ಈ ಇಬ್ಬರು ನನ್ನೊಡನೆ ಕೆಲಸ ಮಾಡುವವರು. ತರಬೇತಿಗಾಗಿ ಕಛೇರಿಯಿಂದ ಹೊರಗಡೆ ಹೋಗಿದ್ದರು. ಬಾಯಿ ಚಪಲ. ಸಸ್ಯಾಹಾರಿಯಾಗಿದ್ದವರು ಮಾಂಸ ತಿಂದಿದ್ದರು. ಒಬ್ಬನೇನೋ ಜೀರ್ಣ ಮಾಡಿಕೊಂಡ. ಇನ್ನೊಬ್ಬ ಒಂದು ವಾರ ರಜ. ಪಾಯಿಕಾನೆಗೆ ದಂಡಯಾತ್ರೆ ಮಾಡಿದ. ಆಗ ನೆನಪಾದದ್ದು ಈ ಕಥೆ - ವಾತಾಪಿ ಜೀರ್ಣವಾಗು - ಮಹಾಭಾರತದ ಉಪಕಥೆಯಲ್ಲೊಂದು. ಪ್ರಚಲಿತ ಕಥೆ. ಗೂಗಲ್ ನ ಸಹಾಯ ಪಡೆದಿದ್ದೇನೆ. ಹೀಗೆ ಕಥೆಗಳನ್ನು ಮೆಲುಕು ಹಾಕುವ ಸಾಹಸ ನನ್ನದು.
ವಾತಾಪಿ, ಇಲ್ವಲ ರಾಕ್ಷಸ ಸಹೋದರರು. ಇಂದ್ರ ಪದವಿಗಾಗಿ ಸಂತ, ಸಾದುಗಳನ್ನು ಬೇಡಿಕೊಂಡರು. ಅವರು ಹಾಗೆ ಮಾಡದಿದ್ದಾಗ, ಅವರಿಗೆ ಉಪದ್ರವ ಕೊಡಲು ಶುರು ಮಾಡಿದರು. ಇವರಿಬ್ಬರಗೂ ವಿಶೇಷ ಶಕ್ತಿ ಇದ್ದಿತು. ವಾತಾಪಿಗೆ ದೇಹವನ್ನು ಮಾರ್ಪಡಿಸಿಕೊಳ್ಳುವ ಶಕ್ತಿ ಇತ್ತು. ಇಲ್ವಲನಿಗೆ ಒಂದು ರೀತಿಯ ಸಂಜೀವಿನಿ ವಿದ್ಯೆ ತಿಳಿದಿತ್ತು. ವಾತಾಪಿ ಕುರಿಯಾಗಿ ಬದಲಾಗುತಿದ್ದ. ಅದನ್ನು ಕಡಿದು, ಅಡುಗೆ ಮಾಡಿ, ಇಲ್ವಲ, ಆಹ್ವಾನಿತರಾದ ಬ್ರಾಹ್ಮಣ ಸಂತರಿಗೆ ಉಣಬಡಿಸುತ್ತಿದ್ದ.

( ಬ್ರಾಹ್ಮಣರು, ಸಂತರು ಮಾಂಸ ತಿನ್ನುತಿದ್ದರು ಎನ್ನುವವರ ಮಾತನ್ನು ಈ ವಿಷಯ ಸ್ಪಷ್ಟೀಕರಿಸುತ್ತದೆ ! ) ಊಟ ಮಾಡಿದ ನಂತರ ತನ್ನ ಸಂಜೀವಿನಿ ಮಂತ್ರ ಪಠಿಸಿ, 'ವಾತಾಪಿ ಹೊರಗೆ ಬಾ' ಎನ್ನುತ್ತಿದ್ದ. ಹೊಟ್ಟೆಯಲ್ಲಿ ಮಾಂಸವಾಗಿದ್ದ ವಾತಾಪಿ, ಉದರ ಸೀಳಿ ಕುರಿಯಾಗಿ ಬಂದು, ಆ ಬ್ರಾಹ್ಮಣರನ್ನು ಕೊಲ್ಲುತಿದ್ದ. ಇದೇ ರೀತಿ ಹಲವಾರು ಸಂತರನ್ನು ಕೊಂದು ವಿಕೃತ ಖುಷಿ ಪಡುತಿದ್ದರು. ( ಮಾಡಬಾರದ್ದು ಮಾಡಿದರೆ, ಆಗಬಾರದ್ದು ಆಗುತ್ತದೆ ಅಲ್ಲವೇ ? )
ಹೀಗಿರುವಾಗ, ಅಗಸ್ತ್ಯ ಋಷಿಗಳು ಅವರ ಮನೆಗೆ ಬಂದರು. ಅವರ ದಿವ್ಯ ದೃಷ್ಟಿಗೆ ಇವರ modus operandi ತಿಳಿದಿತ್ತು. ಎಂದಿನಂತೆ ವಾತಾಪಿ ಕುರಿಯಾದ, ಅದರ ಮಾಂಸದಿಂದ ಇಲ್ವಲ ಅಡುಗೆ ಮಾಡಿ ಬಡಿಸಿದ. ಅಗಸ್ತ್ಯರು ಭೋಜನ ಮಾಡಿದರು. ಇಲ್ವಲ ಮಂತ್ರ ಪಠಿಸುವ ಮೊದಲೇ, ಅಗಸ್ತ್ಯರು ' ವಾತಾಪಿ ಜೀರ್ಣವಾಗಿ ಹೋಗು' ಎಂದು ಹೇಳಿದರು. ವಾತಾಪಿ ಜೀರ್ಣವಾಗಿಹೋದ. ಮತ್ತೆ ಇಲ್ವಲ ಏನೇನೋ ಪ್ರಯತ್ನ ಮಾಡಿದ. ಅಗಸ್ತ್ಯರ ಕೃತ್ಯದಿಂದ ಏನು ಮಾಡಿದರೂ ಸಹೋದರನನ್ನು ಉಳಿಸಿಕೊಳ್ಳಲಾಗಲಿಲ್ಲಾ. ಅದೇ ದುಃಖದಲ್ಲಿ, ಅವನು ಅಸುನೀಗಿದ
ಹೀಗೆ, ನೀವೂ ಅಸಮಾನ್ಯವಾದದನ್ನು ತಿನ್ನುವ ಚಪಲ ಇದ್ದರೆ, ಜೀರ್ಣ ಮಾಡಿಕೊಳ್ಳುವ ಮಂತ್ರ ತಂತ್ರ ತಿಳಿದುಕೊಳ್ಳಿ :) ಇಲ್ಲದಿದ್ದರೆ ಘಸ್ನಿ, ಘೋರಿಗಳ ಸಮ ದಂಡಯಾತ್ರೆ ಮಾಡಬೇಕಾಗಬಹುದು
ಹುಷಾರ್ !
ಹುಷಾರ್ !