ್ನ ಅನುಭವ,  ಒಟ್ಟಿನಲ್ಲಿ 100% ನನಗೆ ಬೇಕಾದ ಹಾಗೆ ಇತ್ತು.  ಬಹಳ ಇಷ್ಟವಾಯಿತು.  ನಿಗದಿತ 9 ಘಂಟೆಗೆ ಯಶವಂತಪುರ ರೈಲ್ವೇ  ಸ್ಟೇಷನ್ ತಲುಪಿದಾಗ, ಬಾರಿ ಸ್ವಾಗತ.  ಡೊಳ್ಳು ಕುಣಿತ, ರೆಡ್ ಕಾರ್ಪೆಟ್, ಪ್ರತೀ ಬಾಗಿಲಲ್ಲಿ ಬಾಳೆ ಕಂದು. ಒಂದು ಜಪಮಾಲೆ, ಹೂಗುಚ್ಛ, ಪಾನೀಯ ನಮ್ಮನ್ನು ಸ್ವಾಗತಿಸಿತು.  ಒಳಗೆ ಹೋದ ಮೇಲೆ, ಗುರುತಿಗಾಗಿ, id card, ಟೋಪಿ, ಛತ್ರಿ ಕೂಡ ಕೊಟ್ಟರು.  ಇವನ್ನೂ ಹೊರಗಡೆ ಹೋದಾಗ ಖಂಡಿತ ಹಾಕಿ ಕೊಳ್ಳಬೇಕು.  ಒಂದು ಸಣ್ಣ ಕೈಚೀಲ ಇರುವುದು ಒಳಿತು.  ಇದು ಮುಂದಿನ ಪ್ರಯಾಣಕ್ಕೆ ಬಾರಿ ಅನುಕೂಲ ಆಗುತ್ತದೆ.

      ಪ್ರಯಾಣ ಶುರುವಾದ ಒಂದು ಗಂಟೆಯಲ್ಲಿ ಎಲ್ಲರಿಗೂ ದಿಂಬು, ರಗ್ಗು, ಹೊದಿಕೆ ವಿತರಣೆಯಾಯಿತು. ಒಂದು ತಟ್ಟೆ ಕೊಟ್ಟಿದ್ದರು.  ಅದರಲ್ಲಿ, ಒಂದು ಬಟರ್ ಪೇಪರ್ ಹಾಕಿ, ಅದರ ಮೇಲೆ ಬಡಿಸುವುದು/ ತಿನ್ನುವುದು.   ಟ್ರೈನ್ ನಲ್ಲಿ ನಮ್ಮ ದಿನಚರಿ ಹೀಗೆ - ಬೆಳಿಗ್ಗೆ 7 ರ ಒಳಗೆ, ಒಂದು ಗುಡ್ ಡೆ ಬಿಸ್ಕತ್ತು ಕಾಫೀ/ ಟೀ ಸರಬರಾಜು, ಪೇಪರ್ ಕಪ್ ನಲ್ಲಿ.  8:30 ರ ಓಲಗೆ ಘಂಟೆಗೆ ಬಿಸಿ ತಿಂಡಿ, ಮತ್ತೆ  ಟೀ/ ಕಾಫಿ.  12:30 ಕೇ ಊಟ.  ಚಪಾತಿ, ತರಕಾರಿ ಸಾಗು, ಅನ್ನ ಸಾಂಬಾರ್, ಕೆಲವೊಮ್ಮೆ ಸಾರು, ಕಪ್ ನಲ್ಲಿ ಮಜ್ಜಿಗೆ.  ಅಲ್ಲಿನ ಹುಡುಗರು ಕೈಯಲ್ಲಿ ಸ್ಟೀಲ್ ಬಕಿಟ್ ನಲ್ಲಿ ಬಡಿಸುತ್ತಾರೆ. ಸಂಜೆ  5 ಗಂಟೆಗೆ, ಪಾಕೆಟ್ ನಲ್ಲಿ ಕುರುಕಲು ತಿಂಡಿ, ಕಾಪಿ ಟೀ.  ರಾತ್ರಿ 8 ರ ಒಳಗೆ ಮತ್ತೆ ಊಟ.  ಒಂದು ದಿನಕ್ಕೆ ಒಂದು ಸಲವಾದರೂ ಸಿಹಿ.  ಒಟ್ಟಿನಲ್ಲಿ ಒಳ್ಳೆಯ ಆತಿಥ್ಯ. ಟ್ರೈನ್ ನಲ್ಲಿ ಸುಮಾರು 6 ರಾತ್ರಿ ಕಳೆದೆವು.  ಎರಡು ದಿನ ಹೋಟೆಲ್ ನಲ್ಲಿ ತಂಗಿದ್ದೆವು.  ಊಟ ಮತ್ತೆಲ್ಲ ಕಲ್ಯಾಣ ಮಂಟಪ / ರೆಸಾರ್ಟ್ ನಲ್ಲಿ.  700 ಜನ ಇರುವುದರಿಂದ ವಿತರಣೆ ಕಷ್ಟ. 

        ಒಳ್ಳೆಯ ತಿಂಡಿಪೋತ ಅಂದು ಕೊಳ್ಳವ ಮೊದಲು, ನಾವು ಸಂದರ್ಶಿಸಿದ ಜಾಗಗಳ ಬಗ್ಗೆ.  ನಾವು ಮೊದಲು ವಾರಾಣಸಿ ತಲುಪಿದೆವು. ನಿಮಗೆ ತಿಳಿದಂತೆ ವಾರಾಣಸಿ, ಬನಾರಸ್, ಕಾಶೀ ಎಲ್ಲಾ ಹೆಸರಲ್ಲೂ ಕರೆಯುವ, ಗಂಗಾ ತೀರದಲ್ಲಿ ಬೆಳೆದಿರುವ ವಿಶ್ವದ ಅತೀ ಪುರಾತನ ನಗರ ಇದು.  ಆದ್ದರಿಂದ ರಸ್ತೆಗಳೆಲ್ಲ ಸಣ್ಣವು ಮತ್ತು ಅಂಕು ಡೊಂಕು.  ಎಲ್ಲಾಕಡೆ ಎಲೆಕ್ಟ್ರಿಕ್ ಅಟೋನಲ್ಲೇ ಓಡಾಡಬೇಕು. ನಾವು ಬೆಳಿಗ್ಗೆ ಸಂಕಟ್ ಮೋಚನ್ ಹನುಮಂತನ ಗುಡಿ, ತುಳಸಿ ಮಂದಿರ ಮತ್ತು ಗಣೇಶನ ದೇವಸ್ಥಾನ ನೋಡಿದ್ದೆವು.  ಊಟದ ನಂತರ, ಹೊಸದಾಗಿ ನವೀಕರಿಸಿದ ವಿಶ್ವನಾಥನ ದೇವಸ್ಥಾನ ಮತ್ತು ಗಂಗಾ ಆರತಿಗೆ ಹೋಗಿದ್ದೆವು. ಗಂಗಾ ಆರತಿ ಸರಿಯಾಗಿ ವೀಕ್ಷಿಸಲು ಒಂದು ದೋಣಿಯ ಮೇಲೆ ಕುಳಿತಿದ್ದೆವು.  ಸೂರ್ಯಾಸ್ತ ದಲ್ಲಿ ಶುರುವಾಗುವ ಆರತಿ ಸುಮಾರು ಒಂದು ಘಂಟೆ ಇರುತ್ತದೆ.  ಒಳ್ಳೆಯ ದೀಪ, ಸ್ಪೀಕರ್ ವ್ಯವಸ್ಥೆ ಇದೆ.   ಎಲ್ಲಾಕಡೆ ತುಂಬಾ ಸೆಕೆ,  ರಾಶಿ ರಾಶಿ ಜನಸ್ತೋಮ.  ದೇವಸ್ಥಾನ ಗಳಲ್ಲಿ ಮೊಬೈಲ್ ಎಲೆಕ್ಟ್ರಾನಿಕ್  ಉಪಕರಣ ಬಿಡುವುದು ಇಲ್ಲ. 

       ಎರಡನೇ ಸ್ಥಳ, ಪ್ರಾಯಾಗರಾಜ್ ಹಿಂದೆ ಇದಕ್ಕೆ ಅಲಹಾಬಾದ್ ಎಂದು ಕರೆಯುತ್ತಿದ್ದರು.  ಇಲ್ಲಿನ  ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವುದು ವಿಷೇಶ. ( ಗಂಗಾ, ಯಮುನಾ ಮತ್ತು ಗುಪ್ತಗಾಮಿನಿ ಸರಸ್ವತಿ )  ಬಸ್ಇ ಳಿದು ದೋಣಿ ತೆಗೆದು ಕೊಂಡು ಹೋದರೆ, ಸಂಗಮ ಸ್ಥಾನದಲ್ಲಿ, ಎರಡು ದೊಡ್ಡ ದೋಣಿಗಳು ನಡುವೆ ಹಾಕಿರುವ ಬೊಂಬಿನ ಸಹಾಯದಿಂದ ಮುಳುಗಿ ಸ್ನಾನ ಮಾಡಬೇಕು.  ನಂತರ ಮಲಗಿರುವ ಹನುಮಂತನ ಗುಡಿಗೆ ಹೋಗಿದ್ದೆವು.

    ಮೂರನೆಯ ದಿನ, ಅಯೋದ್ಯೆಗೆ ಹೋಗಿದ್ದೆವು. ರಸ್ತೆ ಮತ್ತಿತರ ಕಟ್ಟುವ ಕೆಲಸ ಮಾಡುತ್ತಿದ್ದಾರೆ.  ಇಕ್ಕಟ್ಟು ಇನ್ನೂ ಹೆಚ್ಚು.   ನಂದಿಗ್ರಾಮಕ್ಕೆ ಹೋಗಿದ್ದೆವು.  ಇದು ಭರತ, ರಾಮ ಕಾಡಿಗೆ ಹೋದ ಸಮಯದಲ್ಲಿ, ರಾಜ್ಯವಾಳಿದ ಸ್ಥಳ.  ಭರತ ಗುಹ ಭೇಟಿಯ ಗುಹೆ, ಹನುಮಂತ ಮೊದಲೇ ಬಂದು ಅಗ್ನಿಪ್ರವೇಶ ಮಾಡಲು ತಯಾರಾಗಿದ್ದ ಭರತನಿಗೆ, ರಾಮ ಬರುತ್ತಿರುವ ವಿಷಯ ತಿಳಿಸಲು ಭೇಟಿ ಮಾಡಿದ ಜಾಗ ತೋರಿಸುತ್ತಾರೆ.  ಇದು ದೊಡ್ಡ ವಿಸ್ತೀರ್ಣದಲ್ಲಿ ಇದೆ. ಊಟದ ನಂತರ,  ಹನುಮಾನ್ ಘಡಿ, ದಶರಥನ ಮಹಲ್, ಮತ್ತು ರಾಮ ಜನ್ಮ ಭೂಮಿಗೆ ಹೋದೆವು.  ಇಲ್ಲಿ ವಿಪರೀತ ಭದ್ರತೆ.  ಎಲ್ಲಾ ವಸ್ತುಗಳನ್ನು ಲಾಕರ್ ನಲ್ಲಿ ಇಡಬೇಕು. ಒಂದು ತಾತ್ಕಲಿಕವಾದ ಜಾಗದಲ್ಲಿ ರಾಮ್ ಲಲ್ಲನ ಪುಟ್ಟು ವಿಗ್ರಹ ಇಟ್ಟಿದ್ದಾರೆ.  ಭವ್ಯವಾದ ದೇವಸ್ಥಾನ ನಿರ್ಮಾಣವಾಗುತ್ತಿದೆ.  ಅಯೋಧ್ಯ ಸಂಪೂರ್ಣವಾಗಿ ಬದಲಾಯಿಸುವ ಯೋಜನೆ ಇದೆ.  ಪೂರ್ಣವಾಗಿ 2032 ಆಗುತ್ತದೆ 


     ಕೊನೆಯ ಸ್ಥಳ ಗಯಾ. ಇಲ್ಲಿ ಪಲ್ಗುಣಿ ನದಿಯ ತೀರದಲ್ಲಿ ಪಿಂಡ ಪ್ರದಾನ ಮಾಡುವುದು ಪ್ರತೀತಿ  ನಮ್ಮ ಸಮಯ ಈ ಕಾರ್ಯದಲ್ಲಿ ಕಳೆದು ಹೋಯ್ತು.  ಅದೃಷ್ಟವಶಾತ್ ಒಳ್ಳೆಯ ಪುರುಹಿತರು ಸಿಕ್ಕಿದ ಕಾರಣ ಚೆನ್ನಾಗಿ ಕಾರ್ಯ ಮಾಡುವ ಯೋಗ ದೊರೆಯಿತು.  ಅಲ್ಲಿಯೇ ವಿಷ್ನುಪಾದ ದೇವಸ್ಥಾನಕ್ಕೆ ಹೋಗಿದ್ದೆವು.  ಬೇರೆಯವರಿಗೆ ಬುದ್ಧ ದೀಕ್ಷೆ ಪಡೆದ ಬೋಧ್ ಗಯಾಕ್ಕೆ ಹೋಗುವ ವ್ಯವಸ್ಥೆ ಇತ್ತು. ಟ್ರೈನ್ ವಿಳಂಬವಾಗಿ ತಲುಪಿದ್ದರಿಂದ ಎರಡೂ ಕೆಲಸ ಸಾಧ್ಯವಿರಲಿಲ್ಲ.

ಎಲ್ಲವೂ ತುಂಬಾ ಚೆನ್ನಾಗಿದ್ದರೂ, ತಮ್ಮ ನಿರೀಕ್ಷೆ ಸರಿ ಇರಲಿ ಎಂಬ ಉದ್ದೇಶದಿಂದ ಕೆಲವೊಂದು ಋಣಾತ್ಮಕ ವಿಷಯಗಳು. ಈ ಟ್ರೈನ್ ನಿಗದಿತ ಸಮಯ ಇರುವುದಿಲ್ಲ.  ಟ್ರಾಕ್ ಖಾಲಿ ಇದ್ದಾಗ ಬಿಡುತ್ತಾರೆ ಪ್ರಯಾಣ ಉದ್ದವಾಗುವ ಸಾದ್ಯತೆ ಹೆಚ್ಚು.  ನಾವು ಒಂದು ದಿನ ಹೆಚ್ಚು ಆಯಿತು.   72 ಜನ ಇರುವ ಕೋಚ್ ನಲ್ಲಿ ನಾಲ್ಕು ಟಾಯ್ಲೆಟ್ ಎರಡು ಭಾರತೀಯ ಭಾರತೀಯ ಪದ್ಧತಿ ಇದ್ದರೆ, ಇನ್ನೆರಡು ಪಾಶ್ಚಾತ್ಯ ರೀತಿಯದ್ದು. ಒಂದರಲ್ಲಿ ಯಾರೋ ತಾಜ್ಯ ವಸ್ತು ಹಾಕಿ ಅದು ಮುಚ್ಚಿದ್ದರು.   ಎರಡನೆಯದು ಅವರು ಕೊಟ್ಟಿದ್ದ ಕೋಣೆಗಳು ಚಿಕ್ಕವು.. ಚೊಕ್ಕವಾಗಿ ಇರಲಿಲ್ಲ.  ಕೊನೆ ಎರಡು ದಿನ ಸುಮಾರು 50% ಹುಷಾರು ತಪ್ಪಿದ್ದರು.  ಹವಾಮಾನದ ಏರುಪೇರು ಮುಖ್ಯ ಕಾರಣ.

ಒಟ್ಟಿನಲ್ಲಿ ವೈಯಕ್ತಿಕವಾಗಿ ತುಂಬಾ ತೃಪಿಕೊಟ್ಟ ಪ್ರಯಾಣ.  ದಾರಿ ಉದ್ದಕ್ಕೂ ಹಾಡು, ಭಜನೆ, ವಿಷ್ಣಸಹಸ್ರನಾಮ ಪಾರಾಯಣ ಮಾಡಿ ಪುನೀತರಾಗುವ ಸುಸಂದರ್ಭ.  ಪಿತೃ ಕಾರ್ಯ ಮಾಡಿದ ಖುಷಿ.  ಹೀಗೆ ವ್ಯವಸ್ಥೆ ಮಾಡಿದವರಿಗೆ ವಂದನೆಸಲ್ಲಿಸುತ್ತಾ ಮನೆ ಸೇರಿದೆವು.

English Translation

 When I learnt about the Karnataka - Bharat Gaurav Kashi yatra organised by IRCTC , I booked my ticket with great excitement. I had heard about this journey as inaugurated by the Prime Minister earlier. I had the opportunity to participate in the fourth edition of this journey.  Purpose of this blog is to give an insight into this 

First, let me explain how the reservations are made. If you search for the "Package Tour" on the IRCTC website, you can find this 'Kashi Yatra'. Booking it immediately is a wise decision, as even though 700 seats are available, they fill up quickly. Detailed information is available on the website. In short, it's a 9 days/8 nights journey covering four places: Kashi, Prayagraj, Ayodhya, and Gaya, with a cost of 15,000 rupees (subsidized by the government to 7,500 rupees).

Now, let me share my experience. .  We were welcomed warmly at Yashwantpur Railway station.  Literally red-carpet welcome.  As a welcome kit, we were given a small Japamala, a flower bouquet, and refreshments .  There was famous dance with drums called DoLLu KuNitha.  They  provided us with an ID card, cap, and umbrella for our use. We had to carry all this all the time. It is good to carry a  small handbag. This is useful throughout the journey,

We had to spend 6 days in the train. A glimpse of a typical day is as follows. In the morning before 7 AM, Coffee/ Tea were served with biscuits. At around 8:30 AM, we were served a very tasty, good breakfast. Lunch used to be served after 12:30 PM. It consisted of chapatis, vegetables, rice, and sambar, sometimes rasam and buttermilk. Again, in the evening Tea /coffee was served before 5 PM with a snack packet, Dinner was at 8 PM, and There was sweet / kheer every other day. Water bottles were given as much required.  Despite the meals being simple, the hospitality was excellent.

    We first reached Varanasi. As you may know, Varanasi, Banaras, and Kashi are all names for the same ancient city situated on the banks of the Ganges. The streets are narrow and winding, suitable only for electric auto-rickshaws. We visited the Sankat Mochan Temple, Tulsi Manas Mandir, and the Ganesha Temple. After lunch, we visited the newly renovated Vishwanath Temple and attended the Ganga Aarti. Watching the Ganga Aarti during sunset from a boat is a unique experience. It lasts for about an hour and is beautifully done with lamps and an excellent sound system. The atmosphere is vibrant with a large crowd.

     Our next stop was Prayagraj (formerly Allahabad), where the Triveni Sangam ( Ganga, Yamuna and guptagamini, Saraswathi ) is a significant attraction. Taking a boat to the confluence of the three rivers for a ritual bath is a special experience. We also visited the Hanuman ( who is sleeping ), temple on the way back.


      Our next destination was Ayodhya. Morning, we went to Nandigram.   Bharata ruled the country while Lord Rama went to Vanavas from this place. It's a vast area, also has a place where Hanuman jumped ahead and informed Bharatha about the arrival of lord Rama , while Bharatha was ready to jump into fire.. After lunch, we went to a few temples. Hanuman Ghadi, Dhasharath Mahal and finally Rama Janma Bhoomi. Rama lalla is a beautiful small idol housed in temporary structure and grand temple is coming up. There are plans for the complete renovation of Ayodhya. It is expected to be completed by 2032.  Evening there was Sarayu Aarathi, although this is much smaller  

Our final destination was Gaya. Here, we participated in the Pinda pradaan ceremony on the banks of the Phalgini River.  We were fortunate that  we  met good  priests to assist us with the ritual  We also visited the Vishnupad Temple.  There was visit arranged to Bodhgaya, the place where lord Buddha got enlightenment. Due to lack of time, those of us who performed the ritual had to skip this visit. 


Although everything was excellent, Obviously, there were a few shortcomings. The train schedule is never fixed, and delays were very common. Totally when we reached back to Bangalore, there was  1 day delay.   Next,   72 people had to share 4 toilets and it was tough during peak hours. Cleanliness can improve a lot. Then, almost 50% fell sick, due to major change in temperature and may be viral infection. There was doctor on the trail and good stock of medicines in train - He had to work hard and always busy

Overall, it was a great experience, and I hope this gives some idea about the journey.  Sarve Janaha Sikhino bhavantu


Thursday, August 17, 2023

ನಾನೇಕೆ ಕನ್ನಡದಲ್ಲಿಯೇ ಬರೆಯುತ್ತೇನೆ

 ಇದು ನನ್ನೊಡನೆ ವ್ಯವಹಿಸುವರ ಜಿಜ್ಞಾಸೆ.  ಎಲ್ಲ ಸಾಮಾಜಿಕ ತಾಣಗಳಲ್ಲಿ, ನಾನು ಕನ್ನಡದಲ್ಲಿ ಬರೆಯುತ್ತೇನೆ.  ಫೇಸ್ಬುಕ್, ವಾಟ್ಸಾಪ್ ಎಲ್ಲಾ ಕಡೆ ಬರೆಯುತ್ತೇನೆ. ಖಂಡಿತ ನಾನೊಬ್ಬ ಕನ್ನಡ ಪಂಡಿತ ಅಲ್ಲ .  ಬರೆದು, ಬರೆದು ಅಭ್ಯಾಸವಾಗಿದೆ.  ನಾನು ವೃತ್ತಿಯ ಕಾರಣ ಪ್ರಪಂಚದ ಬಹುತೇಕ ಎಲ್ಲ ಕಡೆ ವ್ಯವಹರಿಸುವ ಅನಿವಾರ್ಯತೆ ಇತ್ತು.. ಇಂಗ್ಲಿಷ್ ಚೆನ್ನಾಗಿ ಬಲ್ಲೆ.  ಕನ್ನಡಾಭಿಮಾನ ಹೆಚ್ಚಿದೆ. ಇಂಗ್ಲಿಷ್ ನಲ್ಲಿ ಬರೆದದ್ದು ಈ ಬ್ಲಾಗ್ ನಲ್ಲಿ ಇದೆ.  ನನ್ನ ಮೊದಲ ಆದ್ಯತೆ, ಕನ್ನಡ ಕಾರಣ ಹೀಗಿದೆ.

ಇದು 1992 ರಲ್ಲಿ ನಡೆದ್ದದ್ದು.  CMC ಎಂಬ ಸಾರ್ವಜನಿಕ ಸಂಸ್ಥೆಯಲ್ಲಿ ವೃತ್ತಿ ಆರಂಭಿಸಿದ್ದೆ.  ಅಲ್ಲಿ ತರಭೇತಿಗಾಗಿ ಅಂದಿನ ಮದ್ರಾಸು (ಇಂದಿನ ಚೆನ್ನೈ ) ಗೆ ಹೋಗಿದ್ದೆ.  ನಮ್ಮ ತಂಗುದಾಣ ಕೀಲ್ಪಾಕ್ ಹುಚ್ಚಾಸ್ಪತ್ರೆಗೆ ಹತ್ತಿರ ಇತ್ತು. 😉😁😁 ಕಛೇರಿ ಅಣ್ಣಾ ಸಾಲೆ ಯಲ್ಲಿ ಇತ್ತು.  ನಾವು ಹೊರಗಿರುವ ಕಾರಣ ದಿನ ಭತ್ಯೆ ನೀಡುತ್ತಿದ್ದರು.  ಅದರಲ್ಲಿ ಹಣ ಉಳಿಸುವುದಕ್ಕೆ, ಟ್ಯಾಕ್ಸಿ, ಆಟೋ ಬಿಟ್ಟು, ಸಾರ್ವಜನಿಕ ಬಸ್ ನಲ್ಲಿ ಹೋಗುತ್ತಿದ್ದೆವು.  ಬಸ್ ಮೇಲೆ ತಮಿಳಿನಲ್ಲಿ ಮಾತ್ರ ಬರೆದಿರುತಿದ್ದರು.  ಎಲ್ಲ ವ್ಯವಹಾರ ತಮಿಳು ನಲ್ಲಿಯೇ ! ನಾನು ತಮಿಳು ಲಿಪಿ ಕಲಿಯಬೇಕಾಯಿತು.  ಕಚೇರಿಯಲ್ಲಿ ಕೂಡ, ಸಾಕಷ್ಟು ಸೀನಿಯರ್ಸ್ ಅವರವರಲ್ಲಿ ತಮಿಳುನಲ್ಲಿಯೇ ವ್ಯವಹರಿಸುತಿದ್ದರು.  ಅಲ್ಲಿ ವೃತ್ತ ಪತ್ರಿಕೆಗಳು ವಾರ/ ಮಾಸ ಪತ್ರಿಕೆಗಳು ತಮಿಳು ಭಾಷೆಯಲ್ಲಿ. ಅವರ ಭಾಷಾಭಿಮಾನ ದೊಡ್ಡದು.  ನಾಡಿನ ಬಗ್ಗೆ ಅವರಿಗೆ ಹೆಮ್ಮೆ ಇದೆ. ಒಂದು ವರ್ಷಕ್ಕೂ ಹೆಚ್ಚು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದ ನನಗೆ, ವ್ಯತ್ಯಾಸ ದೃಗ್ಗೋಚರ ಆಯಿತು.  


ಇನ್ನೊಂದು ಅನುಭವ, ಕಾಂಪ್ಯಾಕ್ ಎನ್ನುವ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗ ಮಾಡುತಿದ್ದೆ.  2002 ರಲ್ಲಿ ತರಬೇತಿಗಾಗಿ, ದಕ್ಷಿಣ ಕೊರಿಯಾದ ಸಿಯೋಲ್ ಗೆ ಹೋಗಿದ್ದೆ.  ನಮ್ಮ ಮಾರ್ಗದರ್ಶಕ ಆಸ್ಟ್ರೇಲಿಯಾ ದೇಶದವನು.  ಇಬ್ಬರು ಸ್ಥಳೀಯರು ಮತ್ತೋರ್ವ ಇಂಡೋನೇಷ್ಯಾದಿಂದ ಬಂದಿದ್ದ.  ನಾವು ಪ್ರಸಿದ್ಧ ಕಂಪನಿ ಸ್ಯಾಮ್ಸಂಗ್ ನಲ್ಲಿ ಗ್ಲೋಬಲ್ ಸರ್ವರ್ಸ್ ಇನ್ಸ್ಟಾಲ್ ಮಾಡುವ ಮೂಲಕ ಕಲಿಯ ಬೇಕಿತ್ತು.  ವೃತ್ತಿಯ ಬಗ್ಗೆ ಹೆಚ್ಚು ಬೇಡ.  ಅಲ್ಲಿ ಎಲ್ಲಾರೂ ಕೊರಿಯನ್ ಮಾತಾಡುತಿದ್ದರು.  ಇಂಗ್ಲಿಷ್ ಬರುವುದೇ ಇಲ್ಲ. ಸಾಮಾನ್ಯ ವ್ಯವಹಾರ ತುಂಬಾ ಕಷ್ಟ. ಲಿಫ್ಟ್ ಗಳಲ್ಲಿ ಮೆಟ್ರೋ ಗಳಲ್ಲಿ ಅವರ ಭಾಷೆಯಲ್ಲಿಯೇ ನಿರ್ದೇಶನ ನೀಡುತಿದ್ದರು.  ಆದರೆ ಜನ ಒಳ್ಳೆಯವರು.   ನನ್ನ ಗಾಜಿನ ಕನ್ನಡಕ ಒಡೆದು ಹೋಯ್ತು.  ತುಂಬಾ ಕಷ್ಟ ನನಗೆ.  ಕಣ್ಣು ಪರೀಕ್ಷೆ ಮಾಡಲು ಹೋದರೆ,  ಲಿಪಿ ಕೂಡಾ ಅವರದ್ದೇ ಭಾಷೆ.  ಮನೆಯಿಂದ ಕನ್ನಡಕದ ಸಂಖ್ಯೆ ತರಿಸಿ.. ಮಾಡಿಸಿಕೊಳಬೇಕಿತ್ತು..  ತಕ್ಷಣ ಮಾಡಿಕೊಟ್ಟರು.  ಇಲ್ಲಿ ಅರಿತ ವಿಷಯ, ಭಾಷಾಭಿಮಾನ ಇದ್ದರೂ, ಬೇರೆಯವರಿಗೆ ಸಹಾಯ ಮಾಡುವ ಅವರ ಮನೋಧರ್ಮ.  


ಈ ಎರಡೂ ಅನುಭವಗಳು ನನ್ನ ಸಂಕಲ್ಪ ದೃಢ ಮಾಡಿದೆ.  ಆದಷ್ಟೂ ಕನ್ನಡದಲ್ಲಿಯೇ ವ್ಯವಹಾರ.   ನಾವು ಕನ್ನಡ ಬಿಟ್ಟರೆ, ಇಂಗ್ಲೆಂಡ್ ನಲ್ಲಿ ಮಾತಾಡುತ್ತಾರ ?! ಸಂಖ್ಯೆ ಮರೆತಿದ್ದೇವೆ.  ನಿಮ್ಮ ಮೊಬೈಲ್ ಸಂಖ್ಯೆ ಕನ್ನಡದಲ್ಲಿ ಹೇಳಿ ನೋಡುವ !!  ತರಕಾರಿ, ಹಣ್ಣುಗಳನ್ನು ಕನ್ನಡದಲ್ಲಿಯೇ ಹೇಳೋಣ.  ಹತ್ತಾರು ವರ್ಷಗಳ ಕಾಲ ಬೆಂಗಳೂರಿನಲ್ಲಿ ಇದ್ದರೂ ಕನ್ನಡ ಕಲಿಯುವ ಪ್ರಮೇಯ ಬರುವುದಿಲ್ಲ.  ಕಲಿಸೋಣ. ನಾವು ಅವರ ಭಾಷೆ ಮಾತಾಡುವ ಅಗತ್ಯ ಇಲ್ಲ


ಸಿರಿಗನ್ನಡಂ ಗೆಲ್ಗೆ.. ಸಿರಿಗನ್ನಡಂ ಬಾಳ್ಗೆ, ಸಿರಿಗನ್ನಡಂ ಗಲ್ಲಿ ಗಲ್ಲಿಗೆ... ಏನಂತೀರ ?!!